ಬಂಗಾಳದಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದ 6 ತಿಂಗಳಲ್ಲಿ 5ನೇ 'ಎನ್‌ಕೌಂಟರ್': ರತನ್ ಶೇಖ್‌ಗೆ ಗುಂಡಿಕ್ಕಿ ಹತ್ಯೆ!

ಪಶ್ಚಿಮ ಬಂಗಾಳದಲ್ಲಿ ಮತ್ತೊಂದು 'ಎನ್‌ಕೌಂಟರ್' ನಡೆದಿದೆ. ಬಿರ್ಭೂಮ್‌ನ ಶಾಂತಿನಿಕೇತನ ಪೊಲೀಸ್ ಠಾಣೆ ವ್ಯಾಪ್ತಿಯ ಲೈಕ್‌ಬಜಾರ್‌ನಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದ ಆರೋಪಿ ರತನ್ ಶೇಖ್ 'ಎನ್‌ಕೌಂಟರ್'ನಲ್ಲಿ ಸಾವನ್ನಪ್ಪಿದ್ದಾನೆ.
Ratan Sheikh Killed
ರತನ್ ಶೇಖ್ ಹತ್ಯೆ
Updated on: 

ಪಶ್ಚಿಮ ಬಂಗಾಳದಲ್ಲಿ ಮತ್ತೊಂದು 'ಎನ್‌ಕೌಂಟರ್' ನಡೆದಿದೆ. ಬಿರ್ಭೂಮ್‌ನ ಶಾಂತಿನಿಕೇತನ ಪೊಲೀಸ್ ಠಾಣೆ ವ್ಯಾಪ್ತಿಯ ಲೈಕ್‌ಬಜಾರ್‌ನಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದ ಆರೋಪಿ ರತನ್ ಶೇಖ್ 'ಎನ್‌ಕೌಂಟರ್'ನಲ್ಲಿ ಸಾವನ್ನಪ್ಪಿದ್ದಾನೆ. ನಾನೂರ್‌ನ ಚಾರ್ಕೋಲ್ ಗ್ರಾಮದ ಬಳಿಯ ಉಚ್ಕಾರನ್ ಪ್ರದೇಶದ ಇಟ್ಟಿಗೆ ಗೂಡಿನಲ್ಲಿದ್ದನು ಎಂದು ಪೊಲೀಸ್ ಮೂಲಗಳು ಹೇಳುತ್ತವೆ. ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ ರತನ್ ಗಾಯಗೊಂಡಿದ್ದನು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ರಾಜ್ಯದಲ್ಲಿ ನಡೆದ ಐದನೇ 'ಎನ್‌ಕೌಂಟರ್' ಬಗ್ಗೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ಬಂಗಾಳದಲ್ಲಿ ಅತ್ಯಾಚಾರಿಗಳು ಮತ್ತು ಕೊಲೆಗಾರರಿಗೆ ಜಾಗವಿಲ್ಲ. ನೀವು ಪೊಲೀಸರ ಮೇಲೆ ಗುಂಡು ಹಾರಿಸಿದರೆ, ಅವರು ಏನು ಬೇಕಾದರೂ ಮಾಡುತ್ತಾರೆ. ಪೊಲೀಸರು ಗುಂಡು ಹಾರಿಸಲು ಬಂದರೆ, ಅವರು ನಿಮಗೆ ಭಿಕ್ಷೆ ನೀಡುತ್ತಾರೆಯೇ? ಗೂಂಡಾಗಳೇ, ಬಾಂಗ್ಲಾದೇಶಕ್ಕೆ ಓಡಿಹೋಗಿ. ನೀವು ಇಲ್ಲೇ ಇದ್ದರೆ, ನಮಗೆ ಬೇಕಾದುದನ್ನು ಮಾಡುತ್ತೇವೆ ಎಂದು ಹೇಳಿದರು.

ಪೊಲೀಸ್ ಮೂಲಗಳ ಪ್ರಕಾರ, ಕಾನ್‌ಸ್ಟೆಬಲ್ ಮೇಲೆ ಗುಂಡು ಹಾರಿಸಿದ ಆರೋಪಿ ರತನ್‌ನನ್ನು ಭಾನುವಾರ ಪೂರ್ವ ಬರ್ದ್ವಾನ್‌ನ ನವಾಭಟ್ ಪ್ರದೇಶದಲ್ಲಿ ಬಂಧಿಸಲಾಗಿತ್ತು. ಪೊಲೀಸ್ ವಿಚಾರಣೆಯ ಸಮಯದಲ್ಲಿ ರತನ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ಹೇಳುತ್ತವೆ. ಶುಕ್ರವಾರ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಗುಂಡು ಹಾರಿಸಲು ಬಳಸಿದ ಬಂದೂಕು ಎಲ್ಲಿದೆ ಎಂದು ರತನ್ ಪೊಲೀಸರಿಗೆ ತಿಳಿಸಿದ್ದಾನೆ.

Ratan Sheikh Killed
ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ, ಪ್ರೀತಿ: ಮದುವೆಯಾಗಲು ಭಾರತಕ್ಕೆ ಬಂದ ಕೆನಡಾ ಮಹಿಳೆಗೆ ಕಾದಿತ್ತು ಬಿಗ್ ಶಾಕ್!

ಅದೇ ರೀತಿ, ಭಾನುವಾರ ಮಧ್ಯಾಹ್ನ, ಶಸ್ತ್ರಾಸ್ತ್ರಗಳನ್ನು ಮರುಪಡೆಯಲು ಪೊಲೀಸರು ರತನ್‌ನೊಂದಿಗೆ ನಾನೂರ್ ಇಟ್ಟಿಗೆ ಗೂಡುಗೆ ಹೋದರು. ರತನ್ ಇದ್ದಕ್ಕಿದ್ದಂತೆ ತನ್ನ ಬಂದೂಕನ್ನು ಎತ್ತಿ ಗುಂಡು ಹಾರಿಸಿದನೆಂದು ಹೇಳಲಾಗಿದೆ. ಪೊಲೀಸ್ ವಾಹನಕ್ಕೆ ಗುಂಡುಗಳು ತಗುಲಿದವು. ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿಯಾಗಿ ಗುಂಡು ಹಾರಿಸಿದರು. ಗುಂಡುಗಳಿಂದ ರತನ್ ಗಾಯಗೊಂಡನು. ಆತನನ್ನು ನಾನೂರ್ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಸಂಜೆ 5:45 ಕ್ಕೆ ಅವರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ವೈದ್ಯರು ಘೋಷಿಸಿದರು. ಅಲ್ಲಿಂದ, ಮೃತ ಶರಾರ್ ಅವರನ್ನು ಬೋಲ್ಪುರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ರತನ್ ಅವರ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಅಂದಹಾಗೆ, ಇದು ಬಿಜೆಪಿ ಸರ್ಕಾರದ ಆರು ತಿಂಗಳ ಅವಧಿಯಲ್ಲಿ ನಡೆದ ಐದನೇ 'ಎನ್‌ಕೌಂಟರ್' ಘಟನೆಯಾಗಿದೆ. ಈ ಹಿಂದೆ, ಬರುಯಿಪುರ, ಗೈಘಾಟಾ, ಶಂಶೇರ್‌ಗಂಜ್ ಮತ್ತು ರಾಯ್‌ಗಂಜ್‌ಗಳಲ್ಲಿ ನಡೆದ ಎನ್‌ಕೌಂಟರ್‌ಗಳಲ್ಲಿ ಆರೋಪಿಗಳು ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X