ರಷ್ಯಾ ವಿದೇಶಾಂಗ ಸಚಿವರ ನಕಲಿ ವಿಡಿಯೋ ಶೇರ್: ಪ್ರಶಾಂತ್ ಭೂಷಣ್ ವಿರುದ್ಧ FIR ದಾಖಲು..!

ಈ ಬೆಳವಣಿಗೆಗೆ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಈ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಿತ್ತು. ವಿಡಿಯೊವನ್ನು ಡಿಜಿಟಲ್ ತಂತ್ರಜ್ಞಾನ ಬಳಸಿ ತಿರುಚಲಾಗಿದ್ದು, ಅದನ್ನು ಲಾವ್ರೊವ್ ಅವರಿಗೆ ತಪ್ಪಾಗಿ ಆರೋಪಿಸಲಾಗಿದೆ ಎಂದು ಸ್ಪಷ್ಟಪಡಿಸಿತ್ತು.
Prashant Bhushan
ಪ್ರಶಾಂತ್ ಭೂಷಣ್
Updated on: 

ನವದೆಹಲಿ: ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರ ತಿರುಚಿದ ನಕಲಿ (ಡೀಪ್‌ಫೇಕ್) ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ನವೆಂಬರ್ 3ರಂದು ಸೈಬರ್ ಗಸ್ತು ನಡೆಸುತ್ತಿದ್ದ ವೇಳೆ, @thequotesnews ಎಂಬ ಸಾಮಾಜಿಕ ಜಾಲತಾಣ ಖಾತೆಯ ಪೋಸ್ಟ್ ಪೊಲೀಸರ ಗಮನಕ್ಕೆ ಬಂದಿದೆ.

ಲಾವ್ರೊವ್ ಅವರ ತಿರುಚಿದ ವಿಡಿಯೊವನ್ನು ಭೂಷಣ್ ಅವರ ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾಗಿದೆ ಎಂದು ಆ ಪೋಸ್ಟ್‌ನಲ್ಲಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ಘಟಕದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ವಿಡಿಯೊದಲ್ಲಿ ತಪ್ಪು ಮಾಹಿತಿ ಮತ್ತು ಪ್ರಚೋದನಕಾರಿ ವಿಷಯಗಳಿದ್ದು, ವದಂತಿಗಳನ್ನು ಹರಡುವ, ವ್ಯಕ್ತಿಗಳ ಮಾನಹಾನಿ ಮಾಡುವ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Prashant Bhushan
ನಾವೆಲ್ಲರೂ ದೇಶದಲ್ಲಿ ಆಡಳಿತ ಬದಲಾವಣೆ ಬಯಸುತ್ತಿದ್ದೇವೆ; ಹಾಗೆ ಬಯಸುವುದರಲ್ಲಿ ತಪ್ಪೇನಿದೆ? ದೆಹಲಿ ಹೋರಾಟದ ಬಗ್ಗೆ ಪ್ರಶಾಂತ್ ಭೂಷಣ್

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಬೆಳವಣಿಗೆಗೆ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಈ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಿತ್ತು. ವಿಡಿಯೊವನ್ನು ಡಿಜಿಟಲ್ ತಂತ್ರಜ್ಞಾನ ಬಳಸಿ ತಿರುಚಲಾಗಿದ್ದು, ಅದನ್ನು ಲಾವ್ರೊವ್ ಅವರಿಗೆ ತಪ್ಪಾಗಿ ಆರೋಪಿಸಲಾಗಿದೆ ಎಂದು ಸ್ಪಷ್ಟಪಡಿಸಿತ್ತು.

ತಿರುಚಿದ ವಿಡಿಯೊದಲ್ಲಿ ರಷ್ಯಾ ವಿದೇಶಾಂಗ ಸಚಿವರು ಭಾರತದ ಆಂತರಿಕ ವಿಚಾರಗಳು ಮತ್ತು ರಷ್ಯಾದಿಂದ ಭಾರತ ಖರೀದಿಸುತ್ತಿರುವ ತೈಲದ ಕುರಿತು ಟೀಕಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂಬಂತೆ ಬಿಂಬಿಸಲಾಗಿತ್ತು.

ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದು, ವಿಡಿಯೊದ ವಿಷಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅದು ಹೇಗೆ ಪ್ರಸಾರವಾಗಿದೆ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X