ಇತಿಹಾಸ ತಿರುಚಿದ ಮಾತ್ರಕ್ಕೆ ಸರ್ದಾರ್ ಪಟೇಲ್ ಬಗ್ಗೆ ಇಂದಿರಾ ಗಾಂಧಿಗಿದ್ದ ಅಪಾರ ಗೌರವ-ಮೆಚ್ಚುಗೆ ಅಳಿಸಲು ಸಾಧ್ಯವಿಲ್ಲ: ಜೈರಾಮ್ ರಮೇಶ್

ಪಟೇಲ್ ಮತ್ತು ಇಂದಿರಾ ಗಾಂಧಿ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸಿದ ರಮೇಶ್, ಇವರಿಬ್ಬರೂ ಭಾರತದ ಇತಿಹಾಸವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬಣ್ಣಿಸಿದದ್ದಾರೆ. ಇಬ್ಬರೂ ಭಾರತೀಯರು ಅಚಲವಾದ ಧೈರ್ಯ ಮತ್ತು ದೃಢ ನಿಶ್ಚಯವುಳ್ಳವರು
g Indira Gandhi greeting then Deputy Prime Minister Sardar Vallabhbhai Patel and Jawaharlal Nehru
ವಲ್ಲಭಬಾಯಿ ಪಟೇಲ್, ನೆಹರೂ ಮತ್ತು ಇಂದಿರಾಗಾಂಧಿ
Updated on: 

ನವದೆಹಲಿ: ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ 1947ರ ಅಪರೂಪದ ಛಾಯಾಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

ಇದರಲ್ಲಿ ಇಂದಿರಾ ಗಾಂಧಿ ಅಂದಿನ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ನಮಸ್ಕರಿಸುತ್ತಿರುವುದು ಕಂಡುಬರುತ್ತದೆ. ಈ ಚಿತ್ರವನ್ನು ಉಲ್ಲೇಖಿಸಿದ ರಮೇಶ್, ಕಾಂಗ್ರೆಸ್‌ನ ಈ ದಿಗ್ಗಜ ನಾಯಕರ ಬಗ್ಗೆ ಇಂದಿರಾ ಗಾಂಧಿಯವರಿಗಿದ್ದ ಅಪಾರ ಗೌರವ ಮತ್ತು ಮೆಚ್ಚುಗೆಯನ್ನು ಇತಿಹಾಸವನ್ನು ತಿರುಚುವವರು ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪಟೇಲ್ ಮತ್ತು ಇಂದಿರಾ ಗಾಂಧಿ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸಿದ ರಮೇಶ್, ಇವರಿಬ್ಬರೂ ಭಾರತದ ಇತಿಹಾಸವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬಣ್ಣಿಸಿದದ್ದಾರೆ. ಇಬ್ಬರೂ ಭಾರತೀಯರು ಅಚಲವಾದ ಧೈರ್ಯ ಮತ್ತು ದೃಢ ನಿಶ್ಚಯವುಳ್ಳವರು. ಇವರಿಬ್ಬರೂ ಉಪಖಂಡ ಭಾರತದ ಭೌಗೋಳಿಕತೆ ಮತ್ತು ಇತಿಹಾಸವನ್ನು ರೂಪಿಸಿದರು, ಎಂದು ಅವರು 'ಎಕ್ಸ್' (X) ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಪಟೇಲ್ ಅವರ ಬಗ್ಗೆ ಮಾತನಾಡಿದ ರಮೇಶ್, "ಭಾರತದ ಸ್ವಾತಂತ್ರ್ಯದ ಪ್ರಮುಖ ರೂವಾರಿಗಳಲ್ಲಿ ಒಬ್ಬರಾದ ಮತ್ತು ಭಾರತದ ಏಕತೆಯನ್ನು ವಾಸ್ತವಿಕ ರೂಪಕ್ಕೆ ತಂದ ಮಹಾನ್ ನಾಯಕರ 151ನೇ ಜನ್ಮದಿನವನ್ನು ನಾವಿಂದು ಆಚರಿಸುತ್ತಿದ್ದೇವೆ. ದಶಕಗಳ ನಂತರ ಬಂದ 'ಶ್ವೇತ ಕ್ರಾಂತಿ'ಗೆ (ಹಾಲಿನ ಉತ್ಪಾದನಾ ಕ್ರಾಂತಿ) ಸ್ಫೂರ್ತಿಯಾದವರೂ ಅವರೇ," ಎಂದು ತಿಳಿಸಿದ್ದಾರೆ.

ಇಂದಿರಾ ಗಾಂಧಿಯವರ ಬಗ್ಗೆ ಮಾತನಾಡುತ್ತಾ, "ಸ್ವತಂತ್ರ ಭಾರತವನ್ನು ಪರಮಾಣು ಮತ್ತು ಬಾಹ್ಯಾಕಾಶ ಶಕ್ತಿಯಾಗಿ ಬಲಪಡಿಸಿದ, ಹಾಗೂ ತಮ್ಮ ಜೀವಿತಾವಧಿಯಲ್ಲಿ 'ಹಸಿರು ಕ್ರಾಂತಿ'ಗೆ ಚಾಲನೆ ನೀಡಿದ ಅತ್ಯಂತ ಧೈರ್ಯಶಾಲಿ ಮತ್ತು ಪ್ರಭಾವಶಾಲಿ ವ್ಯಕ್ತಿಯ 42ನೇ ಪುಣ್ಯತಿಥಿಯನ್ನು ನಾವಿಂದು ಸ್ಮರಿಸುತ್ತಿದ್ದೇವೆ, ಎಂದು ಅವರು ತಿಳಿಸಿದರು.

ಇಂದಿರಾ ಗಾಂಧಿಯವರು ಪಟೇಲ್ ಅವರಿಗೆ ನಮಸ್ಕರಿಸುತ್ತಿರುವ ಮತ್ತು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಅದನ್ನು ವೀಕ್ಷಿಸುತ್ತಿರುವ ಈ ಚಿತ್ರವನ್ನು ಹಂಚಿಕೊಂಡ ರಮೇಶ್, ಇದು 1947ರ ನವೆಂಬರ್ ಆರಂಭದಲ್ಲಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೆರೆಹಿಡಿಯಲ್ಪಟ್ಟ ಛಾಯಾಚಿತ್ರವಾಗಿದೆ ಎಂದು ಹೇಳಿದರು. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ILO) ಏಷ್ಯನ್ ಪ್ರಾದೇಶಿಕ ಸಮ್ಮೇಳನದ ಪ್ರತಿನಿಧಿಗಳಿಗಾಗಿ ಪ್ರಧಾನಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಚಿತ್ರದಲ್ಲಿ 30 ವರ್ಷದ ಇಂದಿರಾ ಗಾಂಧಿಯವರು, 72 ವರ್ಷದ ಉಪ ಪ್ರಧಾನಿ ಪಟೇಲ್ ಅವರಿಗೆ ನಮಸ್ಕರಿಸುತ್ತಿರುವುದನ್ನು ಕಾಣಬಹುದು.

g Indira Gandhi greeting then Deputy Prime Minister Sardar Vallabhbhai Patel and Jawaharlal Nehru
ಸರ್ದಾರ್ ಪಟೇಲ್ ಗೆ 14 ಮತ ಬಂದಿದ್ದರೂ ಕೇವಲ 1 ವೋಟ್ ಗಳಿಸಿದ್ದ ನೆಹರೂ ಪ್ರಧಾನಿಯಾದರು: BJP ಸಂಸದ ರಘುನಂದನ್ ರಾವ್; Video

"ಸರ್ದಾರ್ ಪಟೇಲ್ ಅವರ ಬಗ್ಗೆ ಇಂದಿರಾ ಗಾಂಧಿಯವರಿಗಿದ್ದ ಅಪಾರ ಗೌರವ ಮತ್ತು ಮೆಚ್ಚುಗೆಯನ್ನು ಇತಿಹಾಸವನ್ನು ತಿರುಚುವವರು ಅಳಿಸಿಹಾಕಲು ಸಾಧ್ಯವಿಲ್ಲ. ಪಟೇಲ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ತಮ್ಮ ಹೃದಯಾಂತರಾಳದಿಂದ ಅವರ ಬಗ್ಗೆ ಮಾತನಾಡಿದ್ದರು. ಅಲ್ಲದೆ, 1949ರ ಫೆಬ್ರವರಿ 13ರಂದು ಗೋಧ್ರಾದಲ್ಲಿ, ಜೀವಂತ ವ್ಯಕ್ತಿಯೊಬ್ಬರ ಪ್ರತಿಮೆಯನ್ನು ಸ್ವತಃ ನೆಹರೂ ಅವರೇ ಅನಾವರಣಗೊಳಿಸಿದ್ದರು; ಅದು ಸರ್ದಾರ್ ಪಟೇಲ್ ಅವರ ಪ್ರತಿಮೆಯಾಗಿತ್ತು," ಎಂದು ರಮೇಶ್ ಹೇಳಿದರು.

ಪಟೇಲ್ ಅವರು 1875ರ ಅಕ್ಟೋಬರ್ 31ರಂದು ಗುಜರಾತ್‌ನ ನಾಡಿಯಾದ್‌ನಲ್ಲಿ ಜನಿಸಿದರು. ಅವರು 1950ರ ಡಿಸೆಂಬರ್ 15ರಂದು ನಿಧನರಾದರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಪಟೇಲ್ ಅವರು ದೇಶದ ಮೊದಲ ಗೃಹ ಸಚಿವರಾದರು. 560ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಭಾರತದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರು, 1984ರ ಇದೇ ದಿನದಂದು ಇಲ್ಲಿ ತಮ್ಮ ಅಂಗರಕ್ಷಕರಿಂದ ಹತ್ಯೆಗೀಡಾದರು. ಅವರು 1917ರ ನವೆಂಬರ್ 19ರಂದು ಜನಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X