9ನೇ ಕ್ಲಾಸ್ ಪರೀಕ್ಷೆಯಲ್ಲಿ ಪಾಸ್: ಮಗನಿಗೆ 2.30 ಕೋಟಿ ಮೌಲ್ಯದ ಬಿಎಂಡಬ್ಲ್ಯೂ ಕಾರು ಗಿಫ್ಟ್ ನೀಡಿದ ಅಪ್ಪ

9ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮಗನಿಗೆ ತಂದೆಯೊಬ್ಬರು ಬರೋಬ್ಬರಿ ₹2.30 ಕೋಟಿ ಮೌಲ್ಯದ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Ex-lightman turned businessman gifts 2.30 crore BMW car to son for scoring good marks in 9th-grade exams
ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಪಾಸ್ ಆದ ಮಗನಿಗೆ ಕೋಟಿ ಬೆಲೆಯ ಕಾರು ಉಡುಗೊರೆ
Updated on: 

ಪುರ್ಬಾ ಬರ್ಧಮಾನ್ (ಪಶ್ಚಿಮ ಬಂಗಾಳ): ಸಾಮಾನ್ಯವಾಗಿ ಪೋಷಕರು ಮಕ್ಕಳು ಪರೀಕ್ಷೆಯಲ್ಲಿ ಒಳ್ಳೆಯ ಮಾರ್ಕ್ಸ್ ತಂದರೆ ಸಣ್ಣಪುಟ್ಟ ಗಿಫ್ಟ್ ಕೊಡುವುದು ವಾಡಿಕೆ, ಆದರೆ ಇಲ್ಲೊಬ್ಬ ತಂದೆ ನೀಡಿರುವ ದುಬಾರಿ ಉಡುಗೊರೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹೌದು, ಪಶ್ಚಿಮ ಬಂಗಾಳದ ಉದ್ಯಮಿಯೊಬ್ಬರು ಒಂಬತ್ತನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ತಮ್ಮ 15 ವರ್ಷದ ಮಗನಿಗೆ ಬರೋಬ್ಬರಿ ₹2.30 ಕೋಟಿ ಮೌಲ್ಯದ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಯಾರೀ ಬಾಲಕ?

ಕಾರು ಉಡುಗೊರೆ ಪಡೆದ 15 ವರ್ಷದ ಬಾಲಕನನ್ನು ಮೊಹಮ್ಮದ್ ತಲ್ಹಾ ಎಂದು ಗುರುತಿಸಲಾಗಿದೆ. ಈತ ಸದ್ಯ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇನ್ನು, ತಲ್ಹಾ ಅವರ ತಂದೆ ಶಂಸುದ್ದೀನ್ ಮಿದ್ಯಾ ಪ್ರಸಿದ್ಧ ಅಕ್ಕಿ ಉದ್ಯಮಿಯಾಗಿದ್ದು, ಒಂದು ಕಾಲದಲ್ಲಿ ಇವರು ಮುಂಬೈನಲ್ಲಿ ಲೈಟ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು, ನಂತರ ಕಷ್ಟಪಟ್ಟು ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ. ಇನ್ನು, ತಲ್ಹಾಗೆ 'ಬಿಎಂಡಬ್ಲ್ಯೂ ಎಂ4 ಕಾಂಪಿಟಿಷನ್' ಐಷಾರಾಮಿ ಸ್ಪೋರ್ಟ್ಸ್ ಕಾರು ಎಂದರೆ ತುಂಬಾ ಇಷ್ಟ. "ಒಂಬತ್ತನೇ ತರಗತಿಯ ಪರೀಕ್ಷೆಯಲ್ಲಿ ನೀನು ಉತ್ತಮ ಅಂಕಗಳನ್ನು ಗಳಿಸಿದರೆ, ನಿನಗೆ ಈ ಕಾರನ್ನು ಕೊಡಿಸುತ್ತೇನೆ" ಎಂದು ತಂದೆ ಶಂಸುದ್ದೀನ್ ಮಾತು ಕೊಟ್ಟಿದ್ದರು. ಮಗ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಂತೆ ತಂದೆ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

ಮುಂಬೈನಿಂದ ಬಂದ ಕಾರು

ಶಂಸುದ್ದೀನ್ ಅವರು ಮುಂಬೈನ ಅಂಧೇರಿಯಲ್ಲಿರುವ ಶೋರೂಮ್ ಒಂದರಿಂದ ಈ ಬಿಳಿ ಬಣ್ಣದ ಐಷಾರಾಮಿ ಕಾರನ್ನು ಖರೀದಿಸಿದ್ದರು. ಬಳಿಕ ಅದನ್ನು ವಿಶೇಷವಾಗಿ ಕಂಟೇನರ್ ಮೂಲಕ ಪಶ್ಚಿಮ ಬಂಗಾಳದ ತಮ್ಮ ಹಳ್ಳಿಗೆ ತರಿಸಿಕೊಂಡಿದ್ದಾರೆ. ಕಾರು ಗ್ರಾಮಕ್ಕೆ ಬರುತ್ತಿದ್ದಂತೆ ಅದನ್ನು ನೋಡಲು ಸ್ಥಳೀಯ ಜನರು ಮುಗಿಬಿದ್ದಿದ್ದರು.

Ex-lightman turned businessman gifts 2.30 crore BMW car to son for scoring good marks in 9th-grade exams
3 ತಿಂಗಳು ಕಾಯ್ದು ಪಡೆದ 'ಲಕ್ಕಿ ನಂಬರ್'ನಿಂದ ಸಿಎಂ ಹೆಸರಲ್ಲಿ ಮಹಾ ವಂಚನೆ! ಕೇರಳಂ ಸಿಎಂ ಹಳೆಯ ಮೊಬೈಲ್ ನಂಬರ್‌ನಿಂದ ಹಿರಿಯ ಅಧಿಕಾರಿಗಳಿಗೇ ವಂಚಿಸಿದ ಖದೀಮ

ಕಾರಿನ ವಿಶೇಷತೆ ಏನು?

ಈ ಬಿಎಂಡಬ್ಲ್ಯೂ ಎಂ4 ಕಾಂಪಿಟಿಷನ್ ಕಾರು ಕೇವಲ 3.5 ಸೆಕೆಂಡುಗಳಲ್ಲಿ 0 ಇಂದ 100 ಕಿಮೀ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ, ಭಾರತೀಯ ಕಾನೂನಿನ ಪ್ರಕಾರ ವಾಹನ ಚಲಾಯಿಸಲು 18 ವರ್ಷ ತುಂಬಿರಬೇಕು. ಮಗ ತಲ್ಹಾಗೆ ಈಗ ಕೇವಲ 15 ವರ್ಷ ವಯಸ್ಸಾಗಿರುವುದರಿಂದ, ಆತನಿಗೆ ಸದ್ಯಕ್ಕೆ ಕಾರು ಚಲಾಯಿಸಲು ಅನುಮತಿಯಿಲ್ಲ. ಕೇವಲ ಉಡುಗೊರೆಯಾಗಿ ಮಾತ್ರ ತಂದೆ ಮಗನಿಗೆ ಇದನ್ನು ನೀಡಿದ್ದಾರೆ. ಏತನ್ಮಧ್ಯೆ, ಸಾಮಾನ್ಯವಾಗಿ ಮಕ್ಕಳು ಪರೀಕ್ಷೆಯಲ್ಲಿ ಒಳ್ಳೆ ಮಾರ್ಕ್ಸ್ ತಂದರೆ ಪೋಷಕರು ಪೆನ್, ಸೈಕಲ್, ಮೊಬೈಲ್ ಅಥವಾ ಬಟ್ಟೆ ಕೊಡಿಸುತ್ತಾರೆ. ಆದರೆ ಇಷ್ಟೊಂದು ದುಬಾರಿ ಕಾರು ನೀಡಿರುವುದಕ್ಕೆ ಕೆಲವರು ತಂದೆಯ ಪ್ರೀತಿಯನ್ನು ಶ್ಲಾಘಿಸಿದರೆ, ಇನ್ನೂ ಕೆಲವರು "ಮಕ್ಕಳಿಗೆ ಇಷ್ಟು ಸಣ್ಣ ವಯಸ್ಸಿನಲ್ಲೇ ಇಂತಹ ದುಬಾರಿ ವಸ್ತುಗಳನ್ನು ಕೊಡುವುದು ಸರಿಯಲ್ಲ" ಎಂದು ಕಮೆಂಟ್ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X