Delimitation Bill: ಲೋಕಸಭೆಯಲ್ಲಿ 'ಮೂರನೇ ಎರಡರಷ್ಟು ಬಹುಮತ'ಕ್ಕಾಗಿ ಮೋದಿ, ಶಾ ಕಸರತ್ತು; ಕಾಂಗ್ರೆಸ್‌ ವಾಗ್ದಾಳಿ..!

ವಿಕಸಿತ ಭಾರತ ಗುರಿ ಸಾಧಿಸುವವರೆಗೆ ಹಾಲಿ ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ ಮತ್ತು ರಾಜ್ಯವಾರು ಸ್ಥಾನಗಳ ಹಂಚಿಕೆಯನ್ನು ಹಾಗೆಯೇ ಮುಂದುವರಿಸುವುದು ದೇಶದ ಹಿತದೃಷ್ಟಿಯಿಂದ ಸೂಕ್ತ.
jairam Ramesh
ಜೈರಾಮ್ ರಮೇಶ್online desk
Updated on: 

ನವದೆಹಲಿ: ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ 100 ದಿನಗಳು ಕಳೆದರೂ, ಕ್ಷೇತ್ರ ಮರುವಿಂಗಡಣೆ (Delimitation) ಮಸೂದೆಯನ್ನು ಅಂಗೀಕರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ "ಸೂಪರ್‌ಟೇಂಟೆಡ್" (ಅತ್ಯಂತ ಕಳಂಕಿತ) ಎರಡನೇ ಮೂರರಷ್ಟು ಬಹುಮತವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ವಿಕಸಿತ ಭಾರತ ಗುರಿ ಸಾಧಿಸುವವರೆಗೆ ಹಾಲಿ ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ ಮತ್ತು ರಾಜ್ಯವಾರು ಸ್ಥಾನಗಳ ಹಂಚಿಕೆಯನ್ನು ಹಾಗೆಯೇ ಮುಂದುವರಿಸುವುದು ದೇಶದ ಹಿತದೃಷ್ಟಿಯಿಂದ ಸೂಕ್ತ. ಇದೇ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯನ್ನೂ ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.

2026ರ ಸಂಸತ್ತಿನ ಮುಂಗಾರು ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿ ಇಂದಿಗೆ 100 ದಿನಗಳಾಗಿವೆ. ಆದರೆ, ಅಧಿವೇಶನವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಿಲ್ಲ.

ಪ್ರಧಾನಿ–ಗೃಹ ಸಚಿವರ ಜೋಡಿ, ಸಂವಿಧಾನ ತಿದ್ದುಪಡಿ ಮಸೂದೆಯಾದ ಮತಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಅಂಗೀಕರಿಸಲು ಲೋಕಸಭೆಯಲ್ಲಿ ಮೂರನೇ ಎರಡರಷ್ಟು 'ಕಳಂಕಿತ' ಬಹುಮತದ ಹುಡುಕಾಟದಲ್ಲಿದೆ. ಏಪ್ರಿಲ್ 17ರಂದು ಹಿಂದಿನ ಮಸೂದೆ ಭಾರಿ ಬಹುಮತದಿಂದ ತಿರಸ್ಕೃತಗೊಂಡಿದ್ದರಿಂದ, ಹೊಸ ಮಸೂದೆಯಲ್ಲಿ ಯಾವ ಅಂಶಗಳನ್ನು ಸೇರಿಸಲಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ತಿಳಿಸಿದ್ದಾರೆ.

ಯಾವುದೇ ರಾಜಕೀಯ ಪಕ್ಷದೊಂದಿಗೆ ಹೊಸ ಪ್ರಸ್ತಾವನೆಗಳ ಕುರಿತು ಗಂಭೀರ ಹಾಗೂ ವ್ಯವಸ್ಥಿತ ರೀತಿಯಲ್ಲಿ ಚರ್ಚೆ ನಡೆದಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಗೆ ನಾಲ್ಕು ಪತ್ರಗಳನ್ನು ಬರೆದಿದ್ದರೂ, ಈವರೆಗೆ ಸರ್ವಪಕ್ಷ ಸಭೆಯನ್ನೂ ಕರೆಯಲಾಗಿಲ್ಲ ಎಂದು ಆರೋಪಿಸಿದ್ದಾರೆ.

ದೇಶದ ಮುಂದೆ ಇನ್ನೂ ಹಲವು ಗಂಭೀರ ಹಾಗೂ ತುರ್ತು ಆರ್ಥಿಕ, ರಾಜಕೀಯ, ಸಾಮಾಜಿಕ, ಮಿಲಿಟರಿ ಮತ್ತು ವಿದೇಶಾಂಗ ನೀತಿಗೆ ಸಂಬಂಧಿಸಿದ ಸವಾಲುಗಳಿವೆ. ಅವುಗಳತ್ತ ಗಮನಹರಿಸುವ ಅಗತ್ಯವಿದೆ. ವ್ಯಾಪಕ ಹಾಗೂ ಸಮಗ್ರ ಮತಕ್ಷೇತ್ರ ಮರುವಿಂಗಡಣೆಯನ್ನು ಮುಂದೂಡಬಹುದು. 1976ರಲ್ಲಿ ಇಂದಿರಾ ಗಾಂಧಿ ಅವರು ಇದನ್ನು 25 ವರ್ಷಗಳ ಕಾಲ ಮುಂದೂಡಿದ್ದರು.

jairam Ramesh
ಇತಿಹಾಸ ತಿರುಚಿದ ಮಾತ್ರಕ್ಕೆ ಸರ್ದಾರ್ ಪಟೇಲ್ ಬಗ್ಗೆ ಇಂದಿರಾ ಗಾಂಧಿಗಿದ್ದ ಅಪಾರ ಗೌರವ-ಮೆಚ್ಚುಗೆ ಅಳಿಸಲು ಸಾಧ್ಯವಿಲ್ಲ: ಜೈರಾಮ್ ರಮೇಶ್

2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು 2026ರ ನಂತರ ನಡೆಯುವ ಮೊದಲ ಜನಗಣತಿಯ ಫಲಿತಾಂಶ ಪ್ರಕಟವಾಗುವವರೆಗೆ ಮತ್ತೆ 25 ವರ್ಷಗಳ ಕಾಲ ಮುಂದೂಡಿದ್ದರು. ಅವರಿಬ್ಬರೂ ವಿವೇಕಯುತ ಹಾಗೂ ರಾಷ್ಟ್ರದ ಹಿತಾಸಕ್ತಿ ಕಾಪಾಡಿದ ಪ್ರಧಾನಿಗಳಾಗಿದ್ದರು ಎಂದು ತಿಳಿಸಿದ್ದಾರೆ.

ನವೆಂಬರ್ 19ರಂದು ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (ಫಿಕ್ಕಿ) ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದನ್ನು ಅವರು ಉಲ್ಲೇಖಿಸಿದ್ದಾರೆ.

ಪ್ರಧಾನಿ ಅವರು ಸಾಕಷ್ಟು ಆತಂಕದಲ್ಲಿರುವಂತೆ ಕಾಣುತ್ತಿದೆ. ಅವರು ಹಾಗಿರುವುದೂ ಸಹಜ. ಇಂತಹ ಒತ್ತಡಗಳ ನಡುವೆ ಮತಕ್ಷೇತ್ರ ಮರುವಿಂಗಡಣೆಯಂತಹ ವಿಷಯಗಳ ಕುರಿತು ಚರ್ಚೆ ನಡೆಸುವುದು ಸೂಕ್ತವಲ್ಲ. ಈ ವಿಚಾರದಲ್ಲಿ ಸಮಚಿತ್ತದಿಂದ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ವಿವಿಧ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆಯೂ ನಡೆಯಬೇಕು ಎಂದು ಹೇಳಿದ್ದಾರೆ.

ಈ ಪರಿಸ್ಥಿತಿಯಲ್ಲಿ ಹಾಲಿ ಲೋಕಸಭೆಯ ಸದಸ್ಯರ ಸಂಖ್ಯೆ ಮತ್ತು ರಾಜ್ಯವಾರು ಸ್ಥಾನಗಳ ಹಂಚಿಕೆಯನ್ನು ಮುಂದುವರಿಸುವುದೇ ದೇಶದ ಹಿತದೃಷ್ಟಿಯಿಂದ ಸೂಕ್ತ. ಇದೇ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯನ್ನು ಜಾರಿಗೊಳಿಸಬೇಕು. ವಿಕಸಿತ ಭಾರತ ಗುರಿ ಸಾಧಿಸುವವರೆಗೆ ಈ ವ್ಯವಸ್ಥೆಯನ್ನು ಬದಲಾಯಿಸದೆ ಮುಂದುವರಿಸಬೇಕು.

ವಿಕಸಿತ ಭಾರತ ಸಾಕಾರಗೊಂಡ ಬಳಿಕ ಮೂಲಭೂತವಾಗಿ ಹೊಸದಾದ ಮತಕ್ಷೇತ್ರ ಮರುವಿಂಗಡಣೆಯಿಂದ ಉಂಟಾಗಬಹುದಾದ ಪರಿಣಾಮಗಳನ್ನು ನಿರ್ವಹಿಸುವುದು ಹೆಚ್ಚು ಸೂಕ್ತವಾಗಲಿದೆ. ಇದು ವಿಕಸಿತ ಭಾರತದ ಗುರಿಗೆ ಸಲ್ಲಿಸುವ ಸೂಕ್ತ ಗೌರವವೂ ಆಗಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X