ಪ್ರಯಾಣಕ್ಕೂ ಮುನ್ನವೇ 'ಟಿಪ್ಸ್': ಓಲಾ ಕಂಪನಿಗೆ 10 ಲಕ್ಷ ರೂ. ದಂಡ ವಿಧಿಸಿದ CCPA

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ನವೆಂಬರ್ 13, ಶುಕ್ರವಾರ ಹೊರಡಿಸಿದ ಪ್ರಕಟಣೆಯಲ್ಲಿ, ಓಲಾ ಅಪ್ಲಿಕೇಶನ್ ಅನ್ನು ನಿರ್ವಹಿಸುವ, ಮಾತೃ ಸಂಸ್ಥೆ ANI ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ಈ ಟಿಪ್ಸ್ ಆಯ್ಕೆಯನ್ನು ತಕ್ಷಣವೇ ತೆಗೆದುಹಾಕುವಂತೆ ನಿರ್ದೇಶಿಸಿದೆ.
Ola fined Rs 10 lakh over pre-ride tipping feature
ಓಲಾ
Updated on: 

ನವದೆಹಲಿ: ಪ್ರಿ-ರೈಡ್ ಟಿಪ್ಪಿಂಗ್ ವೈಶಿಷ್ಟ್ಯದ ಮೂಲಕ ಗ್ರಾಹಕರನ್ನು ದಾರಿ ತಪ್ಪಿಸುತ್ತಿದ್ದ ಓಲಾ ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(CCPA) 10 ಲಕ್ಷ ರೂ. ದಂಡ ವಿಧಿಸಿದೆ.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ನವೆಂಬರ್ 13, ಶುಕ್ರವಾರ ಹೊರಡಿಸಿದ ಪ್ರಕಟಣೆಯಲ್ಲಿ, ಓಲಾ ಅಪ್ಲಿಕೇಶನ್ ಅನ್ನು ನಿರ್ವಹಿಸುವ, ಮಾತೃ ಸಂಸ್ಥೆ ANI ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ಈ ಟಿಪ್ಸ್ ಆಯ್ಕೆಯನ್ನು ತಕ್ಷಣವೇ ತೆಗೆದುಹಾಕುವಂತೆ ನಿರ್ದೇಶಿಸಿದೆ ಎಂದು ತಿಳಿಸಿದೆ.

ಸಾಮಾನ್ಯವಾಗಿ ‘ಟಿಪ್’ ಎಂಬುದು ಸೇವೆಯ ಬಳಿಕ ನೀಡುವ ಮೆಚ್ಚುಗೆಯಾಗಿದೆ. ಆದರೆ ರೈಡ್‌ಗೂ ಮುಂಚೆಯೇ ಹಣ ವಸೂಲಿ ಮಾಡುವ ಈ ಪದ್ಧತಿಯು ಗ್ರಾಹಕರನ್ನು ದಿಢೀರ್ ನಿರ್ಧಾರಗಳಿಗೆ ಒಳಪಡಿಸುವ ತಂತ್ರಗಾರಿಕೆಯಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

Ola fined Rs 10 lakh over pre-ride tipping feature
'ಮೋದಿಯಿಂದ ನನ್ನ ಫೋನ್ ಕದ್ದಾಲಿಕೆ': ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಗಂಭೀರ ಆರೋಪ

ಈ ದುರ್ನಡತೆ ಮತ್ತು ತಪ್ಪುದಾರಿಗೆಳೆಯುವ ಜಾಹೀರಾತು ನೀತಿಗಾಗಿ ಓಲಾ ಮಾತೃಸಂಸ್ಥೆಯಾದ ANI ಟೆಕ್ನಾಲಜೀಸ್ ಮೇಲೆ 10 ಲಕ್ಷ ರೂ ದಂಡ ವಿಧಿಸಲಾಗಿದೆ.

ಈ ರೀತಿ ಚಾಲಕರು ರೈಡ್ ಸ್ವೀಕರಿಸುವ ಮುನ್ನವೇ “ಹೆಚ್ಚುವರಿ ಹಣ ನೀಡಿದರೆ ಬೇಗ ರೈಡ್ ಕನ್ಫರ್ಮ್ ಆಗುತ್ತದೆ” ಎಂಬ ರೀತಿಯಲ್ಲಿ ಪ್ರಚೋದನೆ ನೀಡುವುದು ತಪ್ಪುದಾರಿಗೆಳೆಯುವ ಕ್ರಮವಾಗಿದೆ ಎಂದು ಸಿಸಿಪಿಎ ಅಭಿಪ್ರಾಯಪಟ್ಟಿದೆ.

ಪ್ರಯಾಣ ಪೂರ್ಣಗೊಂಡ ನಂತರವಷ್ಟೇ ಟಿಪ್ ನೀಡಲು ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಗಳು ಅವಕಾಶ ನೀಡುತ್ತವೆ. ಆದರೆ ಮುಂಗಡವಾಗಿ ಹಣ ಪಡೆಯುವುದು ಗ್ರಾಹಕರ ಹಿತಾಸಕ್ತಿಗೆ ವಿರೋಧವಾಗಿದೆ ಎಂದು ಸಿಸಿಪಿಎ ಸ್ಪಷ್ಟಪಡಿಸಿದೆ.

ಅಪ್ಲಿಕೇಶನ್‌ನಲ್ಲಿ ‘ಟಿಪ್’, ‘ಆಡ್-ಆನ್’ ಅಥವಾ ಯಾವುದೇ ಹೆಸರಿನಲ್ಲಿ ಮುಂಗಡವಾಗಿ ಹೆಚ್ಚುವರಿ ಹಣ ಪಡೆಯುವ ಎಲ್ಲಾ ಪ್ರಾಂಪ್ಟ್‌ಗಳು ಮತ್ತು ಇಂಟರ್‌ಫೇಸ್ ಅಂಶಗಳನ್ನು ತಕ್ಷಣವೇ ತೆಗೆದುಹಾಕುವಂತೆ ಆದೇಶಿಸಲಾಗಿದೆ. ಅಲ್ಲದೆ, 15 ದಿನಗಳೊಳಗೆ ಅನುಸರಣಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X