ತಂದೆ ಮೇಲೆ ಹಲ್ಲೆ: ರೊಚ್ಚಿಗೆದ್ದ ಸಹೋದರಿಯರಿಂದ ದೋಸೆ ಅಂಗಡಿ ಧ್ವಂಸ, ತಡೆಯಲು ಬಂದವರಿಗೂ ತರಾಟೆ! Video

ವಾರಣಾಸಿಯ ರಸ್ತೆಬದಿಯ ದೋಸೆ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಕ್ಷುಲ್ಲಕ ವಿಚಾರಕ್ಕೆ ಆರಂಭವಾಗಿದ್ದ ಗಲಾಟೆ ಬಳಿಕ ತಾರಕಕ್ಕೇರಿದೆ. ಸಹೋದರಿಯರಿಯರು ಅಂಗಡಿಯಲ್ಲಿದ್ದ ಹಿಟ್ಟಿನ ಪಾತ್ರೆಯನ್ನು ಉರುಳಿಸಿ, ಸಿಬ್ಬಂದಿ ಮೇಲೆ ನೀರು..
Varanasi sisters vandalise eatery
ದೋಸೆ ಅಂಗಡಿ ಧ್ವಂಸ ಮಾಡಿದ ಯುವತಿಯರು
Updated on: 

ವಾರಾಣಾಸಿ: ತಂದೆ ಮೇಲೆ ಹೋಟೆಲ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದಿಂದ ಆಕ್ರೋಶಗೊಂಡ ಇಬ್ಬರು ಸಹೋದರಿಯರು ರಸ್ತೆ ಬದಿಯ ತಿಂಡಿ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ನಡೆದಿದೆ.

ವಾರಣಾಸಿಯ ರಸ್ತೆಬದಿಯ ದೋಸೆ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಕ್ಷುಲ್ಲಕ ವಿಚಾರಕ್ಕೆ ಆರಂಭವಾಗಿದ್ದ ಗಲಾಟೆ ಬಳಿಕ ತಾರಕಕ್ಕೇರಿದೆ. ಸಹೋದರಿಯರಿಯರು ಅಂಗಡಿಯಲ್ಲಿದ್ದ ಹಿಟ್ಟಿನ ಪಾತ್ರೆಯನ್ನು ಉರುಳಿಸಿ, ಸಿಬ್ಬಂದಿ ಮೇಲೆ ನೀರು ಎರಚಿ ಆಕ್ರೋಶ ವ್ಯಕ್ತಪಡಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ, ನವೆಂಬರ್ 4ರಂದು ಮಹಿಳೆಯರ ತಂದೆ ಮತ್ತು ಹೋಟೆಲ್ ಸಿಬ್ಬಂದಿ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಸಿಬ್ಬಂದಿ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆ ಸಂಬಂಧ ಕುಟುಂಬದವರು ಭೇಲುಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಮಹಿಳೆಯರು, ಇದರಿಂದ ಬೇಸತ್ತು ತಾವೇ ಅಂಗಡಿಗೆ ತೆರಳಿ ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗಿದೆ.

Varanasi sisters vandalise eatery
Kulgam ಭಯೋತ್ಪಾದಕ ದಾಳಿ ಕೇಸ್: CCTVಯಲ್ಲಿ ಸೆರೆಯಾಯ್ತು ಕರಾಳ ಸಂಚು, ದಾಳಿಗೂ ಮುನ್ನ ಉಗ್ರರು ಮಾಡಿದ್ದೇನು ಗೊತ್ತಾ..?

ಸಿಸಿಟಿವಿಯಲ್ಲಿ ದಾಂಧಲೆ ಸೆರೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಿಸಿಟಿವಿ ದೃಶ್ಯದಲ್ಲಿ ಇಬ್ಬರು ಮಹಿಳೆಯರು ಸ್ಕೂಟರ್‌ನಲ್ಲಿ ಅಂಗಡಿ ಬಳಿ ಬರುವುದನ್ನು ಕಾಣಬಹುದು. ಅವರಲ್ಲಿ ಒಬ್ಬರು ಮೊಬೈಲ್‌ನಲ್ಲಿ ಅಂಗಡಿ ಮತ್ತು ಸುತ್ತಮುತ್ತಲಿನ ದೃಶ್ಯಗಳನ್ನು ಚಿತ್ರೀಕರಿಸುತ್ತಾರೆ. ಬಳಿಕ ಮತ್ತೊಬ್ಬರು ಏಕಾಏಕಿ ಅಂಗಡಿಯೊಳಗೆ ನುಗ್ಗಿ ಹಿಟ್ಟಿನಿಂದ ತುಂಬಿದ್ದ ದೊಡ್ಡ ಪಾತ್ರೆಯನ್ನು ಉರುಳಿಸುತ್ತಾರೆ. ಅಷ್ಟಕ್ಕೇ ನಿಲ್ಲದೆ, ಅಲ್ಲಿದ್ದ ಸಿಬ್ಬಂದಿ ಮೇಲೆ ನೀರು ಎರಚಿ "ಅಂಗಡಿಯನ್ನು ಬಂದ್ ಮಾಡಿ" ಎಂದು ಕೂಗಾಡುತ್ತಾರೆ.

ಸಮಾಧಾನಪಡಿಸಲು ಬಂದವರಿಗೂ ತರಾಟೆ

ಮಹಿಳೆಯರ ವರ್ತನೆಯಿಂದ ಸ್ಥಳೀಯರು ಆಘಾತಕ್ಕೊಳಗಾಗುತ್ತಾರೆ. ಅಲ್ಲಿದ್ದ ವ್ಯಕ್ತಿಯೊಬ್ಬರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿ, "ಇಲ್ಲಿ ಮಕ್ಕಳಿದ್ದಾರೆ. ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿ. ಯಾಕೆ ಗಲಾಟೆ ಮಾಡುತ್ತಿದ್ದೀರಿ?" ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಮಹಿಳೆ, "ಸುಮ್ಮನಿರಿ" ಎಂದು ತಿರುಗೇಟು ನೀಡುತ್ತಾರೆ.

ನಂತರ ಸ್ಥಳೀಯರು ಮಧ್ಯಪ್ರವೇಶಿಸಿ ಗಲಾಟೆ ಮತ್ತಷ್ಟು ಹೆಚ್ಚಾಗದಂತೆ ತಡೆಯಲು ಯತ್ನಿಸುತ್ತಾರೆ. ಈ ವೇಳೆ ಮತ್ತೊಬ್ಬ ಮಹಿಳೆ ಸ್ಥಳೀಯರ ಬಳಿ ಕ್ಷಮೆ ಕೇಳುತ್ತಿರುವುದು ದೃಶ್ಯದಲ್ಲಿದೆ. ಇನ್ನೊಬ್ಬರು ಮಹಿಳೆಯ ಕೈಯಲ್ಲಿದ್ದ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ.

ಹೋಟೆಲ್ ಮಾಲೀಕರಿಂದ ದೂರು

ಮಹಿಳೆಯರು ಮಾತು ಕೇಳದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ಗೌರವ್ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X