ಸೂಟ್ ಖರೀದಿಗೆ ಪತ್ನಿ 22 ಸಾವಿರ ಖರ್ಚು, ಪತ್ನಿ ಜೊತೆ ಕಿರಿಕ್; ಉಳಿತಾಯದ ಹಣವನ್ನೆಲ್ಲಾ ಸುಟ್ಟು ಹಾಕಿದ 'ಪತಿ ಮಹಾಶಯ'! Video

ಕೋಪಗೊಂಡ ಪತಿ ಆಕೆಯೊಂದಿಗೆ ಜಗಳವಾಡಿದ್ದಾನೆ. ದುಬಾರಿ ಬಟ್ಟೆ ಖರೀದಿಸುವ ಅಗತ್ಯವೇನಿತ್ತು ಎಂಬ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.
Angry Husband Sets Rs 500 Notes On Fire In Rajasthan
ಪತ್ನಿ ಜೊತೆ ಕಿರಿಕ್, ಉಳಿತಾಯದ ಹಣಕ್ಕೆ ಬೆಂಕಿ ಇಟ್ಟ ಪತಿರಾಯ
Updated on: 

ಜೈಪುರ: ಪತ್ನಿಯೊಂದಿಗೆ ನಡೆದ ಜಗಳವೊಂದು ವಿಚಿತ್ರ ಘಟನೆಗೆ ಕಾರಣವಾಗಿರುವ ವರದಿಯೊಂದು ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ.

ಪತ್ನಿ 22 ಸಾವಿರ ರೂ ಖರ್ಚು ಮಾಡಿ ಸೂಟ್ ಖರೀದಿಸಿದ್ದಕ್ಕೆ ಆಕ್ರೋಶಗೊಂಡ ಪತಿ, ತಾನು ಒಂದು ವರ್ಷದಿಂದ ದುಡಿದು ಸಂಪಾದಿಸಿದ್ದ ಹಣಕ್ಕೆ ಬೆಂಕಿ ಹಚ್ಚಿದ್ದಾನೆ.

ಈ ಘಟನೆಯಿಂದ ದಂಪತಿಯ ಉಳಿತಾಯದ ಹಣ ಸಂಪೂರ್ಣ ಭಸ್ಮವಾಗಿದೆ ಎಂದು ವರದಿಯಾಗಿದೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆ ಪಡೆಯುತ್ತಿದೆ.

Angry Husband Sets Rs 500 Notes On Fire In Rajasthan
ಬಿಹಾರ: ನಿತೀಶ್ ಸೇತುವೆಯಲ್ಲಿ RJD ಕಾರ್ಯಕರ್ತರ ಗದ್ದಲ: ಪ್ರಧಾನಿ ಮೋದಿ, ಬಿಹಾರ ಸಿಎಂ ಬ್ಯಾನರ್‌ ಹರಿದು ಹಾಕಿದ ಕಾರ್ಯಕರ್ತರು; Video

ಒಂದು ವರ್ಷದ ಸಂಪಾದನೆಗೆ ಬೆಂಕಿ, ಇಷ್ಟಕ್ಕೂ ಆಗಿದ್ದೇನು?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಪತ್ನಿ 22 ಸಾವಿರ ರೂ ನೀಡಿ ಪತಿಗಾಗಿ ಸೂಟ್ ಖರೀದಿಸಿದ್ದಳು. ಇದರಿಂದ ಕೋಪಗೊಂಡ ಪತಿ ಆಕೆಯೊಂದಿಗೆ ಜಗಳವಾಡಿದ್ದಾನೆ. ದುಬಾರಿ ಬಟ್ಟೆ ಖರೀದಿಸುವ ಅಗತ್ಯವೇನಿತ್ತು ಎಂಬ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಈ ವೇಳೆ ತೀವ್ರ ಆಕ್ರೋಶಗೊಂಡ ಪತಿ, ತಾನು ವರ್ಷವಿಡೀ ದುಡಿದು ಕೂಡಿಟ್ಟಿದ್ದ ಹಣವನ್ನೇ ಸುಟ್ಟು ಹಾಕಿದ್ದಾನೆ. ಇದರಿಂದ ದಂಪತಿ ಉಳಿತಾಯ ಮಾಡಿದ್ದ ಹಣ ಬೆಂಕಿಗೆ ಆಹುತಿಯಾಗಿದೆ.

ಕೋಪದಿಂದ ಆರ್ಥಿಕ ನಷ್ಟ

ಸಣ್ಣ ವಿಚಾರಕ್ಕೆ ಆರಂಭವಾದ ಜಗಳ ಕೊನೆಗೆ ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ಕ್ಷಣಿಕ ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಎಂತಹ ಪರಿಣಾಮ ಬೀರಬಹುದು ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.

ಸತ್ಯಾಸತ್ಯತೆ ಇನ್ನಷ್ಟೇ ಬಯಲಾಗಬೇಕಿದೆ

ಹಣವನ್ನು ಸುಟ್ಟು ಹಾಕಿದ ಘಟನೆ ಹಾಗೂ ಅದರ ಹಿಂದಿನ ನಿಖರ ಕಾರಣಗಳ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಆದರೆ, ಈ ಘಟನೆಯಲ್ಲಿ ಸುಟ್ಟುಹೋದ ಹಣದ ನಿಖರ ಮೊತ್ತ, ದಂಪತಿಯ ಗುರುತು ಹಾಗೂ ಘಟನೆಯ ಸಂಪೂರ್ಣ ವಿವರಗಳು ಸ್ವತಂತ್ರವಾಗಿ ದೃಢಪಟ್ಟಿಲ್ಲ. ಆದಾಗ್ಯೂ ಈ ಘಟನೆಯ ನೈಜತೆ ಇನ್ನಷ್ಟೇ ಬಯಲಾಗಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X