ಹಿಂದೂ ಹಬ್ಬಗಳಲ್ಲಿ ಮಾತ್ರ ಇವರಿಗೆ ಪರಿಸರ ನೆನಪಾಗುತ್ತೆ; ಈದ್, ಬಕ್ರೀದ್ ಬಂದಾಗ...: ನಸೀರುದ್ದೀನ್ ಶಾ, ದಿಯಾ ವಿರುದ್ಧ ಬಿಜೆಪಿ ಕಿಡಿ

ಇಲ್ಲಿ ಸಂದೇಶ ನೀಡುವುದರಲ್ಲಿಯೂ ತಾರತಮ್ಯವಿದೆ. ನೀವು ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳುತ್ತೀರಿ. ಆದರೆ ಈದ್ ಮತ್ತು ಬಕ್ರೀದ್ ಹಬ್ಬಗಳ ಸಂದರ್ಭದಲ್ಲಿ, ಪ್ರಾಣಿ ಬಲಿಯಿಂದಾಗಿ...
When Eid comes...: BJP slams Naseeruddin Shah, Dia Mirza of selective outrage
ದಿಯಾ ಮಿರ್ಜಾ - ನಸೀರುದ್ದೀನ್ ಶಾ
Updated on: 

ಮುಂಬೈ: ಪರಿಸರ ಮಾಲಿನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದಿಯಾ ಮಿರ್ಜಾ ಮತ್ತು ನಟ ನಸೀರುದ್ದೀನ್ ಶಾ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ, ಹಿಂದೂ ಹಬ್ಬಗಳ ಸಂದರ್ಭದಲ್ಲಿ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸುವ ಇವರು, ಇತರ ಧರ್ಮಗಳ ಹಬ್ಬಗಳ ಸಮಯದಲ್ಲಿ ಮೌನವಾಗಿರುತ್ತಾರೆ ಎಂದು ಮಂಗಳವಾರ ದೂರಿದೆ.

ಇಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಈ ನಟರ ಪರಿಸರ ಕಾಳಜಿ ಕೇವಲ ಆಯ್ದ ವಿಷಯಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದರು.

"ಇಲ್ಲಿ ಸಂದೇಶ ನೀಡುವುದರಲ್ಲಿಯೂ ತಾರತಮ್ಯವಿದೆ. ನೀವು ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳುತ್ತೀರಿ. ಆದರೆ ಈದ್ ಮತ್ತು ಬಕ್ರೀದ್ ಹಬ್ಬಗಳ ಸಂದರ್ಭದಲ್ಲಿ, ಪ್ರಾಣಿ ಬಲಿಯಿಂದಾಗಿ(ಆಡುಗಳನ್ನು ವಧಿಸುವುದರಿಂದ) ನೀರಿನ ಮಾಲಿನ್ಯ ಉಂಟಾದಾಗ, ನಸೀರುದ್ದೀನ್ ಶಾ ಮತ್ತು ದಿಯಾ ಮಿರ್ಜಾ ಅವರಂತಹವರು ಒಂದೂ ಮಾತನಾಡುವುದಿಲ್ಲ" ಎಂದು ಭಾಟಿಯಾ ಹೇಳಿದರು.

When Eid comes...: BJP slams Naseeruddin Shah, Dia Mirza of selective outrage
ದಿಯಾ ಮಿರ್ಜಾ ಹಿಂದೂ ವಿರೋಧಿ: ಮುಂಬೈ ಮೇಯರ್; BMCಯಿಂದ ನಟಿಯ ಮಾಲಿನ್ಯರಹಿತ ದೀಪಾವಳಿ ವಿಡಿಯೋ ಡಿಲೀಟ್!

ಬೃಹನ್ಮುಂಬೈ ಮಹಾನಗರ ಪಾಲಿಕೆಯ(BMC) ಪರಿಸರ ಸ್ನೇಹಿ ಮತ್ತು ಪಟಾಕಿ ರಹಿತ ದೀಪಾವಳಿ ಅಭಿಯಾನಕ್ಕಾಗಿ ದಿಯಾ ಮಿರ್ಜಾ ಅವರು ಮಾಡಿದ್ದ ವಿಡಿಯೋಗೆ ಸಂಬಂಧಿಸಿದ ವಿವಾದದ ಕುರಿತು ಬಾಂಬೆ ಹೈಕೋರ್ಟ್ ಆದೇಶದ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ದಿಯಾ ಅವರ ವಿಡಿಯೋ ಕ್ಲಿಪ್ ಅನ್ನು ಮತ್ತೆ ಅಪ್‌ಲೋಡ್ ಮಾಡುವಂತೆ ಹೈಕೋರ್ಟ್ ಪಾಲಿಕೆಗೆ ನಿರ್ದೇಶನ ನೀಡಿದೆ.

ಹೈಕೋರ್ಟ್‌ನ ಆದೇಶವನ್ನು ತಾನು ನೋಡಿಲ್ಲವಾದ್ದರಿಂದ ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಭಾಟಿಯಾ ಹೇಳಿದರು. ಆದಾಗ್ಯೂ, ಹಿಂದೂ ಹಬ್ಬಗಳ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಮತ್ತು ಶಬ್ದ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸುವವರು, ಇತರ ಧರ್ಮಗಳ ಹಬ್ಬಗಳ ಸಂದರ್ಭದಲ್ಲೂ ಅಂತಹದೇ ಕಾಳಜಿಯನ್ನು ವ್ಯಕ್ತಪಡಿಸಬೇಕು ಎಂದು ಪ್ರತಿಪಾದಿಸಿದರು.

"ಒಬ್ಬ ನಾಗರಿಕ ಯಾವಾಗಲೂ ನಾಗರಿಕನೇ ಆಗಿರುತ್ತಾನೆ. ಅವರಿಗೆ ಪರಿಸರದ ಬಗ್ಗೆ ಕಾಳಜಿ ಇದ್ದರೆ, ಅದು ಯಾವಾಗಲೂ ಇರಬೇಕು. ಶಬ್ದ ಮಾಲಿನ್ಯದ ಬಗ್ಗೆ ಕಾಳಜಿ ಇದ್ದರೆ, ಅದು ಯಾವಾಗಲೂ ಇರಬೇಕು. ಹಿಂದೂ ಹಬ್ಬಗಳ ಸಂದರ್ಭದಲ್ಲಿ ಹೇಳಿಕೆಗಳನ್ನು ನೀಡುವುದು, ಇತರ ಧರ್ಮಗಳಿಗೆ ಸೇರಿದ ಹಬ್ಬಗಳ ಸಂದರ್ಭದಲ್ಲಿ ಮೌನವಾಗಿರುವುದು ಸರಿಯಲ್ಲ" ಎಂದರು.

ಇದೇ ವೇಳೆ, ನಾಗರಿಕರು ನ್ಯಾಯಾಲಯದ ಆದೇಶಗಳನ್ನು ಗೌರವಿಸಬೇಕು ಮತ್ತು ಕಾನೂನನ್ನು ಪಾಲಿಸಬೇಕು ಎಂದು ಭಾಟಿಯಾ ಹೇಳಿದರು.

"ಹಿಂದೂ ಧರ್ಮದ ಅನುಯಾಯಿಗಳು ಸಹಿಷ್ಣುಗಳು ಮತ್ತು ಅವರು ಸಂವಿಧಾನವನ್ನೂ ಗೌರವಿಸುತ್ತಾರೆ ಎಂದು ನಾನು ನಂಬುತ್ತೇನೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ನೀಡಿದ ತೀರ್ಪುಗಳನ್ನು ನಾಗರಿಕರು, ವಿಶೇಷವಾಗಿ ಹಿಂದೂಗಳು, ಹಿಂದೆ ಒಪ್ಪಿಕೊಂಡಿದ್ದಾರೆ ಮತ್ತು ದೀಪಾವಳಿಯನ್ನು ಆಚರಿಸಿಕೊಂಡು ಬಂದಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ," ಎಂದು ಅವರು ಹೇಳಿದರು.

ಮಿರ್ಜಾ ಅವರ ವಿಡಿಯೋಗೆ ಸಂಬಂಧಿಸಿದ ವಿವಾದವನ್ನು ಬಾಂಬೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ(suo motu) ಪರಿಗಣನೆಗೆ ತೆಗೆದುಕೊಂಡ ನಂತರ, ಬಿಜೆಪಿ ಈ ಹೇಳಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X