ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆ: ಮತದಾರರಿಂದ 'ED ಪಕ್ಷ' ನಿರ್ನಾಮ; ಬಿಜೆಪಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ! Video

ಭಗವಂತ್ ಮಾನ್ ಸರ್ಕಾರದ ಕೆಲಸಕ್ಕೆ ಸಾರ್ವಜನಿಕರ ಸಮ್ಮತಿ ಇರುವುದನ್ನು ಫಲಿತಾಂಶಗಳು ಪ್ರತಿಬಿಂಬಿಸುತ್ತವೆ ಮತ್ತು ಪಕ್ಷದ ಭರವಸೆಗಳನ್ನು ಈಡೇರಿಸುವುದನ್ನು ಮುಂದುವರಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.
Kejriwal With Punjab CM
ಭಗವಂತ್ ಮಾನ್ ಜೊತೆಗೆ ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ AAP ಭರ್ಜರಿ ಗೆಲುವು ಸಾಧಿಸಿದೆ. ಇಲ್ಲಿಯವರೆಗೂ ನಡೆದ ಮತ ಎಣಿಕೆ ಪ್ರಕಾರ 1,765 ವಾರ್ಡ್ ಗಳ ಪೈಕಿ 862 ವಾರ್ಡ್ ಗಳಲ್ಲಿ ಗೆಲುವು ಸಾಧಿಸುವ ಮೂಲಕ 102 ಸ್ಥಳೀಯ ಸಂಸ್ಥೆಗಳಲ್ಲಿ ಎಎಪಿ ಜಯಭೇರಿ ಬಾರಿಸಿದೆ.

ಒಟ್ಟಾರೇ 1,977 ವಾರ್ಡ್ ಗಳಿಗೆ ಮೇ 26 ರಂದು ಚುನಾವಣೆ ನಡೆದಿತ್ತು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಸಂದೇಶ ನೀಡಿರುವ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಪಂಜಾಬ್ ಜನರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಪಕ್ಷ "ಅದ್ಭುತ ಗೆಲುವು" ಸಾಧಿಸಿದೆ ಎಂದು ಹೇಳಿದ್ದಾರೆ.

ಭಗವಂತ್ ಮಾನ್ ಸರ್ಕಾರದ ಕೆಲಸಕ್ಕೆ ಸಾರ್ವಜನಿಕರ ಸಮ್ಮತಿ ಇರುವುದನ್ನು ಫಲಿತಾಂಶಗಳು ಪ್ರತಿಬಿಂಬಿಸುತ್ತವೆ ಮತ್ತು ಪಕ್ಷದ ಭರವಸೆಗಳನ್ನು ಈಡೇರಿಸುವುದನ್ನು ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.

ಇದೇ ವೇಳೆ ಅವರು ಬಿಜೆಪಿಯನ್ನು "ಇಡಿ ಪಕ್ಷ" ಎಂದು ಕರೆದಿದ್ದು, ಜಾರಿ ಕ್ರಮಗಳ ಮೂಲಕ ವ್ಯಾಪಾರಿಗಳಿಗೆ ಕಿರುಕುಳ ನೀಡಿದ ಪಕ್ಷವನ್ನು ಮತದಾರರು ತಿರಸ್ಕರಿಸಿದ್ದಾರೆ. ಮತದಾರರು ಮತಪೆಟ್ಟಿಗೆಯ ಮೂಲಕ ತಮ್ಮ ತೀರ್ಪನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

Kejriwal With Punjab CM
ಪಂಜಾಬ್ AAP ದೊಡ್ಡ ಹೊಡೆತ: ಸಿಎಂ ಭಗವಂತ್ ಮಾನ್ ಸೋದರ ಸಂಬಂಧಿ ಬಿಜೆಪಿಗೆ ಸೇರ್ಪಡೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com