ಬಾಂಬ್ ತಯಾರಿಕೆಗೆ ಚಾಟ್‌ಜಿಪಿಟಿ, ಯೂಟ್ಯೂಬ್ ಬಳಸಿದ್ದ ದೆಹಲಿ ಸ್ಫೋಟ ಆರೋಪಿ: NIA

ಕಳೆದ ವರ್ಷದ ನವೆಂಬರ್ 10ರಂದು ರಾಷ್ಟ್ರ ರಾಜಧಾನಿಯನ್ನು ನಡುಗಿಸಿದ, ಹೆಚ್ಚಿನ ತೀವ್ರತೆಯ ಐಇಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಎನ್‌ಐಎ ಮೇ 14ರಂದು ಸಲ್ಲಿಸಿರುವ 7,500 ಪುಟಗಳ ಆರೋಪಪಟ್ಟಿಯಲ್ಲಿ....
NIA
ಎನ್ಐಎ online desk
Updated on

ನವದೆಹಲಿ: ದೆಹಲಿ ರೆಡ್ ಫೋರ್ಟ್ ಪ್ರದೇಶದಲ್ಲಿ ನಡೆದ ಕಾರು ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಓರ್ವ ಕೃತಕ ಬುದ್ಧಿಮತ್ತೆ (ಎಐ), ಯುಟ್ಯೂಬ್ ನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ತನಿಖೆ ನಡೆಸುತ್ತಿರುವ ಎನ್ಐಎ (ರಾಷ್ಟ್ರೀಯ ತನಿಖಾ ಏಜೆನ್ಸಿ) ಹೇಳಿದೆ.

ಈಗಾಗಲೇ ಆರೋಪಪಟ್ಟಿಯಲ್ಲಿ ಹೆಸರು ಸೇರಿರುವ ಒಬ್ಬ ಆರೋಪಿ ಈ ಕೃತ್ಯ ಎಸಗಿದ್ದು, ಈತನಿಗೆ ಜಾಗತಿಕ ಉಗ್ರ ಸಂಘಟನೆ ಅಲ್-ಖೈದಾ‌ ಸಂಘಟನೆಯ ಒಂದು ಅಂಗಸಂಸ್ಥೆಯೊಂದಿಗೆ ಸಂಪರ್ಕ ಇದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಭಾನುವಾರ ಅಧಿಕೃತ ಮೂಲಗಳು ತಿಳಿಸಿವೆ.

ಆರೋಪಿಗಳು ರಾಕೆಟ್ ಆಧಾರಿತ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ)ಗಳನ್ನು ತಯಾರಿಸಿ, ಜಮ್ಮು ಮತ್ತು ಕಾಶ್ಮೀರದ ಅನಂತನಾಗ ಜಿಲ್ಲೆಯ ಕಾಜಿಗುಂಡ್ ಅರಣ್ಯ ಪ್ರದೇಶದಲ್ಲಿ ಅವುಗಳನ್ನು ಪರೀಕ್ಷಿಸಿದ್ದರೆಂಬ ಮಾಹಿತಿಯೂ ಲಭ್ಯವಾಗಿದೆ.

ಕಳೆದ ವರ್ಷದ ನವೆಂಬರ್ 10ರಂದು ರಾಷ್ಟ್ರ ರಾಜಧಾನಿಯನ್ನು ನಡುಗಿಸಿದ, ಹೆಚ್ಚಿನ ತೀವ್ರತೆಯ ಐಇಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಎನ್‌ಐಎ ಮೇ 14ರಂದು ಸಲ್ಲಿಸಿರುವ 7,500 ಪುಟಗಳ ಆರೋಪಪಟ್ಟಿಯಲ್ಲಿ ಈ ಸಂಚಲನಕಾರಿ ವಿವರಗಳು ದಾಖಲಾಗಿವೆ.

ನವದೆಹಲಿಯ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಲಾದ ಈ ಆರೋಪಪಟ್ಟಿ, ಐಇಡಿ ತಯಾರಿ ಮತ್ತು ಬಳಕೆಯಲ್ಲಿ ಆರೋಪಿಗಳು ಅನುಸರಿಸಿದ, ಅಧಿಕಾರಿಗಳು “ಪ್ರಯೋಗಾಲಯ ಮಟ್ಟದ ನಿಖರತೆ”ಯಂತೆ ವರ್ಣಿಸಿರುವ ಸೂಕ್ಷ್ಮ ಮತ್ತು ಕ್ರಮಬದ್ಧ ವಿಧಾನಗಳ ವಿವರಗಳನ್ನು ಒಳಗೊಂಡಿದೆ.

ಆರೋಪಪಟ್ಟಿಯಲ್ಲಿ ಹೆಸರು ಇರುವ ಒಬ್ಬ ಆರೋಪಿ, ಅಲ್-ಖೈದಾ ಇನ್ ದ ಇಂಡಿಯನ್ ಸಬ್‌ಕಾಂಟಿನೆಂಟ್ (AQIS) ಗೆ ಸಂಬಂಧಿಸಿದ ಅಂಸಾರ್ ಘಜ್ವತ್-ಉಲ್-ಹಿಂದ್ (AGuH) ಭಯೋತ್ಪಾದಕ ಘಟಕದ “ಇನ್-ಹೌಸ್ ಇಂಜಿನಿಯರ್” ಆಗಿ ಹೊರಹೊಮ್ಮಿದ್ದಾನೆ.

ಗೃಹ ವ್ಯವಹಾರಗಳ ಸಚಿವಾಲಯವು AQIS ಹಾಗೂ ಅದರ ಎಲ್ಲಾ ಅಂಗಸಂಸ್ಥೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಅಧಿಕೃತವಾಗಿ ಘೋಷಿಸಿದೆ. ಆರೋಪಿಯಾದ ಜಾಸಿರ್ ಬಿಲಾಲ್ ವಾನಿ, 2024-25ರ ಅವಧಿಯಲ್ಲಿ ಎರಡು ಮೂರು ಬಾರಿ ಹರಿಯಾಣದ ಫರೀದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದ ಆವರಣದಲ್ಲಿ ವಾಸ್ತವ್ಯ ಹೂಡಿ, ಸಂಚು ಕಾರ್ಯಾಚರಣೆಗೆ “ತಾಂತ್ರಿಕ ಸಹಾಯ” ಒದಗಿಸಿದ್ದಾನೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

NIA
"ಜಾಮೀನು ಸಾಮಾನ್ಯ ನಿಯಮ; ಜೈಲು ವಿನಾಯಿತಿ ತತ್ವ UAPA ಪ್ರಕರಣಗಳಿಗೂ ಅನ್ವಯ": ಉಗ್ರ ಆರೋಪಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಸ್ಫೋಟ ಪ್ರಕರಣದ ತನಿಖೆಯಲ್ಲಿ, ಅಲ್ಲಿ ಕೆಲಸ ಮಾಡುತ್ತಿದ್ದ ಮೂವರು ವೈದ್ಯರು ಈ ಘಟನೆಯಲ್ಲಿ ಭಾಗಿಯಾಗಿದ್ದಾರೆಯೆಂಬ ಶಂಕೆ ವ್ಯಕ್ತವಾದ ನಂತರ, ವಿಶ್ವವಿದ್ಯಾಲಯದ ಪಾತ್ರ ಕಾನೂನು ಜಾರಿ ಸಂಸ್ಥೆಗಳ ನಿಗಾದೊಳಗೆ ಬಂದಿದೆ.

ಆರೋಪಪಟ್ಟಿಯ ಪ್ರಕಾರ, ಸ್ಫೋಟಕಗಳಿಂದ ತುಂಬಿದ್ದ ಕಾರಿನ ಚಾಲಕರಾಗಿದ್ದ ಮತ್ತೊಬ್ಬ ಪ್ರಮುಖ ಆರೋಪಿ ಡಾ. ಉಮರ್ ಉನ್ ನಬಿಯನ್ನು ಜಾಸಿರ್‌ಗೆ ಡಾ. ಅದೀಲ್ ಅಹ್ಮದ್ ರಾದರ್ ಪರಿಚಯಿಸಿದ್ದ. ಆ ಸ್ಫೋಟದಲ್ಲಿ 11 ಮಂದಿ ಸಾವನ್ನಪ್ಪಿ, ಇನ್ನೂ ಹಲವರು ಗಾಯಗೊಂಡಿದ್ದರು. ಎನ್‌ಐಎ ಕಂಡುಹಿಡಿದ ಮಾಹಿತಿಯ ಪ್ರಕಾರ, ಅಡೀಲ್ ಜಸೀರ್‌ಗೆ ಐಇಡಿ ತಯಾರಿಕೆಗೆ ಅಗತ್ಯವಾದ ಪದಾರ್ಥಗಳನ್ನು, ಎನ್‌ಪಿಕೆ ರಸಗೊಬ್ಬರ ರೂಪದಲ್ಲಿರುವ ಪೊಟ್ಯಾಸಿಯಂ ನೈಟ್ರೇಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. ಇದೇ ವೇಳೆ, ಡಾ. ಉಮರ್ ತಾತ್ಕಾಲಿಕ ರಾಕೆಟ್ ಐಇಡಿ‌ಗಳ ಕುರಿತು ಸಂಶೋಧನೆ ನಡೆಸಿ, ಅವುಗಳ ತಯಾರಿ ಮತ್ತು ಬಳಕೆಗೆ ಸಂಬಂಧಿಸಿದ ಮಾರ್ಗದರ್ಶನ ನೀಡಿದ್ದಾನೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com