‘BJP-RSS ಸಂಸ್ಕಾರಹೀನ, ದುರಾಸೆ, ಜಾತಿವಾದಿ ಪುರುಷ ಪ್ರಧಾನ ಮನೋಭಾವ ಹೊಂದಿವೆ’: ರಾಹುಲ್ ಗಾಂಧಿ

ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಆತ್ಮಕಥನ Belonging: A Journey Of Love ಬಿಡುಗಡೆ ಸಮಾರಂಭದಲ್ಲಿ, “ಊಟ ಮಾಡುವಾಗ ತಾಯಿ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು” ಎಂಬ ಹೇಳಿಕೆ ನೀಡಿದ್ದಕ್ಕಾಗಿ ಆಡಳಿತಾರೂಢ ಬಿಜೆಪಿ ಟೀಕಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ರೀತಿ ಬರೆದುಕೊಂಡಿದ್ದಾರೆ.
Rahul Gandhi
ರಾಹುಲ್ ಗಾಂಧಿ
Updated on: 

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅಸಭ್ಯ, ದುರಾಸೆಯ, ಜಾತಿವಾದಿ ಪುರುಷ ಪ್ರಧಾನ ಮನಸ್ಥಿತಿಯ ಸಂಘಟನೆಗಳು. ನಮ್ಮ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಅವರಿಗೆ ಯಾವುದೇ ತಿಳಿವಳಿಕೆಯಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಶಿವ ಮತ್ತು ಪಾರ್ವತಿ ದೇವಿಯರು ಒಂದೇ ರೂಪದಲ್ಲಿ ಸಮ್ಮಿಳಿತಗೊಂಡಿರುವ ಅರ್ಧನಾರೀಶ್ವರನ ಶಿಲ್ಪದ ಚಿತ್ರವನ್ನು ಹಂಚಿಕೊಂಡಿದ್ದಾರೆ.

ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಆತ್ಮಕಥನ Belonging: A Journey Of Love ಬಿಡುಗಡೆ ಸಮಾರಂಭದಲ್ಲಿ, “ಊಟ ಮಾಡುವಾಗ ತಾಯಿ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು” ಎಂಬ ಹೇಳಿಕೆ ನೀಡಿದ್ದಕ್ಕಾಗಿ ಆಡಳಿತಾರೂಢ ಬಿಜೆಪಿ ಟೀಕಿಸಿದ ಬೆನ್ನಲ್ಲೇ ರಾಹುಲ್ ಈ ಹೇಳಿಕೆ ನೀಡಿದ್ದಾರೆ.

Rahul Gandhi
'ಅಪ್ಪನ ತೊಡೆ ಮೇಲೆ ಅಮ್ಮ' ಹೇಳಿಕೆ: BJP, RSS ಮನಸ್ಸಿನಲ್ಲಿ ದ್ವೇಷ; ಶಿವ-ಪಾರ್ವತಿ ಫೋಟೋ ಹಾಕಿ ರಾಹುಲ್ ತಿರುಗೇಟು!

ಭಾರತೀಯ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಪ್ರದಾಯಗಳ ಆಳಕ್ಕೆ ಇಳಿದಂತೆಲ್ಲ ನನಗೆ ಒಂದು ವಿಷಯ ಹೆಚ್ಚು ಸ್ಪಷ್ಟವಾಗುತ್ತಿದೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಸಭ್ಯ, ದುರಾಸೆಯ, ಜಾತಿವಾದಿ ಪುರುಷ ಪ್ರಧಾನ ಮನಸ್ಥಿತಿಯ ಸಂಘಟನೆಗಳಾಗಿದ್ದು, ನಮ್ಮ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಅವರಿಗೆ ಯಾವುದೇ ತಿಳಿವಳಿಕೆಯಿಲ್ಲ ಎಂದು ಹೇಳಿದ್ದಾರೆ.

ಎಲಿಫೆಂಟಾ ಗುಹೆಗಳಲ್ಲಿರುವ ಶಿವ ಮತ್ತು ಪಾರ್ವತಿ ದೇವಿಯರು ಒಂದೇ ರೂಪದಲ್ಲಿ ಸಮ್ಮಿಳಿತಗೊಂಡಿರುವ ಅರ್ಧನಾರೀಶ್ವರನ ಶಿಲ್ಪದ ಚಿತ್ರವನ್ನು ರಾಹುಲ್ ಹಂಚಿಕೊಂಡಿದ್ದಾರೆ. ಅರ್ಧನಾರೀಶ್ವರ ಹಿಂದೂ ಧರ್ಮದ ವಿಶಿಷ್ಟ ದೇವತಾ ಸ್ವರೂಪವಾಗಿದ್ದು, ಶಿವ ಮತ್ತು ಪಾರ್ವತಿ ದೇವಿಯರು ಅರ್ಧ ಪುರುಷ ಹಾಗೂ ಅರ್ಧ ಸ್ತ್ರೀ ರೂಪದಲ್ಲಿ ಒಂದೇ ದೇಹದಲ್ಲಿ ಕಾಣಿಸಿಕೊಳ್ಳುತ್ತಾರೆ.

ಇದಕ್ಕೂ ಮೊದಲು , 12ನೇ ಶತಮಾನದ ದೇವಾಲಯದ ಶಿಲ್ಪವೊಂದರಲ್ಲಿ ಪಾರ್ವತಿ ದೇವಿಯು ಶಿವನ ತೊಡೆಯ ಮೇಲೆ ಕುಳಿತಿರುವ ಚಿತ್ರವನ್ನು ಹಂಚಿಕೊಂಡಿದ್ದ ರಾಹುಲ್, ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರ ಮನಸ್ಸಿನಲ್ಲಿ ಭಯ, ಕೋಪ ಮತ್ತು ದ್ವೇಷದ ಜಾಲ ಹೆಣೆದುಕೊಂಡಿದೆ. ಅದು ಪ್ರೀತಿಯನ್ನು ವ್ಯಕ್ತಪಡಿಸುವುದರಿಂದ ಅವರನ್ನು ತಡೆಯುತ್ತಿದೆ ಎಂದು ಹೇಳಿದ್ದರು.

ನಿಜವಾದ ಹಿಂದೂವಾಗಿ, ಈ ಜಾಲದಿಂದ ಅವರನ್ನು ಮುಕ್ತಗೊಳಿಸುವುದು ನನ್ನ ಕರ್ತವ್ಯ. ಆಗ ಅವರೂ ತಮ್ಮ ಬದುಕಿನಲ್ಲಿ ಪ್ರೀತಿ ಮತ್ತು ಆತ್ಮೀಯತೆಯ ಅದ್ಭುತ ಸೌಂದರ್ಯ ಹಾಗೂ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಸತ್ಯಂ ಶಿವಂ ಸುಂದರಂ ಎಂದು ಬರೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X