ಹೈಕೋರ್ಟ್ ನಲ್ಲೂ Umar Khalid ಗೆ ಹಿನ್ನಡೆ: ಅನಾರೋಗ್ಯ ಪೀಡಿತ ತಾಯಿ ಆರೈಕೆ ಜಾಮೀನು ಅರ್ಜಿ ವಜಾ!

2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಆರೋಪಿ ಆಗಿರುವ ಮಾಜಿ JNU ವಿದ್ಯಾರ್ಥಿ ಖಾಲಿದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ.
Delhi Court dismisses jailed activist Umar Khalid's bail plea
ಉಮರ್ ಖಾಲಿದ್
Updated on

ನವದೆಹಲಿ: ಜೈಲಿನಲ್ಲಿರುವ ವಿದ್ಯಾರ್ಥಿ ಸಂಘಟನೆ ಹೋರಾಟಗಾರ ಉಮರ್ ಖಾಲಿದ್ ಗೆ ಮತ್ತೆ ಹಿನ್ನಡೆಯಾಗಿದ್ದು, ಅನಾರೋಗ್ಯ ಪೀಡಿತ ಆರೈಕೆಗಾಗಿ ಸಲ್ಲಿಕೆಯಾಗಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿ ವಜಾ ಮಾಡಿದೆ.

2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಆರೋಪಿ ಆಗಿರುವ ಮಾಜಿ JNU ವಿದ್ಯಾರ್ಥಿ ಖಾಲಿದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜ್‌ಪಾಯಿ, ಜಾಮೀನು ಕೋರಿ ನೀಡಿರುವ ಕಾರಣಗಳು ಸಮಂಜಸವಾಗಿಲ್ಲ ಎಂದು ಹೇಳಿದ್ದಾರೆ.

ಉಮರ್ ಖಾಲಿದ್ ಅವರು ತಮ್ಮ ಮಾವನ 40ನೇ ದಿನದ ಮರಣೋತ್ತರ ವಿಧಿ (ಚೆಹ್ಲುಂ)ಗೆ ಹಾಜರಾಗಲು ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿರುವ ತಾಯಿಯ ಆರೈಕೆಗಾಗಿ 15 ದಿನಗಳ ಮಧ್ಯಂತರ ಜಾಮೀನು ಕೋರಿದ್ದರು. ಆದರೆ ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕಿರಿಸಿದೆ.

ತಮ್ಮ ಆದೇಶದಲ್ಲಿ ನ್ಯಾಯಾಧೀಶರು, “ಅವರ ಮಾವನ ಚೆಹ್ಲುಂ ಸಮಾರಂಭಕ್ಕೆ ಹಾಜರಾಗುವುದು ಅಷ್ಟು ಅಗತ್ಯವಲ್ಲ. ಅರ್ಜಿದಾರರ ತಕ್ಷಣದ ಕುಟುಂಬ ಸಂಬಂಧಿಯ ಸಮಾರಂಭವಾಗಿದ್ದರೆ ಪರಿಸ್ಥಿತಿ ಬೇರೆ ಆಗುತ್ತಿತ್ತು. ಮಾವನೊಂದಿಗೆ ಇಷ್ಟು ಆಪ್ತ ಸಂಬಂಧ ಇದ್ದಿದ್ದರೆ, ಅವರ ಮರಣದ ತಕ್ಷಣವೇ ಬಿಡುಗಡೆಗಾಗಿ ಮನವಿ ಮಾಡಬೇಕಾಗಿತ್ತು, ಈಗ ಬಹಳ ಸಮಯದ ನಂತರ ಅಲ್ಲ ಎಂದು ಕೂಡ ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎಂದು ಹೇಳಿದ್ದಾರೆ.

“ಸಂಬಂಧ ಇಷ್ಟು ಆಪ್ತವಾಗಿದ್ದರೆ, ಮಾವನ ಮರಣದ ಸಮಯದಲ್ಲೇ ಅರ್ಜಿದಾರರು ಬಿಡುಗಡೆ ಕೋರುತ್ತಿದ್ದರು. ಈಗ ಬಹಳ ತಡವಾಗಿ ಅರ್ಜಿ ಸಲ್ಲಿಸಿರುವುದರಿಂದ, ಈ ಕಾರಣ ನ್ಯಾಯಸಮ್ಮತವೆಂದು ನ್ಯಾಯಾಲಯ ಕಂಡುಕೊಳ್ಳುವುದಿಲ್ಲ” ಎಂದು ನ್ಯಾಯಾಧೀಶರು ಹೇಳಿದರು.

'ಉಮರ್ ಖಾಲಿದ್ ಸಹೋದರಿಯರೂ ಕೂಡ ಇದ್ದಾರೆ'

ಖಾಲಿದ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಅನಿರುದ್ಧ ಮಿಶ್ರಾ, ಆರೋಪಿಗೆ ಐದು ಸಹೋದರಿಯರು ಮತ್ತು ತಂದೆ ಇದ್ದು, ಅವರು ತಾಯಿಯ ಶಸ್ತ್ರಚಿಕಿತ್ಸೆಗೆ ಮೊದಲು ಮತ್ತು ನಂತರ ಸಹಾಯ ಮಾಡಬಹುದು ಎಂದು ವಾದಿಸಿದರು.

“ಈ ಶಸ್ತ್ರಚಿಕಿತ್ಸೆ ಗಂಭೀರವಾದುದಲ್ಲ. ಕೇವಲ ಸ್ಥಳೀಯ ಅನಸ್ತೀಷಿಯಾ ನೀಡುವ ಸಣ್ಣ ಶಸ್ತ್ರಚಿಕಿತ್ಸೆಯಷ್ಟೇ. ಆದ್ದರಿಂದ ಆರೋಪಿಯ ಸಾನ್ನಿಧ್ಯ ಅಗತ್ಯವಿಲ್ಲ” ಎಂದು ಮಿಶ್ರಾ ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಾಸಿಕ್ಯೂಷನ್ ವಾದಗಳನ್ನು ಪರಿಗಣಿಸಿದ ನ್ಯಾಯಾಲಯ, ಖಾಲಿದ್ ಅವರೇ ತಮಗೆ ಐದು ಸಹೋದರಿಯರು ಮತ್ತು ತಂದೆ ಇದ್ದಾರೆ ಎಂದು ಹೇಳಿರುವುದನ್ನು ಉಲ್ಲೇಖಿಸಿತು. “ಇದಲ್ಲದೆ, ಪ್ರಾಸಿಕ್ಯೂಷನ್ ಹೇಳಿದಂತೆ, ಇದು ಕೇವಲ ಗಡ್ಡೆಗಳನ್ನು ತೆಗೆದುಹಾಕುವ ಸರಳ ಶಸ್ತ್ರಚಿಕಿತ್ಸೆ. ಅರ್ಜಿದಾರರಿಂದ ವಿಶೇಷ ಸಹಾಯದ ಅಗತ್ಯತೆ ಕಂಡುಬರುವುದಿಲ್ಲ” ಎಂದು ಹೇಳಿ ನ್ಯಾಯಾಲಯ ಜಾಮೀನು ನಿರಾಕರಿಸಿತು.

Delhi Court dismisses jailed activist Umar Khalid's bail plea
Uttar Pradesh: ಜಾಮೀನಿನ ಮೇಲೆ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ರಾಜಮರ್ಯಾದೆ; ಭುಜದ ಮೇಲೆ ಹೊತ್ತು ಮೆರವಣಿಗೆ! Video

ಗಲಭೆ ಪ್ರಕರಣದ ಆರೋಪಿ

ಉಮರ್ ಖಾಲಿದ್ ಫೆಬ್ರವರಿ 2020ರ ಈಶಾನ್ಯ ದೆಹಲಿ ಸಾಮುದಾಯಿಕ ಗಲಭೆಗಳ ಸಂಚು ಪ್ರಕರಣದ ಆರೋಪಿಯಾಗಿದ್ದಾರೆ. ಅವರಿಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಹಾಗೂ IPC ವಿಧಿಗಳಡಿ ಪ್ರಕರಣ ದಾಖಲಿಸಲಾಗಿದ್ದು, 53 ಮಂದಿ ಸಾವನ್ನಪ್ಪಿ 700ಕ್ಕೂ ಹೆಚ್ಚು ಮಂದಿ ಗಾಯಗೊಂಡ 2020ರ ಗಲಭೆಗಳ ಸಂಚಿನ ಪ್ರಮುಖ ಸೂತ್ರಧಾರರಲ್ಲಿ ಒಬ್ಬರೆಂದು ಆರೋಪಿಸಲಾಗಿದೆ. ಸಂಶೋಧನಾ ವಿಭಾಗದ ವಿದ್ಯಾರ್ಥಿಯಾಗಿದ್ದ ಖಾಲಿದ್ ಅವರನ್ನು 2020ರ ಸೆಪ್ಟೆಂಬರ್ 13ರಂದು ಬಂಧಿಸಲಾಗಿತ್ತು.

ಅವರ ಮೊದಲ ನಿಯಮಿತ ಜಾಮೀನು ಅರ್ಜಿಯನ್ನು 2022ರ ಮಾರ್ಚ್ 24ರಂದು ನ್ಯಾಯಾಲಯ ತಿರಸ್ಕರಿಸಿತ್ತು. ಬಳಿಕ ಆ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು Delhi High Court ಕೂಡ ಅದೇ ವರ್ಷದ ಅಕ್ಟೋಬರ್ 18ರಂದು ತಳ್ಳಿಹಾಕಿತ್ತು.

ಹೋರಾಟಗಾರ ಶರ್ಜೀಲ್ ಇಮಾಮ್, ಖಾಲಿದ್ ಸೈಫಿ ಹಾಗೂ ಮಾಜಿ Aam Aadmi Party ಕೌನ್ಸಿಲರ್ ತಾಹಿರ್ ಹುಸೇನ್ ಸೇರಿದಂತೆ ಇತರರ ಮೇಲೂ ಈ ದೊಡ್ಡ ಸಂಚು ಪ್ರಕರಣದಲ್ಲಿ ಆರೋಪಗಳಿದ್ದು, ಪ್ರಕರಣವನ್ನು ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com