ಪಟಾಕಿಗಳು ಕಾಯಿಲೆಗಳನ್ನು ಗುಣಪಡಿಸುತ್ತೆ ಎಂದ ಬಂಗಾಳ ಬಿಜೆಪಿ ಶಾಸಕಿ, ವಿವಾದ ಸೃಷ್ಟಿ!

ಕೋಲ್ಕತ್ತಾದ ಟಾಲಿಗಂಜ್ ವಿಧಾನಸಭಾ ಕ್ಷೇತ್ರದ ಪಶ್ಚಿಮ ಬಂಗಾಳ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ, ಪಟಾಕಿಗಳು ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂದು ಹೇಳಿದ್ದಾರೆ.
Papiya Adhikari
ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ
Updated on: 

ಕೋಲ್ಕತ್ತಾ: ಕೋಲ್ಕತ್ತಾದ ಟಾಲಿಗಂಜ್ ವಿಧಾನಸಭಾ ಕ್ಷೇತ್ರದ ಪಶ್ಚಿಮ ಬಂಗಾಳ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ, ಪಟಾಕಿಗಳು ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂದು ಹೇಳಿದ್ದಾರೆ. ಪರಿಸರ ಸ್ನೇಹಿ (ಗ್ರೀನ್) ಪಟಾಕಿಗಳನ್ನು ಬಳಸುವಂತೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸಾರ್ವಜನಿಕರಿಗೆ ಮನವಿ ಮಾಡುತ್ತಿರುವ ಬೆನ್ನಲ್ಲೇ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಸಾರ್ವಜನಿಕ ಪೂಜಾ ಪೆಂಡಾಲ್ ಒಂದರಲ್ಲಿ ಕಾಳಿ ಪೂಜೆಯ ವಿಗ್ರಹ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಶಾಸಕಿ ಪಾಪಿಯಾ, ನಾವು ಪಟಾಕಿಗಳನ್ನು ಸಿಡಿಸುತ್ತೇವೆ. ಪಟಾಕಿಗಳು ಅನೇಕ ಕಾಯಿಲೆಗಳನ್ನು ಗುಣಪಡಿಸುವುದನ್ನು ನೀವು ನೋಡುತ್ತೀರಿ ಎಂದು ಹೇಳಿದರು.

Papiya Adhikari
ಹಣತೆಗಳು ಮತ್ತು ಕಾಶ್ಮೀರಿ ಆಹಾರ: ಇಂದಿರಾ ಗಾಂಧಿ ನಿವಾಸದಲ್ಲಿನ 'ದೀಪಾವಳಿ' ಸಂಭ್ರಮವನ್ನು ನೆನಪಿಸಿಕೊಂಡ ಸೋನಿಯಾ ಗಾಂಧಿ! Video

ನಮ್ಮ ಮುಖ್ಯಮಂತ್ರಿಗಳು ಕಾಳಿ ಪೂಜಾ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸಬಹುದು ಎಂದು ಹೇಳಿದ್ದಾರೆ. ಆದರೆ ಅದು ಸರ್ಕಾರ ರೂಪಿಸಿರುವ ನಿಯಮಗಳು ಮತ್ತು ನಿರ್ಬಂಧಗಳಿಗೆ ಒಳಪಟ್ಟು ನಡೆಯಬೇಕು. ಪೊಲೀಸ್ ಠಾಣೆಗಳು ನೀಡಿರುವ ಮಾರ್ಗಸೂಚಿಗಳ ಪ್ರಕಾರವೇ ಪಟಾಕಿಗಳನ್ನು ಬಳಸಬೇಕು. ಆದರೆ, ಪಟಾಕಿಗಳು ಕಾಯಿಲೆಗಳನ್ನು ಗುಣಪಡಿಸಬಲ್ಲವು ಎಂಬುದು ಸತ್ಯ ಎಂದು ಸೇರಿಸಿದರು.

ಟಾಲಿಗಂಜ್ ಪ್ರದೇಶದಲ್ಲಿ ನಡೆದ ಈ ಅನಾವರಣ ಸಮಾರಂಭದಲ್ಲಿ ಶಾಸಕಿಯ ಭಾಷಣ ಮಾಡುತ್ತಿದ್ದಾಗ ಅಲ್ಲಿ ಪಟಾಕಿಗಳನ್ನು ಸಿಡಿಸಲಾಗುತ್ತಿತ್ತು ಮತ್ತು ಭಾರೀ ಶಬ್ದ ಕೇಳಿಬರುತ್ತಿತ್ತು. ಕಳೆದ ಕೆಲವು ದಿನಗಳಿಂದ ಕೋಲ್ಕತ್ತಾ ಮತ್ತು ವಿವಿಧ ಜಿಲ್ಲೆಗಳಲ್ಲಿ ಕಾಳಿ ಪೂಜಾ ಪೆಂಡಾಲ್‌ಗಳಲ್ಲಿ ವಿಗ್ರಹ ಅನಾವರಣ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿಗಳು, ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕವೇ ಪಟಾಕಿಗಳನ್ನು ಸಿಡಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದರು ಎಂಬುದು ಗಮನಾರ್ಹ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X