ಕೊಲೆಯಾದ ಬಳಿಕ ದೆವ್ವವಾಗಿ ಕಾಡಿದ ಸ್ನೇಹಿತ; ಕಾಟ ತಾಳದೇ ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಕೊಂಡ ಯುವಕ!

ಪೊಲೀಸರು ವಶಕ್ಕೆ ಪಡೆದ ನಂತರ, ಕದಮ್ ಜೊತೆ ಮದ್ಯಪಾನ ಮಾಡುತ್ತಿದ್ದಾಗ ಅವರ ಮನೆಯಲ್ಲೇ ಆತನನ್ನು ಹೊಡೆದು ಕೊಂದಿರುವುದಾಗಿ ಪ್ರಭು ಒಪ್ಪಿಕೊಂಡಿದ್ದಾನೆ.
Dombivli Man confesses to murder, says victim appeared in his dreams
ಶವ ಎಸೆದ ಜಾಗದಲ್ಲಿ ಪೊಲೀಸರ ಹುಡುಕಾಟ
Updated on: 

ಮುಂಬೈ: ಮೃತಪಟ್ಟ ಸ್ನೇಹಿತ ಪದೇಪದೇ ತನ್ನ ಕನಸಿನಲ್ಲಿ ಬಂದು ಹೆದರಿಸುತ್ತಿದ್ದ. ಇದರಿಂದ ತಾನು ತುಂಬಾ ಭಯಭೀತನಾಗಿದ್ದೆ ಎಂದು ಹೇಳಿಕೊಂಡಿರುವ ಯುವಕನೊಬ್ಬ, ಎಣ್ಣೆ ಪಾರ್ಟಿ ವೇಳೆ ನಡೆದ ಜಗಳದಲ್ಲಿ ತನ್ನ ಸ್ನೇಹಿತನನ್ನು ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವ್ಲಿ ನಿವಾಸಿ ಹಾಗೂ ಹೌಸ್‌ಕೀಪಿಂಗ್ ಕೆಲಸಗಾರನಾದ ಪ್ರಭು ಕಾರ್ಕಡೆ(24) ಎಂಬಾತ, ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದು, ಕೆಲವು ದಿನಗಳ ಹಿಂದೆ ತನ್ನ ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಸೋಮವಾರ ಆತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಫುಲ್ಲ ಜಾಧವ್ ತಿಳಿಸಿದ್ದಾರೆ.

ಎರಡು ವಾರಗಳ ಹಿಂದೆ ಡೊಂಬಿವ್ಲಿ ಸಮೀಪದ ಮೋಥಾ ಗ್ರಾಮದಲ್ಲಿ ಪಲ್ಲವ್ ಅಲಿಯಾಸ್ ವಿಶಾಲ್ ಮಧುಕರ್ ಕದಮ್ (43) ಎಂಬುವವರ ಮೃತದೇಹ ಪತ್ತೆಯಾಗಿತ್ತು ಎಂದು ಅಧಿಕಾರಿ ಮಾಹಿತಿ ನೀಡಿದರು.

Dombivli Man confesses to murder, says victim appeared in his dreams
ಮಂಡ್ಯ: ಜಗಳ ಬಿಡಿಸಲು ಹೋದ ಯುವಕನಿಗೆ ಡ್ರ್ಯಾಗರ್‌ನಿಂದ ಕತ್ತು ಸೀಳಿ ಭೀಕರ ಹತ್ಯೆ!

ಪೊಲೀಸರು ವಶಕ್ಕೆ ಪಡೆದ ನಂತರ, ಕದಮ್ ಜೊತೆ ಮದ್ಯಪಾನ ಮಾಡುತ್ತಿದ್ದಾಗ ಅವರ ಮನೆಯಲ್ಲೇ ಆತನನ್ನು ಹೊಡೆದು ಕೊಂದಿರುವುದಾಗಿ ಪ್ರಭು ಒಪ್ಪಿಕೊಂಡಿದ್ದಾನೆ.

ಆತ ಮೃತದೇಹವನ್ನು ಚೀಲವೊಂದರಲ್ಲಿ ತುಂಬಿ, ಕೋಪರ್ ಲಿಂಕ್ ರಸ್ತೆ ಬಳಿಯ ನಿರ್ಜನ ಪ್ರದೇಶವೊಂದರಲ್ಲಿ ಎಸೆದು ಪರಾರಿಯಾಗಿದ್ದನು. ಆದರೆ, ನಂತರದ ದಿನಗಳಲ್ಲಿ ಮೃತ ವ್ಯಕ್ತಿಯು ಪದೇಪದೇ ತನ್ನ ಕನಸಿನಲ್ಲಿ ಬಂದು ಭಯ ಹುಟ್ಟಿಸುತ್ತಿದ್ದನು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಅಲ್ಲದೆ, ತಾನು ಮೃತದೇಹವನ್ನು ಎಸೆದ ಸ್ಥಳವನ್ನೂ ಆತ ತೋರಿಸಿದ್ದಾನೆ.

ಕೊಲೆ ಮಾಡಿ ತಾನು ಸುಲಭವಾಗಿ ಪಾರಾಗಿದ್ದೇನೆ ಎಂದು ಪ್ರಭು ಭಾವಿಸಿದ್ದ. ಆದರೆ ಘಟನೆ ನಡೆದ ಮರುದಿನದಿಂದಲೇ ಆತನಿಗೆ ಅಸಲಿ ನರಕ ಶುರುವಾಗಿತ್ತು. ಸತತ 15 ದಿನಗಳ ಕಾಲ ಮೃತಪಟ್ಟ ಸ್ನೇಹಿತ ವಿಶಾಲ್ ಕನಸಿನಲ್ಲಿ ಬಂದು ಆತನನ್ನು ಭಯಬೀಳಿಸಲು ಪ್ರಾರಂಭಿಸಿದ್ದನು. ಇದರಿಂದಾಗಿ ಪ್ರಭುಗೆ ಅರ್ಧ ಗಂಟೆಯೂ ನಿದ್ರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕನಸಿನ ಕಾಟ ಮತ್ತು ಪಶ್ಚಾತ್ತಾಪದಿಂದ ತೀವ್ರವಾಗಿ ನೊಂದ ಪ್ರಭು, ಭಯ ತಾಳಲಾರದೆ ಕೊನೆಗೆ ಪೊಲೀಸರ ಬಳಿ ತೆರಳಿ ತನ್ನ ಅಪರಾಧವನ್ನು ಒಪ್ಪಿಕೊಂಡು ಶರಣಾಗಿದ್ದಾನೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ರ ಅಡಿಯಲ್ಲಿ ವಿಷ್ಣು ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X