17 ವರ್ಷದ ಬಾಲಕಿ ಜೊತೆ ರಿಲೇಶನ್ ಶಿಪ್: ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರನ ವಿರುದ್ಧ ಪೋಕ್ಸೋ ಕೇಸ್ ದಾಖಲು

ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಭಾಗೀರಥ್ ಅವರು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹೈದರಾಬಾದ್‌ನ ಪೆಟ್ ಬಶೀರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Bandi Sanjay Kumar
ಬಂಡಿ ಸಂಜಯ್ ಕುಮಾರ್
Updated on

ಹೈದರಾಬಾದ್: 17 ವರ್ಷದ ಬಾಲಕಿ ಜೊತೆ ರಿಲೇಶನ್ ಶಿಪ್ ನಲ್ಲಿದ್ದ ಆರೋಪದ ಮೇಲೆ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರನ ವಿರುದ್ಧಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಭಾಗೀರಥ್ ಅವರು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹೈದರಾಬಾದ್‌ನ ಪೆಟ್ ಬಶೀರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮ್ಮ ವಿರುದ್ಧದ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ ಭಾಗೀರಥ್ ಅವರು, ಹದಿಹರೆಯದ ಬಾಲಕಿ ಹಾಗೂ ಆಕೆಯ ಪೋಷಕರಿಂದ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪ ಹೊರಿಸಿದ್ದಾರೆ.

Bandi Sanjay Kumar
ಬಾಲಕಿ ಮೇಲೆ ಅತ್ಯಾಚಾರ: ಕೇವಲ 40 ದಿನದಲ್ಲೇ ತೀರ್ಪು ಪ್ರಕಟ; ಕಾಮುಕನಿಗೆ ಗಲ್ಲು ಶಿಕ್ಷೆ!

17 ವರ್ಷದ ಬಾಲಕಿಯ ತಾಯಿಯ ಪ್ರಕಾರ, ಆಕೆಯ ಮಗಳ ಜೊತೆ ಸಂಬಂಧ ಹೊಂದಿದ್ದ ಸಂಜಯ್ ಕುಮಾರ್ ಅವರ ಮಗ ಭಾಗೀರಥ್, ಆಕೆಯ ಮೈಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಕೇಂದ್ರ ಸಚಿವರ ಪುತ್ರ ಹಾಗೂ ಬಾಲಕಿ ನಡುವೆ ಸುಮಾರು ಏಳೆಂಟು ತಿಂಗಳ ಹಿಂದೆ ರಿಲೇಶನ್ ಶಿಪ್ ಪ್ರಾರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿನಿಯಾಗಿರುವ ಬಾಲಕಿಯನ್ನು ಪೊಲೀಸರು ಇನ್ನೂ ಪರೀಕ್ಷಿಸಬೇಕಾಗಿದೆ.

ಏತನ್ಮಧ್ಯೆ, ಭಾಗೀರಥ್ ಅವರು ಕರೀಂನಗರ ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ತನಗೆ ಪರಿಚಯವಾದ ಹುಡುಗಿ ತನ್ನ ಕುಟುಂಬ ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳಿಗೆ ಆಹ್ವಾನಿಸಿದ್ದಳು.

ಕಾಮನ್ ಸ್ನೇಹಿತರ ಮೂಲಕ ಹುಡುಗಿಯನ್ನು ಭೇಟಿಯಾದೆ ಮತ್ತು ಕಾಲಾನಂತರದಲ್ಲಿ ಇಬ್ಬರ ನಡುವೆ ಸ್ನೇಹ ಸಂಬಂಧ ಬೆಳೆಯಿತು. ಇಬ್ಬರ ಕುಟುಂಬಗಳು ಒಟ್ಟಿಗೆ ಬೆರೆಯುತ್ತಿದ್ದರು ಮತ್ತು ವಿಜಯವಾಡ, ಅರುಣಾಚಲಂ ಹಾಗೂ ತಿರುಮಲದಲ್ಲಿನ ದೇವಾಲಯಗಳಿಗೆ ಪ್ರಯಾಣಿಸುತ್ತಿದ್ದರು ಎಂದು ಭಾಗೀರಥ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಹುಡುಗಿಯ ಪೋಷಕರು, ತಮ್ಮ ಮಗಳನ್ನು ಮದುವೆಯಾಗುವಂತೆ ಒತ್ತಡ ಹೇರಿದರು. ಆದರೆ ನಾನು ನಿರಾಕರಿಸಿದಾಗ, ತನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದರು. ಒಂದು ಸಂದರ್ಭದಲ್ಲಿ ಹುಡುಗಿಯ ತಂದೆಗೆ 50,000 ರೂ.ಗಳನ್ನು ನೀಡಿದ್ದೇನೆ. ಆದರೆ ನಂತರ ಕುಟುಂಬವು 5 ಕೋಟಿ ರೂ. ಕೇಳಿತ್ತು. ಆ ಅಷ್ಟು ಹಣ ನೀಡದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹುಡುಗಿಯ ತಾಯಿ ಬೆದರಿಕೆ ಹಾಕಿದ್ದಳು. ಇದೀಗ ಲೈಂಗಿಕ ದೌರ್ಜನ್ಯ ಆರೋಪ ಮಾಡುತ್ತಿದ್ದಾರೆ ಎಂದು ಸಚಿವರ ಪುತ್ರ ಹೇಳಿದ್ದಾರೆ.

ಭಾಗೀರಥ್ ಅವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com