ಮುಸ್ಲಿಮರೊಂದಿಗೆ ಬ್ರಾಹ್ಮಣರು ಕೈಜೋಡಿಸಬೇಕು: ಒಬ್ಬ ಬ್ರಾಹ್ಮಣನನ್ನು ಆಯ್ಕೆ ಮಾಡುವುದರಿಂದ ಸಮಸ್ಯೆಗಳು ಬಗೆ ಹರಿಯಲ್ಲ; ಪ್ರಶಾಂತ್ ಕಿಶೋರ್

ಬ್ರಾಹ್ಮಣರು ಮತ್ತು ಮುಸ್ಲಿಮರ ನಡುವೆ ಸಾಮಾಜಿಕ ಒಮ್ಮತವಿತ್ತು ಎಂಬುದನ್ನು ನಾನು ಉಲ್ಲೇಖಿಸಿದ್ದೆ. ಆದರೆ, ಇತ್ತೀಚೆಗೆ ಬ್ರಾಹ್ಮಣರು ಬಿಜೆಪಿಯ ಪರ ವಾಲಿದ್ದಾರೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ನಿಂದಿಸಲು ಆರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
Prashanth Kishore
ಪ್ರಶಾಂತ್ ಕಿಶೋರ್
Updated on: 

ಪಾಟ್ನಾ: ಬಿಹಾರದ ಬ್ರಾಹ್ಮಣರು ಮುಸ್ಲಿಮರೊಂದಿಗೆ ಮತ್ತೆ ಬಾಂಧವ್ಯ ಬೆಳೆಸಿಕೊಳ್ಳುವ ಅಗತ್ಯವಿದೆ. ಬಿಜೆಪಿಯನ್ನು ಬೆಂಬಲಿಸುವ ಮೂಲಕ ಅವರು ಅನಗತ್ಯವಾಗಿ ಮುಸ್ಲಿಮರನ್ನು ದೂರ ಮಾಡಿದ್ದಾರೆ ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಹಳೆಯ ಸಾಮಾಜಿಕ ಮೈತ್ರಿಯನ್ನು ಮರುಸ್ಥಾಪಿಸುವ ಪ್ರಶಾಂತ್ ಅವರ ಸಲಹೆಯು, 'ಕಾಂಗ್ರೆಸ್‌ನ ಬಿ-ಟೀಮ್' ಆಗಿ ಕಾರ್ಯನಿರ್ವಹಿಸುತ್ತಿರುವುದನ್ನು ತೋರಿಸುತ್ತದೆ' ಎಂದು ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ ಆರೋಪಿಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಪ್ರಶಾಂತ್, 'ಮಿಥಿಲೇಶ್ ಅತಿಯಾದ ಜಾಣತನ ಪ್ರದರ್ಶಿಸುತ್ತಿರುವಂತಿದೆ. ಬ್ರಾಹ್ಮಣರು ತಮ್ಮ ರಾಜಕೀಯ ಪ್ರಭಾವವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಕಳವಳದ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದೆ' ಎಂದು ಹೇಳಿದ್ದಾರೆ.

ಬ್ರಾಹ್ಮಣರು ಮತ್ತು ಮುಸ್ಲಿಮರ ನಡುವೆ ಸಾಮಾಜಿಕ ಒಮ್ಮತವಿತ್ತು ಎಂಬುದನ್ನು ನಾನು ಉಲ್ಲೇಖಿಸಿದ್ದೆ. ಆದರೆ, ಇತ್ತೀಚೆಗೆ ಬ್ರಾಹ್ಮಣರು ಬಿಜೆಪಿಯ ಪರ ವಾಲಿದ್ದಾರೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ನಿಂದಿಸಲು ಆರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Prashanth Kishore
'ಪ್ರಶಾಂತ್ ಕಿಶೋರ್ ರಾಜಕೀಯ ಬೆಂಬಲಿಸುತ್ತೇನೆ, ಆದರೆ ಅವರ ಭವಿಷ್ಯ ಸವಾಲಿನಿಂದ ಕೂಡಿದೆ': ಕೇಂದ್ರ ಸಚಿವ ಚಿರಾಗ್ ಪಾಸ್ವಾನ್

ತಮ್ಮದೇ ಜಾತಿಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದರಿಂದ ಜೀವನ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಊಹೆಯನ್ನು ಅವರು ಪ್ರಶ್ನಿಸಿದರು. ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗದ ಕುರಿತಾದ ತಮ್ಮ ದೃಷ್ಟಿಕೋನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಮತ್ತು ಈ ಕ್ಷೇತ್ರದಿಂದ ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಸ್ಥಳೀಯರ ಸಲಹೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ನಿಮ್ಮ ಶಾಸಕರು (MLA) ಈಗಾಗಲೇ ಒಬ್ಬ ಬ್ರಾಹ್ಮಣರಾಗಿದ್ದಾರೆ, ಎಂದು ಹೇಳಿದ ಕಿಶೋರ್, ಕಳೆದ ಸುಮಾರು 15 ವರ್ಷಗಳಿಂದ ಈ ಸ್ಥಾನವು ಆ ಸಮುದಾಯದ ಕೈಯಲ್ಲೇ ಇದೆ ಮತ್ತು ಸ್ಥಳೀಯ ಸಂಸದರು ಕೂಡ ಬ್ರಾಹ್ಮಣರೇ ಆಗಿದ್ದಾರೆ ಎಂದು ನೆನಪಿಸಿದರು. "ಕೇವಲ ಒಬ್ಬ ಬ್ರಾಹ್ಮಣನನ್ನು ಆಯ್ಕೆ ಮಾಡುವುದರಿಂದಲೇ ನಿಮ್ಮ ಸಮಸ್ಯೆಗಳು ಬಗೆಹರಿಯುವುದಾಗಿದ್ದರೆ, ನೀವು ಇಷ್ಟೊಂದು ಕಷ್ಟಪಡುವ ಅಗತ್ಯವೇ ಇರುತ್ತಿರಲಿಲ್ಲ."

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X