ಅತ್ಯಾಚಾರ, ಸುಲಿಗೆ ಪ್ರಕರಣ: ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಟಿಎಂಸಿ ಶಾಸಕರ ಬಂಧನ

ದಾಸ್ ಅವರನ್ನು ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರಕ್ಕೆ ಕರೆತರಲಾಗುವುದು ಮತ್ತು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.
Trinamool Congress MLA Paresh Ram DasPhoto
ಟಿಎಂಸಿ ಶಾಸಕ ಪರೇಶ್ ರಾಮ್ ದಾಸ್ online desk
Updated on: 

ಕೋಲ್ಕತ್ತ: ಅತ್ಯಾಚಾರ, ಸುಲಿಗೆ ಮತ್ತು ಚುನಾವಣೆ ನಂತರದ ಹಿಂಸಾಚಾರಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ, ತೃಣಮೂಲ ಕಾಂಗ್ರೆಸ್ ಶಾಸಕ ಪರೇಶ್ ರಾಮ್ ದಾಸ್ ಅವರನ್ನು ಸೋಮವಾರ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ತಲೆಮರೆಸಿಕೊಂಡಿದ್ದ 'ಕ್ಯಾನಿಂಗ್ ಪಶ್ಚಿಮ್' (Canning Paschim) ಕ್ಷೇತ್ರದ ಶಾಸಕರನ್ನು ಬರುಯಿಪುರ ಪೊಲೀಸರ ವಿಶೇಷ ತಂಡವೊಂದು ಮಧ್ಯಾಹ್ನ ವೇಳೆ ವಶಕ್ಕೆ ತೆಗೆದುಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಟಿಎಂಸಿ (TMC) ನಾಯಕ ಮುಂಬೈಗೆ ತೆರಳಲು ವಿಮಾನ ಹತ್ತಲು ಸಿದ್ಧರಾಗಿದ್ದರು.

Trinamool Congress MLA Paresh Ram DasPhoto
'ಅಮ್ಮಾ, ಅಮ್ಮಾ': ದುರ್ಗಾ ಪೂಜೆ ವೇಳೆ ಭಾವುಕರಾಗಿ ಕಣ್ಣೀರಿಟ್ಟ TMC ಸಂಸದ ಕಲ್ಯಾಣ್ ಬ್ಯಾನರ್ಜಿ; ವಿಡಿಯೋ ವೈರಲ್

"ಅವರು ಸಾಕಷ್ಟು ಸಮಯದಿಂದ ತಲೆಮರೆಸಿಕೊಂಡಿದ್ದರು. ಇಂದು ನಮ್ಮ ತಂಡ ಅವರನ್ನು ವಿಮಾನ ನಿಲ್ದಾಣದಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ (PTI) ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ದಾಸ್ ಅವರನ್ನು ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರಕ್ಕೆ ಕರೆತರಲಾಗುವುದು ಮತ್ತು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X