

ಮುಂಬೈ: 904.32 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಜಾರ್ ಮಾಲೀಕ, ಖ್ಯಾತ ಉದ್ಯಮಿ ಕಿಶೋರ್ ಬಿಯಾನಿ ಮತ್ತು ಫ್ಯೂಚರ್ ರಿಟೇಲ್ ಲಿಮಿಟೆಡ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಫ್ಯೂಚರ್ ಗ್ರೂಪ್‌ನ ಸಂಸ್ಥಾಪಕ ಕಿಶೋರ್ ಬಿಯಾನಿ, ಮಾರುಕಟ್ಟೆ ನಿಯಂತ್ರಕರು, ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸಾಲದಾತರಿಂದ ಹಲವಾರು ಹಣಕಾಸು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಈ ಪ್ರಕರಣದಲ್ಲಿ, ಕಿಶೋರ್ ಬಿಯಾನಿ ಅವರ ಸಹೋದರ ರಾಕೇಶ್ ಬಿಯಾನಿ ವಿರುದ್ಧವೂ ಸಿಬಿಐ (CBI) ಪ್ರಕರಣ ದಾಖಲಿಸಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
"ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂಬೈನಲ್ಲಿರುವ 'ಸ್ಟ್ರೆಸ್ಡ್ ಅಸೆಟ್ಸ್ ಮ್ಯಾನೇಜ್‌ಮೆಂಟ್ ಬ್ರಾಂಚ್-III' ನೀಡಿದ ದೂರಿನ ಮೇರೆಗೆ, ಸಿಬಿಐ (CBI) ಪ್ರಕರಣ ದಾಖಲಿಸಿದೆ.
ಬಿಗ್ ಬಜಾರ್, ಫುಡ್ ಬಜಾರ್, ಎಫ್‌ಬಿಬಿ (ಫ್ಯಾಷನ್ ಅಟ್ ಬಿಗ್ ಬಜಾರ್) ಮತ್ತು ಸೆಂಟ್ರಲ್ (ಲೈಫ್‌ಸ್ಟೈಲ್ ಸ್ಟೋರ್‌ಗಳು) ಫ್ಯೂಚರ್ ರಿಟೇಲ್ ಗುಂಪಿನ ಭಾಗವಾಗಿದ್ದವು.