ಹವಾಮಾನ: ಬಿಸಿಲಿನ ಝಳ, Heat wave ಗೆ ಉತ್ತರ ಭಾರತ ತತ್ತರ; ದೇಶದಲ್ಲೇ ಅತಿ ಹೆಚ್ಚು ತಾಪಮಾನ ಪ್ರದೇಶ ಯಾವುದು ಗೊತ್ತೇ?

ಉತ್ತರ ಪ್ರದೇಶದಲ್ಲಿರುವ ಬಂಡಾ ಜಿಲ್ಲೆ ಬರಗಾಲದಂತಿರುವ ಪರಿಸ್ಥಿತಿಯಲ್ಲಿ 48 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ದೇಶದ ಅತ್ಯಂತ ಬಿಸಿಯಾದ ಪ್ರದೇಶವಾಗಿದೆ.
weather forecast (file photo)
ಹವಾಮಾನ (ಸಂಗ್ರಹ ಚಿತ್ರ)online desk
Updated on

ದೆಹಲಿ: ತೀವ್ರ ಉಷ್ಣಹವೆ, ಬಿಸಿಗಾಳಿಗೆ ಉತ್ತರ ಭಾರತ ತತ್ತರಿಸಿದೆ. ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ದೇಶದಲ್ಲೇ ಅತಿ ಹೆಚ್ಚು 48 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 4.5 ಡಿಗ್ರಿ ಹೆಚ್ಚಾಗಿದೆ.

ದೆಹಲಿಯಲ್ಲಿ ರಿಡ್ಜ್ ಕೇಂದ್ರದಲ್ಲಿ ಗರಿಷ್ಠ ತಾಪಮಾನ 45.8 ಡಿಗ್ರಿ ದಾಖಲಾಗಿದ್ದು, ಈ ಪ್ರದೇಶ ರಾಜಧಾನಿಯಲ್ಲಿ ಅತಿ ಉಷ್ಣಾಂಶ ಹೊಂದಿದ ಸ್ಥಳವಾಗಿದೆ. ದೆಹಲಿಯ ಮುಖ್ಯ ಹವಾಮಾನ ಕೇಂದ್ರವಾದ ಸಫ್ದರ್ಜಂಗ್‌ನಲ್ಲಿ ಗರಿಷ್ಠ ತಾಪಮಾನ 44.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಆಯನಗರ್, ಪಾಲಂ ಮತ್ತು ಲೋದಿ ರಸ್ತೆಗಳಲ್ಲಿ ಕ್ರಮವಾಗಿ 45, 44.9 ಮತ್ತು 44.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಉತ್ತರ ಪ್ರದೇಶದಲ್ಲಿರುವ ಬಂಡಾ ಜಿಲ್ಲೆ ಬರಗಾಲದಂತಿರುವ ಪರಿಸ್ಥಿತಿಯಲ್ಲಿ 48 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ದೇಶದ ಅತ್ಯಂತ ಬಿಸಿಯಾದ ಪ್ರದೇಶವಾಗಿದೆ. ಪ್ರಾದೇಶಿಕ ಹವಾಮಾನ ಇಲಾಖೆ ಮುಂದಿನ ಒಂದು ವಾರದಲ್ಲಿ ಹಲವು ಪ್ರದೇಶಗಳಲ್ಲಿ ತೀವ್ರ ಬಿಸಿಗಾಳಿ ಇರಲಿದೆ ಎಂದು ಎಚ್ಚರಿಕೆ ಪ್ರಕಟಿಸಿದೆ.

ಮುಂದಿನ ಮೂರು ದಿನಗಳಿಗೆ ಯೆಲ್ಲೋ ಅಲರ್ಟ್ ಮತ್ತು ನಂತರದ ದಿನಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಬಿಸಿಗಾಳಿಯಿಂದ ತೀವ್ರ ಬಿಸಿಗಾಳಿ ಹಾಗೂ ಬಿಸಿಯಾದ ರಾತ್ರಿಗಳ ಸಾಧ್ಯತೆಯನ್ನು ಸೂಚಿಸಲಾಗಿದೆ.

ರಾಜಸ್ಥಾನದಲ್ಲಿ ಶ್ರೀಗಂಗಾನಗರದಲ್ಲಿ ಪಾರಾ ಉಷ್ಣಾಂಶ 46.5 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಂಡು ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ರಾಜ್ಯದ ಬಹುತೇಕ ಭಾಗಗಳು ತೀವ್ರ ಬಿಸಿಗಾಳಿಯಿಂದ ಬಳಲುತ್ತಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪಿಲಾನಿಯಲ್ಲಿ 45.3 ಡಿಗ್ರಿ, ಫಲೋದಿ ಮತ್ತು ಬಿಕಾನೇರ್‌ನಲ್ಲಿ 44.8 ಡಿಗ್ರಿ, ಚೂರುದಲ್ಲಿ 44.5 ಡಿಗ್ರಿ, ಅಲ್ವರ್ ಮತ್ತು ಕೋಟಾದಲ್ಲಿ 44.2 ಡಿಗ್ರಿ, ಜೈಸಲ್ಮೇರ್‌ನಲ್ಲಿ 43.6 ಡಿಗ್ರಿ, ಬಾರ್ಮೇರ್‌ನಲ್ಲಿ 43.4 ಡಿಗ್ರಿ ಮತ್ತು ಜೈಪುರದಲ್ಲಿ 42.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಮುಂದಿನ ವಾರ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಒಣಹವಾಮಾನ ಮುಂದುವರಿಯುವ ಸಾಧ್ಯತೆ ಇದ್ದು, ಗರಿಷ್ಠ ತಾಪಮಾನ 42 ರಿಂದ 46 ಡಿಗ್ರಿ ಸೆಲ್ಸಿಯಸ್ ನಡುವೆ ಇರಬಹುದು ಎಂದು ಇಲಾಖೆ ಅಂದಾಜು ಮಾಡಿದೆ. ಪಂಜಾಬ್ ಮತ್ತು ಹರಿಯಾಣದಲ್ಲೂ ತೀವ್ರ ಬಿಸಿಗಾಳಿ ಮುಂದುವರಿದಿದ್ದು, ಕೆಲವು ಕಡೆಗಳಲ್ಲಿ ತಾಪಮಾನ 47 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಹರಿಯಾಣದ ರೋಹ್ತಕ್‌ನಲ್ಲಿ ಗರಿಷ್ಠ ತಾಪಮಾನ 46.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಪಂಜಾಬ್‌ನ ಬಠಿಂಡಾದಲ್ಲಿ 46.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

weather forecast (file photo)
Bengaluru Rains: ವರುಣಾರ್ಭಟಕ್ಕೆ ನದಿಯಂತಾದ ರಸ್ತೆಗಳು; 5 ದಿನ ಮಳೆ ಸಾಧ್ಯತೆ, ತಾಪಮಾನ ಇಳಿಕೆ; ಹವಾಮಾನ ಇಲಾಖೆ

ಈ ಎರಡೂ ರಾಜ್ಯಗಳ ಅನೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ. ಎರಡೂ ರಾಜ್ಯಗಳ ಸಂಯುಕ್ತ ರಾಜಧಾನಿಯಾದ ಚಂಡೀಗಢದಲ್ಲಿ ಅತಿ ಹೆಚ್ಚು 44.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಮಂಗಳವಾರದ 43.2 ಡಿಗ್ರಿಗಿಂತ ಹೆಚ್ಚಿನ ಉಷ್ಣಾಂಶವಾಗಿದೆ. ದಿನದ ತಾಪಮಾನ ಸಾಮಾನ್ಯಕ್ಕಿಂತ ಐದು ಡಿಗ್ರಿಗಿಂತ ಹೆಚ್ಚು ಏರಿಕೆಯಾಗಿದೆ ಎಂದು ಸ್ಥಳೀಯ ಹವಾಮಾನ ಕೇಂದ್ರ ತಿಳಿಸಿದೆ.

ಹಿಮಾಚಲ ಪ್ರದೇಶದ ಸಮತಟ್ಟು ಭಾಗಗಳಲ್ಲೂ ಬಿಸಿಗಾಳಿ ಪರಿಸ್ಥಿತಿ ಕಂಡುಬಂದಿದ್ದು, ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಶಿಮ್ಲಾದಲ್ಲಿ ದಿನದ ತಾಪಮಾನ 30.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶಿಮ್ಲಾ ಮತ್ತು ಸೋಲನ್ ಜಿಲ್ಲೆಗಳ ಕೆಲವು ಭಾಗಗಳಿಗೆ ಮೇ 2ರಂದು ಬಿಸಿಗಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಹಳದಿ ಎಚ್ಚರಿಕೆ ನೀಡಲಾಗಿದೆ.

ಮೇ 21ರಿಂದ 23ರವರೆಗೆ ಚಂಬಾ, ಕಂಗ್ರಾ ಮತ್ತು ಕುಲ್ಲು ಜಿಲ್ಲೆಗಳಲ್ಲಿನ ಕೆಲವು ಪ್ರದೇಶಗಳಿಗೆ ಮಿಂಚು ಸಹಿತ ಗುಡುಗು ಮಳೆಯ ಹಳದಿ ಎಚ್ಚರಿಕೆ, ಹಾಗೆಯೇ ಮೇ 22 ಮತ್ತು 23ರಂದು ಮಂಡಿ ಮತ್ತು ಶಿಮ್ಲಾ ಜಿಲ್ಲೆಗಳಿಗೂ ಇದೇ ರೀತಿಯ ಎಚ್ಚರಿಕೆ ಪ್ರಕಟಿಸಲಾಗಿದೆ. ಪಕ್ಕದ ಉತ್ತರಾಖಂಡದಲ್ಲಿ ಗರಿಷ್ಠ ತಾಪಮಾನ ಸರಾಸರಿ 40 ಡಿಗ್ರಿ ಸೆಲ್ಸಿಯಸ್ ಸುತ್ತಮುತ್ತ ದಾಖಲಾಗಿದ್ದು, ಸಮತಟ್ಟಿನ ದೇರಾಡೂನ್‌ನಲ್ಲಿ 40.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಬೆಟ್ಟ ಪ್ರದೇಶದ ನ್ಯೂ ತೇಹ್ರಿಯಲ್ಲಿ 29.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com