'ಪ್ರಾಜೆಕ್ಟ್ ಚೀತಾ'ಕ್ಕೆ ಮತ್ತೊಂದು ಮೈಲಿಗಲ್ಲು: ಕುನೋ ಕಾಡಿನಲ್ಲಿ 4 ಮರಿಗಳಿಗೆ ಜನ್ಮ ನೀಡಿದ Botswana ಚೀತಾ..! Video

“ಪ್ರಾಜೆಕ್ಟ್ ಚೀತಾ' ಯೋಜನೆಯಲ್ಲಿನ ಮಹತ್ವದ ಮೈಲಿಗಲ್ಲು. ಭಾರತದಲ್ಲಿ ಚಿರತೆಗಳ ಸಂತತಿಯನ್ನು ಪುನಃ ಸ್ಥಾಪಿಸುವ ಪ್ರಯತ್ನದಲ್ಲಿ ಹೆಮ್ಮೆಯ ಸಾಧನೆಯಾಗಿದೆ.
he young mother has been in the wild for more than four months and mated with an Indian-born male cheetah.
4 ಮರಿಗಳಿಗೆ ಜನ್ಮ ನೀಡಿದ ಚೀತಾ
Updated on: 

ನವದೆಹಲಿ/ಭೋಪಾಲ್: ಬೋಟ್ಸ್ವಾನಾದಿಂದ ಭಾರತಕ್ಕೆ ಕರೆತಂದ ಎರಡೂವರೆ ವರ್ಷದ ಹೆಣ್ಣು ಚಿರತೆ ಕೆಒಎಂಜಿ 3, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದ ಕಾಡಿನಲ್ಲಿ ಶುಕ್ರವಾರ ನಾಲ್ಕು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು, ನಾಲ್ಕು ಹೊಸ ಮರಿಗಳ ಆಗಮನದೊಂದಿಗೆ ಭಾರತದಲ್ಲಿರುವ ಒಟ್ಟು ಚೀತಾಗಳ ಸಂಖ್ಯೆ 62ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ. ಇವುಗಳಲ್ಲಿ 43 ಚೀತಾಗಳು ಭಾರತದ ನೆಲದಲ್ಲೇ ಜನಿಸಿರುವುದು ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ.

“ಪ್ರಾಜೆಕ್ಟ್ ಚೀತಾ' ಯೋಜನೆಯಲ್ಲಿನ ಮಹತ್ವದ ಮೈಲಿಗಲ್ಲು. ಭಾರತದಲ್ಲಿ ಚಿರತೆಗಳ ಸಂತತಿಯನ್ನು ಪುನಃ ಸ್ಥಾಪಿಸುವ ಪ್ರಯತ್ನದಲ್ಲಿ ಹೆಮ್ಮೆಯ ಸಾಧನೆಯಾಗಿದೆ ಎಂದು ಹೇಳಿದ್ದಾರೆ.

2022ರಲ್ಲಿ ಚಿರತೆಗಳ ಮರುಪರಿಚಯ ಕಾರ್ಯಕ್ರಮ ಆರಂಭವಾದ ಬಳಿಕ ಕಾಡಿನಲ್ಲಿ ದಾಖಲಾಗಿರುವ ಎರಡನೇ ಸಂತಾನೋತ್ಪತ್ತಿ ಇದಾಗಿದೆ. ನಾಲ್ಕು ಹೊಸ ಮರಿಗಳ ಜನನದೊಂದಿಗೆ ಭಾರತದಲ್ಲಿನ ಚಿರತೆಗಳ ಒಟ್ಟು ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಈ ಪೈಕಿ 43 ಚಿರತೆಗಳು ಭಾರತದಲ್ಲೇ ಜನಿಸಿವೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರತಿ ಹೊಸ ಜನನವೂ ನಮ್ಮ ಭರವಸೆಯನ್ನು ಹೆಚ್ಚಿಸುತ್ತದೆ, ಸಂರಕ್ಷಣೆಯ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ವನ್ಯಜೀವಿ ಸಂರಕ್ಷಣೆ ಎನ್ನುವುದು ತಾಳ್ಮೆ, ನಿರಂತರ ಪ್ರಯತ್ನ ಮತ್ತು ಸಾಮೂಹಿಕ ಸಹಕಾರದ ಪಯಣ ಎಂಬುದನ್ನು ನೆನಪಿಸುತ್ತದೆ ಎಂದು ಹೇಳಿದ್ದಾರೆ.

he young mother has been in the wild for more than four months and mated with an Indian-born male cheetah.
ಚಿತ್ರದುರ್ಗ ಗ್ರಾಮದಲ್ಲಿ ಹಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ; ನಿಟ್ಟುಸಿರು ಬಿಟ್ಟ ಜನತೆ..!

ಚಿರತೆ ಯೋಜನೆಯ ಯಶಸ್ಸಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಯೋಜನಾ ನಿರ್ವಹಣಾಧಿಕಾರಿಗಳು, ಪಶುವೈದ್ಯರು, ಮುಂಚೂಣಿ ಅರಣ್ಯ ಸಿಬ್ಬಂದಿ ಹಾಗೂ ಇತರ ಎಲ್ಲರ ಸಮರ್ಪಣೆ, ಬದ್ಧತೆ ಮತ್ತು ಪರಿಶ್ರಮವನ್ನು ಸಚಿವರು ಶ್ಲಾಘಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಮೋಹನ್ ಯಾದವ್, ಇದು ಮಧ್ಯಪ್ರದೇಶ ಮತ್ತು ಇಡೀ ದೇಶಕ್ಕೆ ಹೆಮ್ಮೆಯ ಸಂಗತಿ. ಬೋಟ್ಸ್ವಾನಾದಿಂದ ಬಂದ ಹೆಣ್ಣು ಚಿರತೆಯೊಂದು ಭಾರತದಲ್ಲಿ ಮೊದಲ ಬಾರಿಗೆ ಮರಿಗಳಿಗೆ ಜನ್ಮ ನೀಡಿರುವುದು ಚಿರತೆ ಯೋಜನೆಯ ಐತಿಹಾಸಿಕ ಸಾಧನೆಯಾಗಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಚಿರತೆಗಳ ಸಂತತಿಯನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹಾಗೂ ಉತ್ತೇಜನಕಾರಿ ಹೆಜ್ಜೆಯಾಗಿದೆ. ಕೆಒಎಂಜಿ 3 ಎಂಬ ಹೆಣ್ಣು ಚಿರತೆ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಕಾಡಿನಲ್ಲಿ ಸ್ವತಂತ್ರವಾಗಿ ವಾಸಿಸಿದ ಬಳಿಕ ಸಹಜ ಪರಿಸರದಲ್ಲಿ ನಾಲ್ಕು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದೆ ಎಂದು ತಿಳಿಸಿದ್ದಾರೆ.

ಚಿರತೆ ಯೋಜನೆಯ ನಿರ್ವಹಣೆಯಲ್ಲಿ ತೊಡಗಿರುವ ಅಧಿಕಾರಿಗಳು, ವನ್ಯಜೀವಿ ತಜ್ಞರು, ಪಶುವೈದ್ಯರು ಮತ್ತು ಮುಂಚೂಣಿ ಅರಣ್ಯ ಸಿಬ್ಬಂದಿಯ ಸಮರ್ಪಣೆ, ಅವಿರತ ಪರಿಶ್ರಮ ಹಾಗೂ ಬದ್ಧತೆಯಿಂದ ಈ ಮಹತ್ವದ ಯಶಸ್ಸು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ವನ್ಯಜೀವಿ ಸಂರಕ್ಷಣೆ ಮತ್ತು ಜೀವವೈವಿಧ್ಯ ಉತ್ತೇಜನ ಕ್ಷೇತ್ರಗಳಲ್ಲಿ ಮಧ್ಯಪ್ರದೇಶ ನಿರಂತರವಾಗಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X