ರಾಹುಲ್ ನೇತೃತ್ವದ ರಾಮಲೀಲಾ ಮೈದಾನದ Rallyಗೆ ಗೈರು: 60 ಯುವ ಕಾಂಗ್ರೆಸ್ ನಾಯಕರ ಅಮಾನತು!

ಮಧ್ಯಪ್ರದೇಶದ ಐವರು ಉಪಾಧ್ಯಕ್ಷರು, 14 ಪ್ರಧಾನ ಕಾರ್ಯದರ್ಶಿಗಳು, 32 ಕಾರ್ಯದರ್ಶಿಗಳು ಮತ್ತು ಒಂಬತ್ತು ಜಿಲ್ಲಾ ಅಧ್ಯಕ್ಷರು ಸೇರಿದಂತೆ ಒಟ್ಟು 60 ಪದಾಧಿಕಾರಿಗಳನ್ನು ಯುವ ಕಾಂಗ್ರೆಸ್ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.
Rahul Gandhi
ರಾಹುಲ್ ಗಾಂಧಿ
Updated on: 

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇತ್ತೀಚಿಗೆ ರಾಮಲೀಲಾ ಮೈದಾನದಲ್ಲಿ ನಡೆದ Rallyಯಲ್ಲಿ ಭಾಗವಹಿಸದ ಮಧ್ಯಪ್ರದೇಶದ 60 ಯುವ ಕಾಂಗ್ರೆಸ್ ನಾಯಕರನ್ನು ಅಮಾನತುಗೊಳಿಸಲಾಗಿದೆ. ಇದು ಪಕ್ಷದ ರಾಜ್ಯ ಘಟಕದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿರ್ಧಾರವನ್ನು ಹಲವು ನಾಯಕರು 'ಏಕಪಕ್ಷೀಯ' ಮತ್ತು 'ಪ್ರಜಾಪ್ರಭುತ್ವ ವಿರೋಧಿ' ಎಂದು ಕರೆದಿದ್ದಾರೆ.

ತಮ್ಮ ಕುಟುಂಬದಲ್ಲಿನ ಅನಾರೋಗ್ಯ ಅಥವಾ ಅಂತ್ಯಕ್ರಿಯೆಯಂತಹ ತುರ್ತು ವೈಯಕ್ತಿಕ ಕಾರಣಗಳಿಂದಾಗಿ ನವೆಂಬರ್ 1 ರಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಅಮಾನತುಗೊಂಡ ನಾಯಕರು ತಿಳಿಸಿದ್ದಾರೆ. ಅಲ್ಲದೆ, ಈ ಶಿಸ್ತು ಕ್ರಮ ಕ್ಷೇತ್ರಗಳಲ್ಲಿ ತಮ್ಮನ್ನು ಅಪಹಾಸ್ಯ ಮಾಡಲು ಬಿಜೆಪಿಗೆ ಸುಲಭವಾದ ಅವಕಾಶವನ್ನು ಒದಗಿಸಿಕೊಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.

ನವೆಂಬರ್ 3 ರಂದು, ಮಧ್ಯಪ್ರದೇಶದ ಐವರು ಉಪಾಧ್ಯಕ್ಷರು, 14 ಪ್ರಧಾನ ಕಾರ್ಯದರ್ಶಿಗಳು, 32 ಕಾರ್ಯದರ್ಶಿಗಳು ಮತ್ತು ಒಂಬತ್ತು ಜಿಲ್ಲಾ ಅಧ್ಯಕ್ಷರು ಸೇರಿದಂತೆ ಒಟ್ಟು 60 ಪದಾಧಿಕಾರಿಗಳನ್ನು ಯುವ ಕಾಂಗ್ರೆಸ್ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

Rahul Gandhi
'ಸರ್ಕಾರಿ ಯೋಜನೆಗಳಿಗೆ ಆಧಾರ್ ಕಾರ್ಡ್ ಬದಲು ವೋಟರ್ ಐಡಿ? ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ!

ನಾಯಕರು Rally ಗೆ ಗೈರುಹಾಜರಾಗಿರುವುದನ್ನು "ಸಾಂಸ್ಥಿಕ ಶಿಸ್ತು ಉಲ್ಲಂಘನೆ" ಎಂದು ಬಣ್ಣಿಸಲಾಗಿದ್ದು, ಮುಂದಿನ ಆದೇಶದವರೆಗೆ ಈ ಕ್ರಮ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ. ತಮ್ಮ ವಿರುದ್ಧ ಈ ಕ್ರಮ ಕೈಗೊಳ್ಳುವ ಮೊದಲು ಕನಿಷ್ಠ ಪಕ್ಷ 'ಕಾರಣ ಕೇಳುವ ನೋಟಿಸ್' (show-cause notice) ಕೂಡ ನೀಡಿಲ್ಲ ಎಂದು ನಾಯಕರು ದೂರಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ವಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ, ನವೆಂಬರ್ 1 ರಂದು ನವದೆಹಲಿಯ ರಾಮ ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷವು Rallyಯನ್ನು ಆಯೋಜಿಸಿತ್ತು. ಅಮಾನತುಗೊಂಡಿರುವ ಯುವ ಕಾಂಗ್ರೆಸ್ ಕಾರ್ಯದರ್ಶಿ ದಿವ್ಯಾಂಶು ಮಿಶ್ರಾ (ಅಲಿಯಾಸ್ ಅಂಶು) ಅವರು, ತಮ್ಮ ಕುಟುಂಬದ ಸದಸ್ಯರೊಬ್ಬರು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ತಮಗೆ Rally ಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X