ಬಿಹಾರದ ಆರೋಗ್ಯ ಸಚಿವರಿಗೇ ಟ್ರೀಟ್ಮೆಂಟ್ ಬೇಕು; ಸಚಿವರಾಗ್ತಿದ್ದಂತೆಯೇ ಟ್ರೋಲ್, ಅಪಹಾಸ್ಯಕ್ಕೆ ನಿಶಾಂತ್ ಕುಮಾರ್ ಗುರಿ, ಆಗಿದ್ದೇನು?

ನಿಶಾಂತ್ ಕುಮಾರ್ ತಂದೆ ನಿತೀಶ್ ಕುಮಾರ್ ಈ ಹಿಂದೆ ಸಿಎಂ ಆಗಿದ್ದಾಗ ಈ ಹಿಂದೆ ಹಲವು ಕಾರಣಗಳಿಂದಾಗಿ ವಿವಾದ, ಅಪಹಾಸ್ಯಕ್ಕೆ ಗುರಿಯಾಗಿದ್ದರು.
Nishanth Kumar
ನಿಶಾಂತ್ ಕುಮಾರ್ online desk
Updated on

ಪಾಟ್ನ: ಮಾಜಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರು ಮೇ 7, 2026 ರಂದು ಬಿಹಾರದ ಆರೋಗ್ಯ ಸಚಿವರಾಗಿ ನೇಮಕಗೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

ನಿಶಾಂತ್ ಕುಮಾರ್ ತಂದೆ ನಿತೀಶ್ ಕುಮಾರ್ ಈ ಹಿಂದೆ ಸಿಎಂ ಆಗಿದ್ದಾಗ ಈ ಹಿಂದೆ ಹಲವು ಕಾರಣಗಳಿಂದಾಗಿ ವಿವಾದ, ಅಪಹಾಸ್ಯಕ್ಕೆ ಗುರಿಯಾಗಿದ್ದರು.

ಈಗ ನಿಶಾಂತ್ ಕುಮಾರ್ ಸಹ ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಟೀಕೆ ಮತ್ತು ವ್ಯಂಗ್ಯಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ

ತಪ್ಪು ಮಾಹಿತಿ: ಸಂದರ್ಶನವೊಂದರಲ್ಲಿ ನಿಶಾಂತ್ 2025 ರ ಚುನಾವಣೆಯ ಎನ್ನುವ ಬದಲು "1925 ರ ಚುನಾವಣೆಯಲ್ಲಿ" ಜೆಡಿಯು ಜಯಗಳಿಸಿದೆ ಇದಕ್ಕಾಗಿ ಮತದಾರರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದರು. ಅಲ್ಲದೆ, ಜೆಡಿಯು "200 ಸ್ಥಾನಗಳನ್ನು" ಗೆದ್ದಿದೆ ಎಂದು ಅವರು ಹೇಳಿಕೊಂಡಿದ್ದರು (ಇದು ಸತ್ಯಕ್ಕೆ ದೂರವಾಗಿದೆ). ಇದರಿಂದ ನೆಟ್ಟಿಗರು ಅವರನ್ನು "ಟೈಮ್ ಟ್ರಾವೆಲರ್" (ಕಾಲದ ಮೂಲಕ ಪ್ರಯಾಣಿಸುವವನು) ಎಂದು ಲೇವಡಿ ಮಾಡುತ್ತಿದ್ದಾರೆ.

Body language: ಗಾಂಧಿ ಮೈದಾನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅವರು "ನಿದ್ದೆಗಣ್ಣಿನಲ್ಲಿರುವಂತೆ" ಮತ್ತು "ಅಸ್ವಸ್ಥರಂತೆ" ಕಂಡಿದ್ದರು. ಸಂಪುಟ ಸೇರಿದ ನಿಶಾಂತ್ ಕುಮಾರ್ ಗೆ ಆರೋಗ್ಯ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಆದರೆ ಇಷ್ಟು "ದುರ್ಬಲವಾಗಿ" ಕಾಣುವ ವ್ಯಕ್ತಿ ಇಡೀ ಆರೋಗ್ಯ ಇಲಾಖೆಯನ್ನು ಹೇಗೆ ನಿಭಾಯಿಸುತ್ತಾರೆ, ಮೊದಲು ಅವರಿಗೇ ತುರ್ತಾಗಿ ಟ್ರೀಟ್ಮೆಂಟ್ ಅಗತ್ಯವಿದೆ ಎಂದು ಜನರು ವ್ಯಂಗ್ಯವಾಡುತ್ತಿದ್ದಾರೆ.

ವಂಶಪಾರಂಪರ್ಯ ರಾಜಕಾರಣ: ಏಪ್ರಿಲ್ 2026 ರಲ್ಲಿ ಜೆಡಿಯು ಸೇರ್ಪಡೆಯಾದ ತಕ್ಷಣವೇ ಅವರಿಗೆ ಪ್ರಮುಖ ಸಚಿವ ಸ್ಥಾನ ನೀಡಿದ್ದನ್ನು ಜನರು "ನೆಪೋಟಿಸಂ" (ವಂಶಪಾರಂಪರ್ಯ ರಾಜಕಾರಣ) ಎಂದು ಟೀಕಿಸುತ್ತಿದ್ದಾರೆ.

ಇತರ ಎಡವಟ್ಟುಗಳು: ಅಧಿಕೃತ ಕಾರ್ಯಕ್ರಮದ ಸಮಯದಲ್ಲಿ ನಿಶಾಂತ್ ಕುಮಾರ್ ಬೇರೊಬ್ಬ ಸಚಿವರಿಗೆ ಮೀಸಲಿಟ್ಟ ಕುರ್ಚಿಯಲ್ಲಿ ಕುಳಿತಿದ್ದು ಮತ್ತು ಪ್ರಧಾನಿ ಮೋದಿಯವರನ್ನು "ಮುಖ್ಯಮಂತ್ರಿ" ಎಂದು ಸಂಬೋಧಿಸಿದ್ದು ಟ್ರೋಲ್‌ಗೆ ಆಹಾರವಾಗಿದೆ.

ಆದರೆ ಅವರ ಬೆಂಬಲಿಗರು ನಿಶಾಂತ್ ಸಮರ್ಥನೆಗೆ ಮುಂದಾಗಿದ್ದಾರೆ. ನಿಶಾಂತ್ ಕುಮಾರ್ ಅವರು ಬಿಐಟಿ ಮೆಸ್ರಾದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕೇವಲ ಇಂತಹ ಸಣ್ಣ ತಪ್ಪುಗಳಿಂದ ಅವರ ಸಾಮರ್ಥ್ಯವನ್ನು ಅಳೆಯಬಾರದು ಎಂದು ವಾದಿಸುತ್ತಿದ್ದಾರೆ.

Nishanth Kumar
ಕೊನೆಗೂ ಬಿಹಾರ ಸಂಪುಟ ಸೇರಲು ನಿತೀಶ್ ಕುಮಾರ್ ಪುತ್ರ ಒಪ್ಪಿಗೆ; ನೂತನ ಸಚಿವರಾಗಿ ನಾಳೆ ಪ್ರಮಾಣ ಸಾಧ್ಯತೆ

ನಿಶಾಂತ್ ಶೈಕ್ಷಣಿಕ ಹಿನ್ನೆಲೆ

ಪ್ರಾಥಮಿಕ ಶಿಕ್ಷಣ: ಪಾಟ್ನಾದ ಸೇಂಟ್ ಕರೆನ್ಸ್ ಶಾಲೆ (St. Karen's School) ಮತ್ತು ಮಸೂರಿಯ ಮಾನವ ಭಾರತಿ ಇಂಡಿಯಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಿಶಾಂತ್ ಕುಮಾರ್ ಶಾಲಾ ಶಿಕ್ಷಣ ಮುಗಿಸಿದ್ದಾರೆ.

ಉನ್ನತ ಶಿಕ್ಷಣ: ಜಾರ್ಖಂಡ್‌ನ ರಾಂಚಿಯಲ್ಲಿರುವ ಪ್ರತಿಷ್ಠಿತ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT), ಮೆಸ್ರಾ ದಿಂದ ನಿಶಾಂತ್ ಕುಮಾರ್ ಸಾಫ್ಟ್‌ವೇರ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ವೃತ್ತಿ: ಅವರು ವೃತ್ತಿಯಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ರಾಜಕೀಯಕ್ಕೆ ಬರುವ ಮೊದಲು ಖಾಸಗಿ ಜೀವನಕ್ಕೆ ಆದ್ಯತೆ ನೀಡಿದ್ದರು. 2007 ರಲ್ಲಿ ನಿಶಾಂತ್ ಕುಮಾರ್ ತಮ್ಮ ತಾಯಿಯನ್ನು ಕಳೆದುಕೊಂಡರು. ಮಂಜು ಸಿನ್ಹಾ. ಅವರು ವೃತ್ತಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದರು ಮತ್ತು 2007 ರಲ್ಲಿ ತೀವ್ರ ನ್ಯುಮೋನಿಯಾದಿಂದ ನಿಧನರಾದರು.

ವೈಯಕ್ತಿಕ ಜೀವನ: ನಿಶಾಂತ್ ಕುಮಾರ್ ನಿತೀಶ್ ಕುಮಾರ್- ಮಂಜು ಸಿನ್ಹಾ ದಂಪತಿಯ ಏಕೈಕ ಪುತ್ರ. 1975 ರ ಜುಲೈ 20 ರಂದು ಜನಿಸಿದ ಇವರು 50 ವರ್ಷ ವಯಸ್ಸಿನವರಾಗಿದ್ದು, ಇನ್ನೂ ಅವಿವಾಹಿತರಾಗಿದ್ದಾರೆ.

ಆಸಕ್ತಿಗಳು: ದೀರ್ಘಕಾಲದವರೆಗೆ ಸಾರ್ವಜನಿಕ ಜೀವನದಿಂದ ದೂರವಿದ್ದ ಇವರು, ಆಧ್ಯಾತ್ಮ ಮತ್ತು ಯೋಗದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ನಿಶಾಂತ್ ಕುಮಾರ್ ಅವರು ಇತ್ತೀಚೆಗಷ್ಟೇ ಅಂದರೆ ಮಾರ್ಚ್ 2026 ರಲ್ಲಿ ಅಧಿಕೃತವಾಗಿ ಜೆಡಿಯು ಸೇರುವ ಮೂಲಕ ಸಕ್ರಿಯ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com