ಐಷಾರಾಮಿ ಜೀವನ, ₹15 ಕೋಟಿ ಉದ್ಯಮ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಲು ಸಿದ್ಧವಾದ ಒಂದೇ ಕುಟುಂಬದ ನಾಲ್ವರು!

47 ವರ್ಷದ ದಿಲೀಪ್ ಭಾಯ್ ಭೋಗರ್, ಅವರ ಪತ್ನಿ 45 ವರ್ಷದ ಜ್ಯೋತಿ ಬೆನ್ ಹಾಗೂ ಅವರ ಪುತ್ರಿಯರಾದ 22 ವರ್ಷದ ಛವಿ ಮತ್ತು 14 ವರ್ಷದ ಚಾರ್ವಿ ಅವರು ಜೈನ ಸನ್ಯಾಸ 'ದೀಕ್ಷೆ'ಯನ್ನು ಸ್ವೀಕರಿಸಲಿದ್ದಾರೆ.
Family of four gives up Rs 15-crore business, embraces Jain monkhood in Udaipur
ಒಂದೇ ಕುಟುಂಬದ ನಾಲ್ವರು
Updated on: 

ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯ ಕುಟುಂಬವೊಂದು, ಸೂರತ್‌ನಲ್ಲಿ ಹಲವು ವರ್ಷಗಳ ಕಾಲ ನೆಲೆಸಿ ಸುಮಾರು 15 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ನಡೆಸುವ ಜವಳಿ ಉದ್ಯಮವನ್ನು ಕಟ್ಟಿದ ನಂತರ, ಈಗ ಐಷಾರಾಮಿ ಜೀವನ ಹಾಗೂ ಉದ್ಯಮ ತ್ಯಜಿಸಿ ಜೈನ ಸನ್ಯಾಸ ಸ್ವೀಕರಿಸಲು ಸಜ್ಜಾಗಿದೆ.

47 ವರ್ಷದ ದಿಲೀಪ್ ಭಾಯ್ ಭೋಗರ್, ಅವರ ಪತ್ನಿ 45 ವರ್ಷದ ಜ್ಯೋತಿ ಬೆನ್ ಹಾಗೂ ಅವರ ಪುತ್ರಿಯರಾದ 22 ವರ್ಷದ ಛವಿ ಮತ್ತು 14 ವರ್ಷದ ಚಾರ್ವಿ ಅವರು, 2027ರ ಫೆಬ್ರವರಿ 8ರಂದು ಸೂರತ್‌ನಲ್ಲಿ ಜೈನ ಸನ್ಯಾಸ 'ದೀಕ್ಷೆ'ಯನ್ನು ಸ್ವೀಕರಿಸಲಿದ್ದಾರೆ. ಇವರ ಮತ್ತೊಬ್ಬ ಪುತ್ರಿ ಶೈಲಿ 2023ರಲ್ಲೇ ದೀಕ್ಷೆ ಸ್ವೀಕರಿಸಿದ್ದು, ಈಗ 'ಸಾಧ್ವಿ ದರ್ಶಿತಾ' ಎಂದು ಕರೆಯಲ್ಪಡುತ್ತಿದ್ದಾರೆ.

ಉದಯಪುರ ಜಿಲ್ಲೆಯ ಜಸ್ವಂತ್‌ಗಢ ಗ್ರಾಮದಿಂದ ಸೂರತ್‌ಗೆ ಬಂದ ದಿಲೀಪ್ ಭಾಯ್, ಅಲ್ಲಿ ಒಂದು ಅಂಗಡಿಯಲ್ಲಿ ಬಟ್ಟೆ ಮಾರಾಟ ಮಾಡಲು ಪ್ರಾರಂಭಿಸಿದರು. ವ್ಯವಹಾರ ಬೆಳೆದಂತೆ, ಅವರು ಇನ್ನೂ ಎರಡು ಅಂಗಡಿಗಳನ್ನು ತೆರೆದರು ಮತ್ತು ಹಲವಾರು ಯಂತ್ರಗಳನ್ನು ಅಳವಡಿಸಿಕೊಂಡರು.

Family of four gives up Rs 15-crore business, embraces Jain monkhood in Udaipur
ಮತದಾರರ ಧರ್ಮದ ಬಗ್ಗೆ ಯಾವುದೇ ಡೇಟಾ ಇಲ್ಲ: ಹಿಂದೂಗಳು ನಾಪತ್ತೆ ಎಂದ CM ಯೋಗಿಗೆ CEO ಕೌಂಟರ್‌!

ದಿಲೀಪ್ ಭಾಯ್ ಅವರು ತಮ್ಮ ಜವಳಿ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸಲು ಯೋಜಿಸುತ್ತಿದ್ದಾಗ, ಅವರಿಗೆ ಒಬ್ಬ ಜೈನ ಆಚಾರ್ಯರ ಭೇಟಿಯಾಯಿತು. ಈ ಭೇಟಿಯು ಜೈನ ಧರ್ಮದ ಬಗ್ಗೆ ಅವರಲ್ಲಿದ್ದ ಆಸಕ್ತಿಯನ್ನು ಹೆಚ್ಚಿಸಿತು ಮತ್ತು ಅವರನ್ನು ಸನ್ಯಾಸ ಜೀವನದತ್ತ ಸೆಳೆಯಿತು.

2023ರಲ್ಲಿ ಅವರ ಮಗಳು ಶೈಲಿ ದೀಕ್ಷೆ ಸ್ವೀಕರಿಸಿದ ನಂತರ, ಅವರು ತಮ್ಮ ವ್ಯವಹಾರವನ್ನು ಕ್ರಮೇಣ ಕಡಿಮೆ ಮಾಡುತ್ತಾ ಬಂದು, ತಾವೂ ದೀಕ್ಷೆ ಪಡೆಯಲು ನಿರ್ಧರಿಸಿದರು. ಅವರ ಪತ್ನಿ ಜ್ಯೋತಿ ಬೆನ್ ಹಾಗೂ ಇಬ್ಬರು ಪುತ್ರಿಯರಾದ ಛವಿ ಮತ್ತು ಚಾರ್ವಿ ಕೂಡ ಅವರೊಂದಿಗೆ ಸನ್ಯಾಸತ್ವ ಸ್ವೀಕರಿಸಲು ನಿರ್ಧರಿಸಿದ್ದಾರೆ.

ದಿಲೀಪ್ ಮಗಳು ಛವಿ, ಬಿಬಿಎ ಪದವೀಧರೆಯಾಗಿದ್ದು, ಕರಕುಶಲ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಉದ್ಯಮಿಯಾಗುವತ್ತ ಹೆಜ್ಜೆ ಇರಿಸಿದ್ದರು. ತಂದೆ ಸನ್ಯಾಸತ್ವದ ಮುಖ ಮಾಡಿದ ಬೆನ್ನಲ್ಲೇ ಕಳೆದ ನಾಲ್ಕು ತಿಂಗಳಿನಿಂದ ವ್ಯವಹಾರದಿಂದ ದೂರ ಉಳಿದುಕೊಂಡಿದ್ದಾರೆ. ಇನ್ನು ಚಾರ್ವಿ 9 ನೇ ತರಗತಿ ಬಳಿಕ ಶಾಲೆಯಿಂದ ಹೊರ ಬಂದಿದ್ದಾರೆ. ಸೂರತ್‌ನಲ್ಲಿ ನಡೆದ ಜಿಲ್ಲಾ ಮಟ್ಟದಲ್ಲಿ ಫುಟ್ಬಾಲ್ ತಂಡದಲ್ಲಿ ಚಾರ್ವಿ ಆಡಿದ್ದರು.

ದೀಕ್ಷೆ ಪಡೆಯುವ ಮುನ್ನ, ನಾಲ್ವರು ಜೈನ ತಪಸ್ವಿಗಳೊಂದಿಗೆ ವಾಸಿಸುತ್ತಾ ಸಮಯ ಕಳೆದಿದ್ದಾರೆ. ಈ ವೇಳೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುವುದು, ಆಹಾರ ಮತ್ತು ದೈನಂದಿನ ನಡವಳಿಕೆಯ ನಿಯಮಗಳನ್ನು ಪಾಲಿಸುವುದು ಮತ್ತು ಸನ್ಯಾಸಿ ಜೀವನದ ಅವಶ್ಯಕತೆಗಳಿಗೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಕಲಿತುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X