'₹7 ಕೋಟಿ ಕೊಡಿ, ಇಲ್ಲದಿದ್ದರೆ...': ಬಿಷ್ಣೋಯ್ ಗ್ಯಾಂಗ್‌ನಿಂದ ಅರವಿಂದ್ ಕೇಜ್ರಿವಾಲ್, ಅವರ ಮಗಳಿಗೆ ಕೊಲೆ ಬೆದರಿಕೆ!

ಕರೆ ಮಾಡಿದ ವ್ಯಕ್ತಿ 7 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಲಕ್ ನಗರ ಶಾಸಕ ಜರ್ನೈಲ್ ಸಿಂಗ್ ಅವರು ದೆಹಲಿ ಪೊಲೀಸರಿಗೆ ತಿಳಿಸಿದ್ದಾರೆ.
'Pay Rs 7 Crore': Arvind Kejriwal, His Daughter Get Death Threat
ಅರವಿಂದ್ ಕೇಜ್ರಿವಾಲ್ - ಹರ್ಷಿತಾ ಕೇಜ್ರಿವಾಲ್
Updated on: 

ನವದೆಹಲಿ: ಬಾಲಿವುಡ್​ ನಟ ಟೈಗರ್ ಶ್ರಾಫ್​ ಮೇಲೆ ಗುಂಡಿನ ದಾಳಿ ನಡೆಸಿದ ಬೆನ್ನಲೇ, ದೆಹಲಿ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಮಗಳಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ.

ಕರೆ ಮಾಡಿದ ವ್ಯಕ್ತಿ 7 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಲಕ್ ನಗರ ಶಾಸಕ ಜರ್ನೈಲ್ ಸಿಂಗ್ ಅವರು ದೆಹಲಿ ಪೊಲೀಸರಿಗೆ ತಿಳಿಸಿದ್ದಾರೆ.

ವಿದೇಶಗಳಲ್ಲಿ ಸಂಪರ್ಕ ಹೊಂದಿರುವ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ತಮಗೆ ಫೋನ್ ಕರೆ ಮತ್ತು ವಾಟ್ಸಾಪ್ ಸಂದೇಶ ಬಂದಿದೆ ಎಂದು ಶಾಸಕ ಜರ್ನೈಲ್ ಸಿಂಗ್ ಅವರು ಹೇಳಿದ್ದಾರೆ.

'Pay Rs 7 Crore': Arvind Kejriwal, His Daughter Get Death Threat
CRPF ಯೋಧರ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಹೊಸ ಉಗ್ರ ಸಂಘಟನೆ; RSS, 'ಹಿಂದುತ್ವ ಆಡಳಿತ'ಕ್ಕೆ 'ವಿನಾಶಕಾರಿ' ಬೆದರಿಕೆ!

ನವೆಂಬರ್ 6 ರಂದು ಪಂಜಾಬ್‌ನ ಮೊಹಾಲಿಯಲ್ಲಿ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ, ಕರೆ ಮಾಡಿದ ವ್ಯಕ್ತಿ 7 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಹಣ ಪಾವತಿಸದಿದ್ದರೆ ಕೇಜ್ರಿವಾಲ್ ಮತ್ತು ಅವರ ಮಗಳು ಹರ್ಷಿತಾ ಕೇಜ್ರಿವಾಲ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

ಈ ಸಂಬಂಧ ಮೊಹಾಲಿಯ ಪೊಲೀಸರು ಬಿಎನ್‌ಎಸ್ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಪ್ರಕರಣವನ್ನು ಸೈಬರ್ ಅಪರಾಧ ಘಟಕದ ಸುನಿಲ್ ಕುಮಾರ್ ಅವರಿಗೆ ವರ್ಗಾಯಿಸಿದ್ದಾರೆ.

ಇನ್ನು ಈ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡ ಇನ್ಸ್​ಪೆಕ್ಟರ್​ ಸುನೀಲ್​ ಕುಮಾರ್, ಎಂಎಲ್​ಎ ಜರ್ನೈಲ್ ಸಿಂಗ್ ನೀಡಿದ ದೂರನ್ನು ಆಧರಿಸಿ, ಸೈಬರ್​ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಸಂದೇಶ ಕಳುಹಿಸಿದ ಮೊಬೈಲ್​ ಸಂಖ್ಯೆ ವಿವರ, ಡೇಟಾ, ಇಂರ್ಟನೆಟ್​ ಬಳಕೆ, ಲೊಕೇಶನ್ ಮೊದಲಾದ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸುತ್ತಿದ್ದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X