ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಲಾಲು ಪ್ರಸಾದ್‌ ಯಾದವ್ ಗೆ ಜಾಮೀನು ಮಂಜೂರು!

ನ್ಯಾಯಾಲಯದ ಕಲಾಪಗಳಿಗೆ ಪದೇ ಪದೇ ಗೈರುಹಾಜರಾದ ಹಿನ್ನೆಲೆಯಲ್ಲಿ ಲಾಲು ಪ್ರಸಾದ್ ವಿರುದ್ಧ ವಾರಂಟ್‌ಗಳು ಮತ್ತು ನೋಟಿಸ್ ಗಳನ್ನು ಹೊರಡಿಸಲಾಗಿತ್ತು.
Lalu Prasad
ಲಾಲು ಪ್ರಸಾದ್‌ ಯಾದವ್
Updated on: 

ಸಿವಾನ್: ಬಿಹಾರದ ಸಿವಾನ್ ಜಿಲ್ಲೆಯ ನ್ಯಾಯಾಲಯವೊಂದು ಶುಕ್ರವಾರ ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ್ ಅವರಿಗೆ ಜಾಮೀನು ನೀಡಿದೆ. 2011ರ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ 'ಮಾದರಿ ನೀತಿ ಸಂಹಿತೆ'ಯನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ನ್ಯಾಯಾಲಯದ ಕಲಾಪಗಳಿಗೆ ಪದೇ ಪದೇ ಗೈರುಹಾಜರಾದ ಹಿನ್ನೆಲೆಯಲ್ಲಿ ಲಾಲು ಪ್ರಸಾದ್ ವಿರುದ್ಧ ವಾರಂಟ್‌ಗಳು ಮತ್ತು ನೋಟಿಸ್ ಗಳನ್ನು ಹೊರಡಿಸಲಾಗಿತ್ತು. ಇದರ ಬೆನ್ನಲ್ಲೇ ಅವರು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್-I (ACJM-I) ಅವರ ನ್ಯಾಯಾಲಯದ ಮುಂದೆ ಶುಕ್ರವಾರ ಖುದ್ದಾಗಿ ಹಾಜರಾದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಲಾಲು ಪ್ರಸಾದ್ ಅವರ ಪರ ವಕೀಲ ಕಾಮೇಶ್ವರ್ ತಿವಾರಿ, ತಮ್ಮ ಕಕ್ಷಿದಾರರು ಆರೋಗ್ಯ ಸಮಸ್ಯೆಗಳಿಂದಾಗಿ ಈ ಹಿಂದೆ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಅವರ ಗೈರುಹಾಜರಿಯು ಉದ್ದೇಶಪೂರ್ವಕವಾಗಿರಲಿಲ್ಲ ಎಂದು ತಿಳಿಸಿದರು.

"ಆರೋಗ್ಯ ಸಮಸ್ಯೆಗಳ ಕಾರಣದಿಂದ ಲಾಲು ಪ್ರಸಾದ್ ಅವರಿಗೆ ಈ ಹಿಂದೆ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಅದು ಉದ್ದೇಶಪೂರ್ವಕವಾಗಿ ಮಾಡಿದ್ದಾಗಿರಲಿಲ್ಲ. ಕಕ್ಷಿದಾರರ ಆರೋಗ್ಯ ಸ್ಥಿತಿಯ ಬಗ್ಗೆ ನ್ಯಾಯಾಲಯಕ್ಕೆ ವಿವರಿಸಿದೆ. ನ್ಯಾಯಾಲಯವು ಅವರ ಮನವಿಯನ್ನು ಪುರಸ್ಕರಿಸಿ ಜಾಮೀನು ನೀಡಿದೆ ಎಂದು ತಿವಾರಿ ಹೇಳಿದರು.

2011ರಲ್ಲಿ ದರೌಂಡಾ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಕೊನೆಯ ದಿನದಂದು, ಅನುಮತಿಸಲಾದ ಸಮಯವನ್ನೂ ಮೀರಿ ಲಾಲು ಪ್ರಸಾದ್ ಅವರು ಚುನಾವಣಾ Rally ಯಲ್ಲಿ ಮಾತನಾಡಿದರು ಎಂಬ ಆರೋಪದ ಮೇಲೆ ಈ ಪ್ರಕರಣ ದಾಖಲಾಗಿತ್ತು.

Lalu Prasad
ನನ್ನ ಮತ್ತು ತಂದೆ ಲಾಲು ಪ್ರಸಾದ್ ಹತ್ಯೆಗೆ ಸಂಚು: ತೇಜ್ ಪ್ರತಾಪ್ ಶಾಕಿಂಗ್ ಆರೋಪ; ಕೇಸ್ ದಾಖಲು

ಈ ಪ್ರಕರಣದಲ್ಲಿ ಆರೋಪಿಯಾಗಿದ್ದ, ಆಗಿನ ಆರ್‌ಜೆಡಿ ಅಭ್ಯರ್ಥಿ ಪರಮೇಶ್ವರ್ ಸಿಂಗ್ ಅವರು ಈಗಾಗಲೇ ನಿಧನರಾಗಿದ್ದಾರೆ. ಜಾಮೀನು ಆದೇಶ ಹೊರಬಿದ್ದ ನಂತರ, ನ್ಯಾಯಾಲಯದ ಹೊರಗೆ ಲಾಲು ಪ್ರಸಾದ್ ಅವರ ಅಪಾರ ಸಂಖ್ಯೆಯ ಬೆಂಬಲಿಗರು ಜಮಾಯಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X