ಭಾರತೀಯ ಸೇನೆ ಹೊಸ ಪ್ರಯೋಗ: ಜಮ್ಮು-ಕಾಶ್ಮೀರದಲ್ಲಿ ಹೈಟೆಕ್ ಕಣ್ಗಾವಲು, ರೋಬೋಟ್ ನಿಯೋಜನೆ-Video

ಜಮ್ಮು-ಕಾಶ್ಮೀರದ ಅಖ್ನೂರ್ ಪ್ರದೇಶದಲ್ಲಿ ಗಡಿ ಕಾವಲುಗಾಗಿ ರೋಬೋಟಿಕ್ ಹೇಸರಗತ್ತೆಗಳನ್ನು (Robotic Mules) ನಿಯೋಜಿಸಲಾಗಿದ್ದು, ಈ ಮೂಲಕ ಗಡಿ ರಕ್ಷಣೆಯಲ್ಲಿ ಹೊಸ ತಂತ್ರಜ್ಞಾನಕ್ಕೆ ಸೇನೆ ಆದ್ಯತೆ ನೀಡಿದೆ.
Indian Army Deploys Advanced Robotic Mules to Strengthen Border Security
ಗಡಿ ಕಾಯಲು ರೊಬೋಟ್ ಗಳ ನಿಯೋಜನೆ
Updated on: 

ಶ್ರೀನಗರ: ದೇಶದ ಗಡಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಭಾರತೀಯ ಸೇನೆ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದು, ಗಡಿ ಕಾಯಲು ರೋಬೋಟ್ ಗಳ ನಿಯೋಜನೆ ಮಾಡಲಾಗಿದೆ.

ಜಮ್ಮು-ಕಾಶ್ಮೀರದ ಅಖ್ನೂರ್ ಪ್ರದೇಶದಲ್ಲಿ ಗಡಿ ಕಾವಲುಗಾಗಿ ರೋಬೋಟಿಕ್ ಹೇಸರಗತ್ತೆಗಳನ್ನು (Robotic Mules) ನಿಯೋಜಿಸಲಾಗಿದ್ದು, ಈ ಮೂಲಕ ಗಡಿ ರಕ್ಷಣೆಯಲ್ಲಿ ಹೊಸ ತಂತ್ರಜ್ಞಾನಕ್ಕೆ ಸೇನೆ ಆದ್ಯತೆ ನೀಡಿದೆ.

ಈ ರೋಬೋಟಿಕ್ ಹೇಸರಗತ್ತೆಗಳು ಕಠಿಣ ಭೌಗೋಳಿಕ ಪ್ರದೇಶಗಳಲ್ಲೂ ಸುಲಭವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿವೆ. ಗಡಿ ಪ್ರದೇಶಗಳಲ್ಲಿ ಕಣ್ಗಾವಲು ನಡೆಸುವುದು, ಶತ್ರುಗಳ ಚಲನವಲನಗಳನ್ನು ಪತ್ತೆ ಹಚ್ಚುವುದು ಮತ್ತು ಸೈನಿಕರಿಗೆ ನೈಜ ಸಮಯದ ಗುಪ್ತಚರ ಮಾಹಿತಿ ಒದಗಿಸುವುದು ಇವುಗಳ ಪ್ರಮುಖ ಕೆಲಸವಾಗಿದೆ.

Indian Army Deploys Advanced Robotic Mules to Strengthen Border Security
ಅಸ್ಸಾಂನಿಂದ ಕರೆತಂದ ನಾಲ್ಕೇ ದಿನಕ್ಕೆ ಮತ್ತೆ ಹೆಣ್ಣು ಹುಲಿ ಪರಾರಿ; ಕೇಜ್ ಕೆಳಗೆ ಸುರಂಗ ತೋಡಿ ಗ್ರೇಟ್ ಎಸ್ಕೇಪ್!

ಗಡಿ ಭದ್ರತೆಯಲ್ಲಿ ತಂತ್ರಜ್ಞಾನದ ಬಳಕೆ

ಗಡಿ ಪ್ರದೇಶಗಳಲ್ಲಿ ಕಠಿಣ ಹವಾಮಾನ ಮತ್ತು ದುರ್ಗಮ ಭೂಪ್ರದೇಶದ ನಡುವೆ ಕಾರ್ಯನಿರ್ವಹಿಸುವುದು ಸೈನಿಕರಿಗೆ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭಗಳಲ್ಲಿ ರೋಬೋಟಿಕ್ ಸಾಧನಗಳ ಬಳಕೆ ಸೇನೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗಲಿದೆ.

ಆಧುನಿಕ ತಂತ್ರಜ್ಞಾನವನ್ನು ಸೇನಾ ಕಾರ್ಯಾಚರಣೆಗಳೊಂದಿಗೆ ಸಂಯೋಜಿಸುವ ಮೂಲಕ ಭಾರತದ ಗಡಿ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಭಾರತೀಯ ಸೇನೆ ಮುಂದಾಗಿದೆ.

ಆಧುನಿಕ ತಂತ್ರಜ್ಞಾನ ಮತ್ತು ಸೇನಾ ಸನ್ನದ್ಧತೆಯನ್ನು ಒಟ್ಟುಗೂಡಿಸುವ ಮೂಲಕ ಭಾರತದ ಗಡಿ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಈ ಕ್ರಮದ ಉದ್ದೇಶವಾಗಿದೆ.

ರೋಬೋಟಿಕ್ ಹೇಸರಗತ್ತೆಗಳ ವಿಶೇಷತೆಗಳೇನು?

- ನಿರಂತರ ಕಣ್ಗಾವಲು: ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಗಡಿ ಪ್ರದೇಶಗಳ ಮೇಲೆ ನಿಗಾ ಇಡುತ್ತವೆ.

- ಶತ್ರುಗಳ ಚಲನವಲನ ಪತ್ತೆ: ಶತ್ರುಗಳ ಚಟುವಟಿಕೆಗಳನ್ನು ಗುರುತಿಸಿ ಮಾಹಿತಿ ರವಾನಿಸುತ್ತವೆ.

- ಗುಪ್ತ ಕಾರ್ಯಾಚರಣೆಗೆ ನೆರವು: ಹೊಂಚುದಾಳಿ ಸೇರಿದಂತೆ ಸೇನೆಯ ಕಾರ್ಯಾಚರಣೆಗಳಿಗೆ ಸಹಕಾರ ನೀಡುತ್ತವೆ.

- ಕಠಿಣ ಪ್ರದೇಶಗಳಲ್ಲಿ ಗಸ್ತು: ದುರ್ಗಮ ಬೆಟ್ಟ, ಕಲ್ಲುಬಂಡೆ ಸೇರಿದಂತೆ ಸವಾಲಿನ ಪ್ರದೇಶಗಳಲ್ಲೂ ಸಂಚರಿಸಬಲ್ಲವು.

- ನೈಜ ಸಮಯದ ಮಾಹಿತಿ: ಗಡಿ ಭದ್ರತೆಗೆ ಅಗತ್ಯವಾದ ಮಾಹಿತಿಯನ್ನು ತ್ವರಿತವಾಗಿ ಒದಗಿಸಲು ನೆರವಾಗುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X