ನಿಗೂಢ ವಿದೇಶಿ ಪ್ರಜೆ: ಸೋನಿಯಾ ಗಾಂಧಿ ವಿರುದ್ಧ ವಿವಾದಾತ್ಮಕ ಪೋಸ್ಟ್‌; ಕಂಗನಾ ವಿರುದ್ಧ ಬಿತ್ತು FIR!

ಸಂಬಂಧಿಕರನ್ನು ಒಬ್ಬರ ನಂತರ ಒಬ್ಬರಂತೆ ಕೊಲ್ಲಲಾಯಿತು. ಅಲ್ಲದೇ ಸಂಜಯ್ ಗಾಂಧಿಯವರ ಮರಣದ ನಂತರ, ಅವರ ಪತ್ನಿ ಮೇನಕಾ ಗಾಂಧಿಯವರನ್ನು ನಿವಾಸದಿಂದ ಹೊರಹಾಕಲಾಯಿತು ಎಂಬ ಹೇಳಿಕೆಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Kangana Ranaut
ಕಂಗನಾ ರಣಾವತ್
Updated on: 

ಶಿಮ್ಲಾ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರ ಬಗ್ಗೆ ಎಕ್ಸ್‌ನಲ್ಲಿ ವಿವಾದಾತ್ಮಕ ಪೋಸ್ಟ್‌ ಮಾಡಿದ್ದ ಸಂಸದೆ ಕಂಗನಾ ರಾಣಾವತ್‌ ವಿರುದ್ಧ ಶಿಮ್ಲಾ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಕಂಗನಾ ಅವರು ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ʻನಿಗೂಢ ವಿದೇಶಿʼ (Mysterious Foreigner) ಎಂದು ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್‌ ವಿರುದ್ಧ ಶಿಮ್ಲಾ ನಿವಾಸಿ ಅತುಲ್ ಶರ್ಮಾ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿಯವರ ಸಾವಿನ ಬಗ್ಗೆ ಕಂಗನಾ ಪ್ರಚೋದನಕಾರಿ ಪೋಸ್ಟ್‌ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು.

ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 196 (ದ್ವೇಷಕ್ಕೆ ಪ್ರಚೋದನೆ), 353 (ಸಾರ್ವಜನಿಕ ದುಷ್ಕೃತ್ಯಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು 356ರ (ಮಾನನಷ್ಟ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಸಿಂಗ್ ಎಫ್‌ಐಆರ್ ಆಗಿರುವ ಬಗ್ಗೆ ದೃಢಪಡಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Kangana Ranaut
ಸಿನಿಮಾ ಆಗಲಿದೆ ಸೋನಿಯಾ ಗಾಂಧಿ ಆತ್ಮಚರಿತ್ರೆ: TPCC ಕಾರ್ಯಾಧ್ಯಕ್ಷರಿಂದ ಘೋಷಣೆ!

ಕಂಗನಾ ಅವರು ನ.10 ರಂದು ತಮ್ಮ ಎಕ್ಸ್‌ ಖಾತೆಯಲ್ಲಿ ವಿವಾದಾತ್ಮಕ ಪೋಸ್ಟ್‌ಗಳನ್ನು ಪ್ರಕಟಿಸಿದ್ದಾರೆ. ಪೋಸ್ಟ್‌ನಲ್ಲಿ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಸಾವಿನ ಸುತ್ತಲಿನ ಸಂದರ್ಭಗಳ ಬಗ್ಗೆ ಅನುಮಾನ ಮೂಡಿಸಲು ಅವರು ಯತ್ನಿಸಿದ್ದಾರೆ ಎಂದು ಶರ್ಮಾ ಆರೋಪಿಸಿದ್ದಾರೆ.

ಪೋಸ್ಟ್‌ನಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನು ʻನಿಗೂಢ ವಿದೇಶಿ ಪ್ರಜೆʼ ಎಂದು ಉಲ್ಲೇಖಿಸಲಾಗಿದೆ. ಅವರ ಸಂಬಂಧಿಕರನ್ನು ಒಬ್ಬರ ನಂತರ ಒಬ್ಬರಂತೆ ಕೊಲ್ಲಲಾಯಿತು. ಅಲ್ಲದೇ ಸಂಜಯ್ ಗಾಂಧಿಯವರ ಮರಣದ ನಂತರ, ಅವರ ಪತ್ನಿ ಮೇನಕಾ ಗಾಂಧಿಯವರನ್ನು ನಿವಾಸದಿಂದ ಹೊರಹಾಕಲಾಯಿತು ಎಂಬ ಹೇಳಿಕೆಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಪೋಸ್ಟ್‌ಗಳು ರಾಜಕೀಯ ಟೀಕೆಗಳನ್ನು ಮೀರಿವೆ ಮತ್ತು ಪ್ರಚೋದನಕಾರಿಯಾಗಿವೆ ಎಂದು ಶರ್ಮಾ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಮುದಾಯಗಳ ನಡುವಿನ ಸಾಮರಸ್ಯ ಮತ್ತು ರಾಷ್ಟ್ರೀಯ ಏಕತೆಗೆ ಧಕ್ಕೆ ತರುವಂತಹ ದಾರಿತಪ್ಪಿಸುವ ಮಾಹಿತಿಯನ್ನು ಈ ಪೋಸ್ಟ್‌ಗಳು ಹರಡಿವೆ ಎಂದು ದೂರುದಾರರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X