

ನವದೆಹಲಿ: ನವೆಂಬರ್ 1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಬಣದ ರ‍್ಯಾಲಿಯಲ್ಲಿ ಭಾಗವಹಿಸದ ಏಳು ರಾಜ್ಯಗಳ ಭಾರತೀಯ ಯುವ ಕಾಂಗ್ರೆಸ್ ನ ಕನಿಷ್ಠ 185 ಸದಸ್ಯರನ್ನು ಕಾಂಗ್ರೆಸ್ ಅಮಾನತುಗೊಳಿಸಿದೆ ಎಂದು NDTV ವರದಿ ಮಾಡಿದೆ.
'ಇಂಡಿಯಾ' ರ‍್ಯಾಲಿಗೆ ಗೈರಾದವರ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಂಡಿದ್ದು, ಈ ಕ್ರಮವು ಅಂತಿಮವಾಗಿ 500 ಸದಸ್ಯರನ್ನು ಒಳಗೊಳ್ಳಬಹುದು ಎನ್ನಲಾಗಿದೆ.
ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 60 ಸದಸ್ಯರನ್ನು ಅಮಾನತುಗಳಿಸಲಾಗಿದ್ದು, ನಂತರ ಗುಜರಾತ್ (49) ಮತ್ತು ಪಶ್ಚಿಮ ಬಂಗಾಳ(26) ಹೆಚ್ಚು ಯುವ ಮುಖಂಡರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಸಾಂಸ್ಥಿಕ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಸ್ಪಷ್ಟ ಹಾಜರಾತಿ ಸೂಚನೆಗಳನ್ನು ನಿರ್ಲಕ್ಷಿಸಿದ ಪದಾಧಿಕಾರಿಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.
ರ‍್ಯಾಲಿಯಲ್ಲಿ ಹಾಜರಾತಿಯನ್ನು ಪತ್ತೆಹಚ್ಚಲು ಕಾಂಗ್ರೆಸ್, ಬಾರ್‌ಕೋಡ್ ಸ್ಕ್ಯಾನರ್‌ಗಳು ಮತ್ತು ಅದರ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿತ್ತು.