ದೀಪಾವಳಿಗೆ ಕೈಯಾರೆ ಜಾಂಗೀರ್, ಬೇಸನ್ ಲಡ್ಡು ತಯಾರಿಸಿದ ರಾಹುಲ್ ಗಾಂಧಿ; Photos

ರಾಹುಲ್ ಗಾಂಧಿ ಮತ್ತು ದೀಪಾವಳಿಯ ಸಿಹಿ ತಯಾರಿಯ ಸಂಭ್ರಮ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಹಂಚಿಕೊಂಡಿದೆ.
Jangir preparation by Rahul Gandhi
ಜಾಂಗಿರಿ ತಯಾರಿಸುತ್ತಿರುವ ರಾಹುಲ್ ಗಾಂಧಿ
Updated on: 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿತಿಂಡಿಗಳನ್ನು ತಯಾರಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸೇವಾದಳವು ಸಾಮಾಜಿಕ ಮಾಧ್ಯಮದಲ್ಲಿ, "ರಾಹುಲ್ ಗಾಂಧಿ ಮತ್ತು ದೀಪಾವಳಿಯ ಸಿಹಿ ತಯಾರಿಯ ಸಂಭ್ರಮ!" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಹಂಚಿಕೊಂಡಿದೆ.

ದೀಪಾವಳಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೆಹಲಿಯ ಅತ್ಯಂತ ಹಳೆಯ ಹಾಗೂ ಪ್ರಸಿದ್ಧ ಸಿಹಿತಿಂಡಿ ಅಂಗಡಿಗಳಲ್ಲಿ ಒಂದಾದ 'ಘಂಟೇವಾಲಾ'ಗೆ ಭೇಟಿ ನೀಡಿದರು.

1790ರಲ್ಲಿ ಹಳೆಯ ದೆಹಲಿಯಲ್ಲಿ ಸ್ಥಾಪನೆಯಾದ ಈ ಅಂಗಡಿಗೆ ಸುದೀರ್ಘ ಇತಿಹಾಸವಿದೆ. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಭಾರತದ ಹಲವು ತಲೆಮಾರುಗಳ ರಾಜಕೀಯ ನಾಯಕರಿಗೆ ಈ ಅಂಗಡಿಯ ಸಿಹಿತಿಂಡಿಗಳನ್ನು ಉಣಬಡಿಸಲಾಗಿದೆ.

ಭೇಟಿಯ ವೇಳೆ ರಾಹುಲ್ ಗಾಂಧಿ ಅವರನ್ನು ಜಾಂಗಿರಿ ಸ್ವೀಟ್ ತಯಾರಿಸುವ ಸ್ಥಳಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಬಾಣಸಿಗರು ಸಾಂಪ್ರದಾಯಿಕ ವಿಧಾನದಲ್ಲಿ ಜಾಂಗಿರಿ ತಯಾರಿಸುವ ಪ್ರಕ್ರಿಯೆಯನ್ನು ವಿವರಿಸಿದರು.

ಜಾಂಗಿರಿ ಉತ್ತರ ಪ್ರದೇಶದ ಪ್ರಸಿದ್ಧ ಸಿಹಿತಿಂಡಿಯಾಗಿದ್ದು, ಉದ್ದಿನ ಬೇಳೆಯ ಹಿಟ್ಟನ್ನು ಹೂವಿನ ಆಕಾರದಲ್ಲಿ ಕಾದ ಎಣ್ಣೆಯಲ್ಲಿ ಕರಿದು, ಬಳಿಕ ಸಕ್ಕರೆ ಪಾಕದಲ್ಲಿ ನೆನೆಸಿ ತಯಾರಿಸಲಾಗುತ್ತದೆ. ಏಪ್ರನ್ ಧರಿಸಿದ ರಾಹುಲ್ ಗಾಂಧಿ ಕೂಡ ಸ್ವತಃ ಜಾಂಗಿರ್ ತಯಾರಿಸಲು ಯತ್ನಿಸಿದರು.

ಬಳಿಕ ರಾಹುಲ್ ಗಾಂಧಿ ಅವರು ಕಡಲೆ ಹಿಟ್ಟಿನ ಹಲ್ವಾವನ್ನು ಕರಿಯಲು ಹಾಗೂ ಲಡ್ಡುಗಳನ್ನು ತಯಾರಿಸಲು ಕೂಡ ಪ್ರಯತ್ನಿಸಿದರು. ಈ ವೇಳೆ, "ಇದು ಅಂದುಕೊಂಡಷ್ಟು ಸುಲಭವಲ್ಲ" ಎಂದು ಉದ್ಗರಿಸಿದರು. ಸಿಹಿತಿಂಡಿಗಳ ಹಿಂದಿನ ಪರಿಶ್ರಮದ ಕುರಿತು ಮಾತನಾಡಿದ ಅವರು, "ನಾವು ಸಿಹಿತಿಂಡಿಗಳನ್ನು ತಿನ್ನುತ್ತೇವೆ. ಆದರೆ, ಅವು ನಮ್ಮ ಕೈ ಸೇರುವ ಹಿಂದಿನ ಶ್ರಮದ ಬಗ್ಗೆ ಯೋಚಿಸುವುದಿಲ್ಲ. ಇದರಲ್ಲಿ ರೈತರು, ಕಾರ್ಮಿಕರು ಹಾಗೂ ಸಿಹಿತಿಂಡಿ ತಯಾರಿಸುವ ಕುಶಲಕರ್ಮಿಗಳ ಪರಿಶ್ರಮವೂ ಸೇರಿದೆ" ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X