SIR ವಿಷಯವಾಗಿ ವಿಶೇಷ ಅಧಿವೇಶನಕ್ಕೆ ಸಿದ್ಧ, ಚರ್ಚೆಗೆ ಬನ್ನಿ; ರಾಹುಲ್ ಗೆ ಅಮಿತ್ ಶಾ ಸವಾಲು

"ನಾವು ಮತದಾರರ ಪಟ್ಟಿಯಿಂದ ಪ್ರತಿಯೊಬ್ಬ ಒಳನುಸುಳುಕೋರನ ಹೆಸರನ್ನು ತೆಗೆದುಹಾಕುತ್ತೇವೆ," ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
Amitsha
ಅಮಿತ್ ಶಾ online desk
Updated on: 

ಹೈದರಾಬಾದ್: 'ಮತ ಕಳ್ಳತನ'ದ ಆರೋಪಕ್ಕೆ ಸಂಬಂಧಿಸಿದಂತೆ 'ಇಂಡಿಯಾ' (INDIA) ಒಕ್ಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ವಿಷಯದ ಕುರಿತು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಸರ್ಕಾರ ಸಿದ್ಧವಿದೆ ಎಂದು ಸೋಮವಾರ ಹೇಳಿದ್ದಾರೆ.

ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಬರುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ.

ದೆಹಲಿಯಲ್ಲಿ ಭಾನುವಾರ ನಡೆದ 'ಇಂಡಿಯಾ' ಒಕ್ಕೂಟದ ರ್ಯಾಲಿಯನ್ನು "ಒಳನುಸುಳುಕೋರರನ್ನು ರಕ್ಷಿಸುವ" ರ್ಯಾಲಿ ಎಂದು ಟೀಕಿಸಿದ ಅವರು, "ಒಂದು ವೇಳೆ ಇವಿಎಂಗಳು (EVMs) ದೋಷಪೂರಿತವಾಗಿದ್ದರೆ", ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳನ್ನು ರಚಿಸಿದ್ದು ಹೇಗೆ ಎಂದು ಪ್ರಶ್ನಿಸಿದರು. ಅಲ್ಲದೆ, ರಾಹುಲ್ ಗಾಂಧಿ ಕೇವಲ 'ನಕಲಿ ಸಂಸತ್ತಿನಲ್ಲಿ' (mock Parliament) ಮಾತ್ರ ಪ್ರಧಾನಿಯಾಗಲು ಸಾಧ್ಯ ಎಂದು ವ್ಯಂಗ್ಯವಾಡಿದರು.

Amitsha
"ಹಿಂದೂಸ್ಥಾನ ನಿಮ್ಮ ಅಬ್ಬು ಜಾನ್ ಗೆ ಸೇರಿದ್ದಲ್ಲ", ರಾಹುಲ್ ಗಾಂಧಿ ಮೊಘಲ್ ಚಕ್ರವರ್ತಿಯ ಮಗನಂತೆ ಮಾತಾಡ್ತಿದ್ದಾರೆ: ಬಿಜೆಪಿ ವ್ಯಂಗ್ಯ

ಹೈದರಾಬಾದ್‌ನಲ್ಲಿ ಬಿಜೆಪಿ ಆಯೋಜಿಸಿದ್ದ 'ಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆಯನ್ನು ತೊಡೆದುಹಾಕಿ' ಎಂಬ ಪಾದಯಾತ್ರೆಯ ನೇತೃತ್ವ ವಹಿಸಿದ್ದ ಅಮಿತ್ ಶಾ, "ರಾಹುಲ್ ಗಾಂಧಿ ಕೈಯಲ್ಲಿ ಸಂವಿಧಾನವನ್ನು ಹಿಡಿದುಕೊಳ್ಳುತ್ತಾರೆ, ಆದರೆ ಸಂವಿಧಾನಕ್ಕೆ ಗೌರವ ನೀಡುವುದಿಲ್ಲ. ರಾಹುಲ್ ಜೀ, ನೀವು ಸಂಸತ್ತಿನ ಕಲಾಪಗಳು ನಡೆಯಲು ಬಿಡುವುದಿಲ್ಲ. ಇವಿಎಂಗಳು ಅಥವಾ ಒಳನುಸುಳುಕೋರರ ವಿಷಯವಿರಲಿ, ನಾನು ಹೈದರಾಬಾದ್‌ನಿಂದಲೇ ನಿಮಗೆ ಸವಾಲು ಹಾಕುತ್ತಿದ್ದೇನೆ. ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ನಾವು ಸಿದ್ಧರಿದ್ದೇವೆ. ಚರ್ಚೆಗೆ ಬನ್ನಿ," ಎಂದು ಹೇಳಿದರು.

"ನಾವು ಮತದಾರರ ಪಟ್ಟಿಯಿಂದ ಪ್ರತಿಯೊಬ್ಬ ಒಳನುಸುಳುಕೋರನ ಹೆಸರನ್ನು ತೆಗೆದುಹಾಕುತ್ತೇವೆ," ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಸಂಸತ್ತಿನ ಅಧಿವೇಶನ ನಡೆದರೆ, ಪ್ರಧಾನಿ ನರೇಂದ್ರ ಮೋದಿ ಅವರು "ಕಾಂಗ್ರೆಸ್ ಅನ್ನು ಚೂರುಚೂರು ಮಾಡಲಿದ್ದಾರೆ" ಎಂದು ಹೇಳಿದ ಅಮಿತ್ ಶಾ, ಕಾಂಗ್ರೆಸ್ ಪಕ್ಷ ಅರಾಜಕತೆಯನ್ನು ಸೃಷ್ಟಿಸುವ ಮೂಲಕ ಪ್ರಚಾರ ಪಡೆಯಲು ಬಯಸುತ್ತಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X