'ರಾಷ್ಟ್ರದ ಹಿತದೃಷ್ಟಿಯಿಂದ': 'ಭಾಷಣ ಮಾಡೋದಲ್ಲ.. ಮೊದಲು ನೀವು ಮಾಡಿ ತೋರಿಸಿ': ಪ್ರಧಾನಿ ಮೋದಿಗೆ ಕಾಂಗ್ರೆಸ್ ತಿರುಗೇಟು!

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳ ನಡುವೆಯೇ ಅವರು ನೀಡಿದ 7 ಅಂಶಗಳ ಮನವಿಯ ಕುರಿತು ವ್ಯಂಗ್ಯ ಮಾಡಿರುವ ಕಾಂಗ್ರೆಸ್ ವ್ಯಂಗ್ಯ ಮಾಡಿದೆ.
Congress to PM Modi on foreign travel
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ರಾಷ್ಟ್ರದ ಹಿತದೃಷ್ಟಿಯಿಂದ ಎಂದು ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಭಾಷಣ ಮಾಡೋದಲ್ಲ.. ಮೊದಲು ನೀವು ಮಾಡಿ ತೋರಿಸಿ ಎಂದು ಕಿಡಿಕಾರಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳ ನಡುವೆಯೇ ಅವರು ನೀಡಿದ 7 ಅಂಶಗಳ ಮನವಿಯ ಕುರಿತು ವ್ಯಂಗ್ಯ ಮಾಡಿರುವ ಕಾಂಗ್ರೆಸ್ ಪಕ್ಷ, ಭಾಷಣ ಮಾಡೋದಲ್ಲ.. ಮೊದಲು ನೀವು ಮಾಡಿ ತೋರಿಸಿ' ಎಂದು ಸವಾಲೆಸೆದಿದೆ.

ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ, “ದೇಶದ ಹಿತದೃಷ್ಟಿಯಿಂದ ನೀವು ಬೋಧಿಸುವುದನ್ನು ಮೊದಲು ನೀವು ಪಾಲಿಸಿ” ಎಂದು ಪೋಸ್ಟ್ ಮಾಡಿದೆ.

Congress to PM Modi on foreign travel
'ಇನ್ನೊಂದ್ ವರ್ಷ ಖರೀದಿ ಮಾಡ್ಬೇಡಿ..'.: ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಪಾತಾಳಕ್ಕೆ ಕುಸಿದ ಚಿನ್ನಾಭರಣ ಷೇರು

ಇಷ್ಟಕ್ಕೂ ಮೋದಿ ಹೇಳಿದ್ದೇನು?

ಪಶ್ಚಿಮ ಏಷ್ಯಾದ ಸಂಘರ್ಷದ ದುಷ್ಪರಿಣಾಮಗಳನ್ನು ಎದುರಿಸಲು ಭಾನುವಾರ ಪ್ರಧಾನಿ ಮೋದಿ ಇಂಧನದ ಮಿತ ಬಳಕೆ, ಚಿನ್ನ ಖರೀದಿಯನ್ನು ಮುಂದೂಡುವುದು ಮತ್ತು ವಿದೇಶ ಪ್ರವಾಸವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಸೂಚಿಸಿದ್ದರು.

ತೆಲಂಗಾಣ ಬಿಜೆಪಿ ಆಯೋಜಿಸಿದ್ದ ಹೈದರಾಬಾದ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಜನತೆಗೆ ಸಲಹೆ ನೀಡಿದ್ದರು. ಅಲ್ಲದೆ ನಗರಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ಹೆಚ್ಚು ಬಳಸುವುದು, ಕಾರ್‌ಪೂಲಿಂಗ್ ಮಾಡುವುದು, ಎಲೆಕ್ಟ್ರಿಕ್ ವಾಹನಗಳ (EV) ಬಳಕೆಯನ್ನು ಹೆಚ್ಚಿಸುವುದು, ಸರಕು ಸಾಗಣೆಗೆ ರೈಲು ಸೇವೆ ಬಳಸುವುದು ಹಾಗೂ ಪಶ್ಚಿಮ ಏಷ್ಯಾ ಸಂಕಷ್ಟದ ನಡುವೆ ವಿದೇಶಿ ವಿನಿಮಯ ಉಳಿಸಲು ಮನೆಯಿಂದ ಕೆಲಸ ಮಾಡುವ ಪದ್ಧತಿಯನ್ನು ಪುನರಾರಂಭಿಸುವಂತೆ ಅವರು ಕರೆ ನೀಡಿದ್ದರು.

“ಕೋವಿಡ್ ಸಮಯದಲ್ಲಿ ನಾವು ವರ್ಕ್ ಫ್ರಮ್ ಹೋಮ್, ವರ್ಚುವಲ್ ಸಭೆಗಳು, ವಿಡಿಯೋ ಕಾನ್ಫರೆನ್ಸ್‌ಗಳಿಗೆ ಹೊಂದಿಕೊಂಡಿದ್ದೆವು. ಈಗ ಅವನ್ನು ಮತ್ತೆ ಆರಂಭಿಸುವ ಅವಶ್ಯಕತೆ ಇದೆ. ವಿದೇಶಿ ವಿನಿಮಯ ಉಳಿಸಿ ದೇಶವನ್ನು ಆತ್ಮನಿರ್ಭರಗೊಳಿಸಲು ಅಡುಗೆ ಎಣ್ಣೆ ಬಳಕೆಯನ್ನು ಕಡಿಮೆ ಮಾಡುವುದು, ರಾಸಾಯನಿಕ ರಸಗೊಬ್ಬರ ಬಳಕೆಯನ್ನು ತಗ್ಗಿಸುವುದು, ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದು ಹಾಗೂ ಸ್ವದೇಶಿ ಉತ್ಪನ್ನಗಳನ್ನು ಹೆಚ್ಚು ಬಳಸುವಂತೆ ಅವರು ಕರೆ ನೀಡಿದರು.

ಪಶ್ಚಿಮ ಏಷ್ಯಾದ ಸಂಕಷ್ಟದ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸುವ ಅಗತ್ಯವಿದೆ ಎಂದು ಒತ್ತಿಹೇಳಿದ ಮೋದಿ, ಒಂದು ವರ್ಷದವರೆಗೆ ಚಿನ್ನ ಖರೀದಿ ಮತ್ತು ವಿದೇಶ ಪ್ರವಾಸವನ್ನು ಮುಂದೂಡುವಂತೆ ಜನರಿಗೆ ಮನವಿ ಮಾಡಿದರು.

ಪ್ರಧಾನಿ ಮೋದಿ ಅವರ ಈ ಸಲಹೆಗಳನ್ನೇ ಕಾಂಗ್ರೆಸ್ ಇದೀಗ ವ್ಯಂಗ್ಯ ಮಾಡಿದ್ದು, ಮೊದಲು ನೀವು ಅನುಸರಿಸುವಂತೆ ಸವಾಲೆಸೆದಿದೆ. ದೇಶದ ಹಿತದೃಷ್ಟಿಯಿಂದ ವಿದೇಶ ಪ್ರಯಾಣ ನಿಲ್ಲಿಸಿ.. ಎಂದು ಕಾಂಗ್ರೆಸ್ ಟಾಂಗ್ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com