

ಅಕ್ಟೋಬರ್ 30 ರಂದು, ಬದರಿನಾಥದಿಂದ ಹಿಂತಿರುಗುತ್ತಿದ್ದಾಗ ಉತ್ತರಾಖಂಡದ ಜೋಶಿಮಠದ ಸಮೀಪವಿರುವ ಹಳ್ಳಿಯೊಂದರ ಬಳಿ ಖಾಸಗಿ ಹೆಲಿಕಾಪ್ಟರ್ ಪತನಗೊಂಡ ಸ್ಥಳವನ್ನು ಪರಿಶೀಲಿಸಬೇಕಾದರೆ, ವಿಮಾನ ಅಪಘಾತ ತನಿಖಾ ಬ್ಯೂರೋದ (AAIB) ಅಧಿಕಾರಿಯೊಬ್ಬರು ಅಸ್ವಸ್ಥಗೊಂಡಿದ್ದಾರೆ.
ಹೆಲಿಕಾಪ್ಟರ್ ಪತನ ದುರ್ಘಟನೆಯಲ್ಲಿ ಕರ್ನಾಟಕದ ಐವರು ಯಾತ್ರಾರ್ಥಿಗಳು ಮತ್ತು ಪೈಲಟ್ ಮೃತಪಟ್ಟಿದ್ದರು.
ಘಟನಾ ಸ್ಥಳವನ್ನು ಪರಿಶೀಲಿಸುವಾಗ, ವಿಮಾನ ಅಪಘಾತ ತನಿಖಾ ಬ್ಯೂರೋದ (AAIB) ಅಧಿಕಾರಿಯೊಬ್ಬರು ಅಸ್ವಸ್ಥಗೊಂಡರು. ಅವರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) ಸಿಬ್ಬಂದಿ ರಕ್ಷಿಸಿದರು.
ಪೊಲೀಸ್ ಅಧಿಕಾರಿಗಳ ಪ್ರಕಾರ, ನವೆಂಬರ್ 1 ರಂದು ಘಟನಾ ಸ್ಥಳಕ್ಕೆ ತೆರಳಿದ್ದ AAIB ಅಧಿಕಾರಿಗಳು ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂಬ ಮಾಹಿತಿ ಸೋಮವಾರ ಸಂಜೆ ಗೋಪೇಶ್ವರದಲ್ಲಿರುವ ಕಂಟ್ರೋಲ್ ರೂಮ್ಗೆ ತಲುಪಿತು. AAIB ಅಧಿಕಾರಿಯೊಬ್ಬರು ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದರು ಮತ್ತು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದರು.
SDRF ಸಿಬ್ಬಂದಿ ಆ ಅಧಿಕಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು, ಕಠಿಣ ಭೂಪ್ರದೇಶದ ಮೂಲಕ ಸಾಗಿ ಪಾಂಡುಕೇಶ್ವರವನ್ನು ತಲುಪಿದರು. ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (UCADA) ಅಧಿಕಾರಿಗಳ ಮಾಹಿತಿ ಪ್ರಕಾರ, AAIB ತಂಡವು ಮಧ್ಯಾಹ್ನದ ವೇಳೆಗೆ ಡೆಹ್ರಾಡೂನ್ಗೆ ಮರಳಬೇಕಿತ್ತು. ಹೆಲಿಕಾಪ್ಟರ್ ಪತನದ ಕುರಿತಾದ ತನಿಖೆ ಮುಂದುವರಿದಿದೆ