ಭವಿಷ್ಯದ ಚುನಾವಣೆಗಳು ಧರ್ಮ- ಜಾತಿ ಆಧಾರದ ಮೇಲೆ ನಡೆಯುವುದಿಲ್ಲ: ಬೇಲ್ ಮೇಲೆ ಹೊರಬಂದ ನಂತರ ಅಜಂ ಖಾನ್ ಹೇಳಿಕೆ

ನಮ್ಮ ಪಕ್ಷವು ಯುವಕರು, ರೈತರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ ಒಂದು ಕಾರ್ಯಕ್ರಮವನ್ನು (ಯೋಜನೆಯನ್ನು) ಮುಂದಿಡುತ್ತಿದೆ. ಇದು ಉತ್ತಮ ವಾತಾವರಣ, ಸಹೋದರತ್ವ, ಪ್ರೀತಿ ಮತ್ತು ಸಾಮರಸ್ಯಕ್ಕಾಗಿ ರೂಪಿಸಲಾದ ಕಾರ್ಯಕ್ರಮವಾಗಿದೆ.
Azam khan
ಅಜಂ ಖಾನ್
Updated on: 

ಲಕ್ನೋ: ಭವಿಷ್ಯದ ಚುನಾವಣೆಗಳು ಕೇವಲ ಧರ್ಮ ಮತ್ತು ಜಾತಿಯ ಆಧಾರದ ಮೇಲೆ ನಡೆಯುವುದಿಲ್ಲ, ಏಕೆಂದರೆ ಇವುಗಳಿಂದಾಗುವ ಹಾನಿಗಳನ್ನು ಜನರು ಅರಿಯಲು ಪ್ರಾರಂಭಿಸಿದ್ದಾರೆ ಎಂದು ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಹೇಳಿದ್ದಾರೆ.

ಘಾಜಿಯಾಬಾದ್‌ನ ದಸ್ನಾ ಜೈಲಿನಿಂದ ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್, ಬಿಜೆಪಿ ದ್ವೇಷದ ಅಜೆಂಡಾವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು. ಭವಿಷ್ಯದ ಚುನಾವಣೆಗಳು ಕೇವಲ ಧರ್ಮ ಮತ್ತು ಜಾತಿಯ ಆಧಾರದ ಮೇಲೆ ನಡೆಯುವುದಿಲ್ಲ... ಧರ್ಮದ ಹೆಸರಿನಲ್ಲಿ ಸಮುದಾಯಗಳಿಗೆ ಹಾನಿಯಾಗುತ್ತಿದೆ ಎಂಬುದನ್ನು ಜನರು ಅರಿಯಲು ಪ್ರಾರಂಭಿಸಿದ್ದಾರೆ."

"ನಮ್ಮ ಪಕ್ಷವು ಯುವಕರು, ರೈತರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ ಒಂದು ಕಾರ್ಯಕ್ರಮವನ್ನು (ಯೋಜನೆಯನ್ನು) ಮುಂದಿಡುತ್ತಿದೆ. ಇದು ಉತ್ತಮ ವಾತಾವರಣ, ಸಹೋದರತ್ವ, ಪ್ರೀತಿ ಮತ್ತು ಸಾಮರಸ್ಯಕ್ಕಾಗಿ ರೂಪಿಸಲಾದ ಕಾರ್ಯಕ್ರಮವಾಗಿದೆ" ಎಂದು ಅವರು ಹೇಳಿದರು. ಬಿಜೆಪಿಯು ಕೋಮು ದ್ವೇಷವನ್ನು ಹರಡುತ್ತಿದೆ ಎಂದೂ ಖಾನ್ ಆರೋಪಿಸಿದರು.

ಕಾಂಗ್ರೆಸ್ ಜೊತೆಗಿನ ಮೈತ್ರಿ ಮತ್ತು ಸ್ಥಾನ ಹಂಚಿಕೆಯ ಸಾಧ್ಯತೆಯ ಕುರಿತು ಮಾತನಾಡಿದ ಖಾನ್, ಪಕ್ಷದ ಪ್ರಸ್ತುತ ನಾಯಕತ್ವವು ಹಿಂದಿನ ನಾಯಕತ್ವಕ್ಕಿಂತ ಭಿನ್ನವಾಗಿದೆ ಎಂದು ಹೇಳಿದರು. "ಇದು ಹಳೆಯ ಕಾಂಗ್ರೆಸ್ ಅಲ್ಲ. ಇಂದಿನ ನಾಯಕತ್ವ ಭಿನ್ನವಾಗಿದೆ. ಗೌರವಾನ್ವಿತ ತಿಳುವಳಿಕೆ ಮತ್ತು ಗೌರವಯುತವಾದ ಸ್ಥಾನ ಹಂಚಿಕೆ ವ್ಯವಸ್ಥೆ ಇರುತ್ತದೆ. ಅವರಿಗೆ ನಾವು ಸ್ವಲ್ಪ ಹೆಚ್ಚೇ ಬಿಟ್ಟುಕೊಡಬೇಕಾದರೂ, ಆ ತ್ಯಾಗವನ್ನು ಮಾಡಲು ನಾವು ಸಿದ್ಧರಿದ್ದೇವೆ" ಎಂದು ಅವರು ಹೇಳಿದರು.

Azam khan
SP ನಾಯಕ ಅಜಂ ಖಾನ್‌ಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್: ಮಧ್ಯಂತರ ಜಾಮೀನಿಗೆ ತಡೆ ನೀಡಲು ನಕಾರ!

ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇತ್ತೀಚೆಗೆ ರಾಂಪುರಕ್ಕೆ ಭೇಟಿ ನೀಡಿದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಜಂ ಖಾನ್, ಆ ಪ್ರದೇಶದ ಜನರು "ಹೈದರಾಬಾದಿ ಬಿರಿಯಾನಿಗಿಂತ ಪುಲಾವ್ ಮತ್ತು ಮಟನ್ ಬಿರಿಯಾನಿಯನ್ನು ಹೆಚ್ಚು ಇಷ್ಟಪಡುತ್ತಾರೆ" ಎಂದು ಹೇಳಿದರು.

ಖಾನ್ ಅವರು ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರೀಯ ತನಿಖಾ ದಳ ಗಳನ್ನೂ ಟೀಕಿಸಿದರು. ಸಾಂವಿಧಾನಿಕ ಸಂಸ್ಥೆಗಳು ತಮ್ಮ ಬಗ್ಗೆ ದೇಶದ ಅಭಿಪ್ರಾಯವೇನು ಎಂಬುದನ್ನು ಮೌಲ್ಯಮಾಪನ ಮಾಡಿಕೊಳ್ಳಬೇಕು. ಅವರಿಗೆ ಅದು ತಿಳಿದಿಲ್ಲವೆಂದರೆ, ಅದು ಅವರದೇ ತಪ್ಪು. ಚುನಾವಣಾ ಆಯೋಗವು ಜಗತ್ತಿನಾದ್ಯಂತ ಸಾಕಷ್ಟು ಮುಜುಗರವನ್ನು ಉಂಟುಮಾಡಿದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X