Kulgam ಭಯೋತ್ಪಾದಕ ದಾಳಿ ಕೇಸ್: CCTVಯಲ್ಲಿ ಸೆರೆಯಾಯ್ತು ಕರಾಳ ಸಂಚು, ದಾಳಿಗೂ ಮುನ್ನ ಉಗ್ರರು ಮಾಡಿದ್ದೇನು ಗೊತ್ತಾ..?

ನವೆಂಬರ್ 11ರಂದು ಉಮರ್ ನಿಸಾರ್ ದಾರ್, ಲಷ್ಕರ್-ಇ-ತೊಯ್ಬಾ (LeT) ಕಮಾಂಡರ್ ಲತೀಫ್ ಭಟ್ ಜೊತೆಗೂಡಿ ಅಖ್ರಾನ್‌ನಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದ ಸಿಆರ್‌ಪಿಎಫ್ ನಾಕಾ ಮೇಲೆ ದಾಳಿ ನಡೆಸಿದ್ದ. ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದರು.
J-K: CCTV footage reveals LeT operatives conducted reconnaissance before the attack on CRPF personnel in Kulgam.
ಕುಲ್ಗಾಮ್‌ನಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ದಾಳಿ ನಡೆಸುವ ಮೊದಲು ಎಲ್‌ಇಟಿ ಉಗ್ರರು ಪರಿಶೀಲನೆ ನಡೆಸುತ್ತಿರುವುದು.
Updated on: 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಸಿಆರ್‌ಪಿಎಫ್ (CRPF) ಚೆಕ್‌ಪೋಸ್ಟ್ ಮೇಲೆ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಭದ್ರತಾ ಪಡೆಗಳಿಗೆ ಮಹತ್ವದ ಸುಳಿವು ಲಭ್ಯವಾಗಿದೆ.

ದಾಳಿ ನಡೆಸುವ ಒಂದು ದಿನದ ಮುನ್ನವೇ ಲಷ್ಕರ್-ಇ-ತೊಯ್ಬಾ (LeT) ಕಮಾಂಡರ್ ಲತೀಫ್ ಭಟ್ ಮತ್ತು ಆತನ ಸಹಚರ ಉಮರ್ ನಿಸಾರ್ ದಾರ್ ಸ್ಥಳ ಪರಿಶೀಲನೆ (ರೆಕ್ಕಿ) ನಡೆಸಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ದೃಢಪಟ್ಟಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಕುರಿತ ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆ ಮಾಡಿದ್ದಾರೆ.

ಸಿಸಿಟಿವಿ ದೃಶ್ಯಗಳ ಪ್ರಕಾರ, ನವೆಂಬರ್ 10ರಂದು ಉಗ್ರರಾದ ಮಿರ್ ಬಾರ್, ಅಖ್ರಾನ್, ಹಬ್ಲಿಶ್ ಮತ್ತು ಕಿಲಾಮ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುತ್ತಾಡಿದ್ದರು. ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಉದ್ದೇಶದಿಂದ ಸ್ಥಳಗಳನ್ನು ಪರಿಶೀಲಿಸಿ, ಪೂರ್ವಸಿದ್ಧತೆ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ನವೆಂಬರ್ 11ರಂದು ಉಮರ್ ನಿಸಾರ್ ದಾರ್, ಲಷ್ಕರ್-ಇ-ತೊಯ್ಬಾ (LeT) ಕಮಾಂಡರ್ ಲತೀಫ್ ಭಟ್ ಜೊತೆಗೂಡಿ ಅಖ್ರಾನ್‌ನಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದ ಸಿಆರ್‌ಪಿಎಫ್ ನಾಕಾ ಮೇಲೆ ದಾಳಿ ನಡೆಸಿದ್ದ. ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದರು.

ನವೆಂಬರ್ 10 ಮತ್ತು 11ರಂದು ವಿವಿಧ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದಾಗ ಉಮರ್ ನಿಸಾರ್ ದಾರ್ ಮತ್ತು ಲತೀಫ್ ಭಟ್ ಇಬ್ಬರೂ ಹಲವು ಕ್ಯಾಮೆರಾಗಳಲ್ಲಿ ಸೆರೆಯಾಗಿರುವುದು ಪತ್ತೆಯಾಗಿದೆ. ದಾಳಿಗೂ ಮುನ್ನ ಸ್ಥಳಗಳಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸುತ್ತಿದ್ದ ದೃಶ್ಯಗಳು ಹಾಗೂ ಅಖ್ರಾನ್ ದಾಳಿಯ ಬಳಿಕ ಪರಾರಿಯಾಗುತ್ತಿದ್ದ ದೃಶ್ಯಗಳು ಈ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿವೆ.

J-K: CCTV footage reveals LeT operatives conducted reconnaissance before the attack on CRPF personnel in Kulgam.
ಕುಲ್ಗಾಮ್ ಎನ್‌ಕೌಂಟರ್: ಒಬ್ಬ ಉಗ್ರ ಹತ, ಮತ್ತೊಬ್ಬ ಟ್ರ್ಯಾಪ್; CRPF ಯೋಧರ ಮೇಲಿನ ದಾಳಿಗೆ ಭಾರತೀಯ ಸೇನೆ ಪ್ರತೀಕಾರ

ಉಮರ್ ನಿಸಾರ್ ದಾರ್ ನಾಪತ್ತೆಯಾದ ಬಳಿಕ ಆತನ ಕುಟುಂಬದವರು ಕುಲ್ಗಾಮ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆ ವೇಳೆ, ಕಳೆದ ಐದರಿಂದ ಆರು ತಿಂಗಳಿಂದ ಉಮರ್ ಲಷ್ಕರ್ ಕಮಾಂಡರ್ ಲತೀಫ್ ಭಟ್‌ಗೆ ಆಶ್ರಯ ನೀಡುವುದರ ಜೊತೆಗೆ ವಿವಿಧ ರೀತಿಯಲ್ಲಿ ನೆರವು ಒದಗಿಸುತ್ತಿದ್ದ ಸಂಗತಿ ತನಿಖಾ ಸಂಸ್ಥೆಗಳಿಗೆ ತಿಳಿದುಬಂದಿದೆ.

ಅಖ್ರಾನ್ ದಾಳಿಯ ಬೆನ್ನಲ್ಲೇ ಉಮರ್ ನಿಸಾರ್ ದಾರ್ ಟಿಆರ್‌ಎಫ್ ಸಂಘಟನೆಯನ್ನು ಸೇರಿಕೊಂಡಿದ್ದ ಎಂಬ ಅಂಶವೂ ತನಿಖೆಯಲ್ಲಿ ಬಹಿರಂಗವಾಗಿದೆ.

ದಾಳಿ ನಡೆಸಿ ಪರಾರಿಯಾಗಿದ್ದ ಉಮರ್ ನಿಸಾರ್ ದಾರ್ ಮತ್ತು ಲತೀಫ್ ಭಟ್ ಅವರನ್ನು ಸೋಮವಾರ ಲರೂ ಪ್ರದೇಶದಲ್ಲಿ ಭದ್ರತಾ ಪಡೆಗಳು ತಡೆದಿದ್ದವು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಉಮರ್ ನಿಸಾರ್ ದಾರ್ ಹತನಾಗಿದ್ದಾನೆ. ಲಷ್ಕರ್ ಕಮಾಂಡರ್ ಲತೀಫ್ ಭಟ್‌ಗಾಗಿ ಭದ್ರತಾ ಪಡೆಗಳ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ನವೆಂಬರ್ 11ರಂದು ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಾಕಾ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಮೂವರು ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X