ದೇಶದ ಅತಿ ಉದ್ದದ ನದಿ ಸೇತುವೆ, ಆರು ಪಥದ 'ನಿತೀಶ್​​ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ

ಸೇತುವೆ ಉದ್ಘಾಟನೆಗಾಗಿ ಪಾಟ್ನಾಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ನಿತೀಶ್‌ ಕುಮಾರ್‌ ಸ್ವಾಗತಿಸಿದರು. ಇಬ್ಬರೂ ನಾಯಕರು ಆತ್ಮೀಯವಾಗಿ ಅಪ್ಪುಗೆ ವಿನಿಮಯ ಮಾಡಿಕೊಂಡರು.
PM Modi inaugurates Rs 4,280-crore Nitish Setu bridge over Ganga in Bihar
'ನಿತೀಶ್​​ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ
Updated on: 

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ದೇಶದ ಅತಿ ಉದ್ದದ 'ನಿತೀಶ್ ಸೇತು' ಎಂಬ ಕೇಬಲ್-ಸ್ಟೇಡ್(ತಂತಿ ಆಧಾರಿತ) ಸೇತುವೆಯನ್ನು ಉದ್ಘಾಟಿಸಿದರು. ಆರು ಪಥದ ಈ ಸೇತುವೆ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ.

4,280 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 9.76 ಕಿ.ಮೀ ಉದ್ದದ ಆರು ಪಥಗಳ ಸೇತುವೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಿಬ್ಬನ್​ ಕತ್ತರಿಸುವ ಮೂಲಕ ಉಗ್ಘಾಟಿಸಿದರು. ಬಳಿಕ ಈ ಸೇತುವೆ ಮೇಲೆ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್​ ಚೌಧರಿ ಮತ್ತು ಉಪಮುಖ್ಯಮಂತ್ರಿ ವಿಜಯ್​ ಕುಮಾರ್​ ಚೌಧರಿ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಜೊತೆಗೆ ಹೆಜ್ಜೆ ಹಾಕಿದರು.

ಸೇತುವೆ ಉದ್ಘಾಟನೆಗಾಗಿ ಪಾಟ್ನಾಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ನಿತೀಶ್‌ ಕುಮಾರ್‌ ಸ್ವಾಗತಿಸಿದರು. ಇಬ್ಬರೂ ನಾಯಕರು ಆತ್ಮೀಯವಾಗಿ ಅಪ್ಪುಗೆ ವಿನಿಮಯ ಮಾಡಿಕೊಂಡರು.

PM Modi inaugurates Rs 4,280-crore Nitish Setu bridge over Ganga in Bihar
ನಾಳೆ ಪ್ರಧಾನಿ ಮೋದಿಯಿಂದ 'ನಿತೀಶ್ ಸೇತು' ಉದ್ಘಾಟನೆ

ವೈಶಾಲಿಯ ಬಿದುಪುರ್ ಬ್ಲಾಕ್‌ನಿಂದ ಪಾಟ್ನಾದ ಹೊರವಲಯದಲ್ಲಿರುವ ಕಚ್ಚಿ ದರ್ಗಾಕ್ಕೆ ಸಂಪರ್ಕ ಕಲ್ಪಿಸುವ 9.76 ಕಿಮೀ ಉದ್ದದ ಆರು ಪಥದ ಸೇತುವೆಗೆ 'ನಿತೀಶ್ ಸೇತು' ಎಂದು ನಾಮಕರಣ ಮಾಡಲಾಗಿದೆ.

JD-U ನೇತೃತ್ವದ ಮತ್ತು ಸುಮಾರು ಎರಡು ದಶಕಗಳ ಅವಧಿಯ ನಂತರ ಕಳೆದ ಏಪ್ರಿಲ್‌ನಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಿದ ನಿತೀಶ್ ಕುಮಾರ್ ಅವರು, 2012 ರಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದರು. ಆದರೆ 2015 ರಲ್ಲಿ ಕೆಲಸ ಪ್ರಾರಂಭವಾಯಿತು. ಕೇಂದ್ರದ NDA ಸರ್ಕಾರವು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನಿಂದ 3472.15 ಕೋಟಿ ರೂ. ಸಾಲವಾಗಿ ಪಡೆಯಲು ರಾಜ್ಯಕ್ಕೆ ಸಹಾಯ ಮಾಡಿದ ನಂತರ ಈ ಯೋಜನೆ ವೇಗ ಪಡೆದುಕೊಂಡಿತು.

ಈ ಸೇತುವೆ ಹೊರತಾಗಿ ಪ್ರಧಾನಿ ನರೇಂದ್ರ ಮೋದಿ ಅವರು 34,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ 227 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ ಬಕ್ಸಾರ್ ಉಷ್ಣ ವಿದ್ಯುತ್ ಯೋಜನೆಯ ಎರಡನೇ ಘಟಕ, ಫಲಾನುಭವಿಗಳಿಗೆ 26,917 ಪಕ್ಕಾ ಮನೆಗಳನ್ನು ಹಸ್ತಾಂತರಿಸುವುದು, 106 ಆರೋಗ್ಯ ಕೇಂದ್ರಗಳ ಉದ್ಘಾಟನೆ, ರಾಜ್ಯಾದ್ಯಂತ 11 ನಗರಗಳಲ್ಲಿ ಕುಡಿಯುವ ನೀರಿನ ಪೂರೈಕೆ, 100 ಎಲೆಕ್ಟ್ರಿಕ್ ಬಸ್‌ಗಳು ಹಾಗೂ ಪಾಟ್ನಾ ಮತ್ತು ಗಯಾದಲ್ಲಿ ಕೃಷಿ ಮಾರುಕಟ್ಟೆಗಳ ಉದ್ಘಾಟನೆಗಳು ಸೇರಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X