ಬದಲಾಗುತ್ತಿರುವ ಭಾರತದ ಆರ್ಥಿಕ ಪಯಣಕ್ಕೆ ಹೊಸ ಕನ್ನಡಿ; ವಾಣಿಜ್ಯ ಪತ್ರಿಕೋದ್ಯಮಕ್ಕೆ The New Indian Express ಹೊಸ ಕೊಡುಗೆ, 'The Financial Standard' ಲೋಕಾರ್ಪಣೆ

ರಾಷ್ಟ್ರೀಯ ಮಟ್ಟದ ಹೊಸ ಉದ್ಯಮ ಪತ್ರಿಕೆ ‘The Financial Standard’ ಮತ್ತು ಅದರ ವೆಬ್‌ಸೈಟ್ financialstandard.com ಅನ್ನು ಓದುಗರಿಗೆ ಪರಿಚಯಿಸುವ ಮೂಲಕ ವಾಣಿಜ್ಯ ಪತ್ರಿಕೋದ್ಯಮದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.
The Financial Standard
ದಿ ಫೈನಾನ್ಷಿಯಲ್ ಸ್ಟ್ಯಾಂಡರ್ಡ್
Updated on: 

ಭಾರತದ ಆರ್ಥಿಕ ಪಯಣ ಮಹತ್ವದ ತಿರುವಿನಲ್ಲಿರುವ ಈ ಸಂದರ್ಭದಲ್ಲಿ, ದೇಶದ ಆರ್ಥಿಕತೆ, ಉದ್ಯಮ, ಮಾರುಕಟ್ಟೆ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಆಳವಾದ ವಿಶ್ಲೇಷಣೆ ನೀಡುವ ಉದ್ದೇಶದೊಂದಿಗೆ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಸಮೂಹ ಹೊಸ ಹೆಜ್ಜೆಯನ್ನಿಟ್ಟಿದೆ.

ರಾಷ್ಟ್ರೀಯ ಮಟ್ಟದ ಹೊಸ ಉದ್ಯಮ ಪತ್ರಿಕೆ ‘The Financial Standard’ ಮತ್ತು ಅದರ ವೆಬ್‌ಸೈಟ್ financialstandard.com ಅನ್ನು ಓದುಗರಿಗೆ ಪರಿಚಯಿಸುವ ಮೂಲಕ ವಾಣಿಜ್ಯ ಪತ್ರಿಕೋದ್ಯಮದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.

ಪತ್ರಿಕೆ ಕುರಿತು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಸಮೂಹದ ಅಧ್ಯಕ್ಷ ಮನೋಜ್ ಕುಮಾರ್ ಸೋಂಥಾಲಿಯಾ ಅವರು ಹೇಳಿಕೆ ನೀಡಿದ್ದು,ರಾಷ್ಟ್ರೀಯ ಮಟ್ಟದ ವಾಣಿಜ್ದಿಯ ನಪತ್ರಿಕೆಯನ್ನು ಆರಂಭಿಸುವುದು ಸಮೂಹಕ್ಕೆ ಹೆಮ್ಮೆಯ ಮೈಲಿಗಲ್ಲು ಮಾತ್ರವಲ್ಲ, ಮಹತ್ವದ ಜವಾಬ್ದಾರಿಯೂ ಆಗಿದೆ. ಭಾರತದ ಆರ್ಥಿಕ ಪರಿವರ್ತನೆಯ ವ್ಯಾಪ್ತಿ ಮತ್ತು ಸಂಕೀರ್ಣತೆಯನ್ನು ಸಮಗ್ರವಾಗಿ ಕಟ್ಟಿಕೊಡುವ ಪತ್ರಿಕೆಯ ಅಗತ್ಯವಿದೆ ಎಂಬ ನಂಬಿಕೆಯೊಂದಿಗೆ ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ಭಾರತದ ಬೆಳವಣಿಗೆಯ ಕಥೆ ಇನ್ನು ಕೆಲವೇ ಮಹಾನಗರಗಳು ಅಥವಾ ಸಾಂಪ್ರದಾಯಿಕ ಉದ್ಯಮ ಕೇಂದ್ರಗಳಿಗೆ ಸೀಮಿತವಾಗಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಹೊಸ ಉತ್ಪಾದನಾ ಕೇಂದ್ರಗಳು ರೂಪುಗೊಳ್ಳುತ್ತಿವೆ. ಮೂಲಸೌಕರ್ಯ ಅಭಿವೃದ್ಧಿ ಮಾರುಕಟ್ಟೆಯ ಸ್ವರೂಪವನ್ನೇ ಬದಲಿಸುತ್ತಿದೆ. ಹೊಸ ಆವಿಷ್ಕಾರಗಳು ಉದ್ಯಮಗಳಿಗೆ ಹೊಸ ಅವಕಾಶಗಳನ್ನು ತೆರೆದಿಡುತ್ತಿವೆ. ವಿವಿಧ ನಗರಗಳು ಮತ್ತು ಪ್ರಾದೇಶಿಕ ಕೇಂದ್ರಗಳಲ್ಲಿರುವ ಉದ್ಯಮಗಳು ರಾಷ್ಟ್ರೀಯ ಹಾಗೂ ಜಾಗತಿಕ ಆರ್ಥಿಕತೆಯಲ್ಲಿ ತಮ್ಮದೇ ಆದ ಸ್ಥಾನವನ್ನು ಕಂಡುಕೊಳ್ಳುತ್ತಿವೆ. ಕುಟುಂಬ ಆಧಾರಿತ ಉದ್ಯಮಗಳು, ನವೋದ್ಯಮಗಳು, ಪ್ರಾದೇಶಿಕ ಉದ್ಯಮ ಸಂಸ್ಥೆಗಳು ಹಾಗೂ ದೊಡ್ಡ ಕಾರ್ಪೊರೇಟ್ ಕಂಪನಿಗಳು ಭಾರತದ ಈ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಭಾರತದ ಆರ್ಥಿಕ ಶಕ್ತಿಯ ಮತ್ತೊಂದು ಪ್ರಮುಖ ಆಧಾರವೆಂದರೆ ದೇಶಾದ್ಯಂತ ಹರಡಿರುವ ನೂರಾರು ಉದ್ಯಮ ಮತ್ತು ಕೈಗಾರಿಕಾ ಸಮೂಹಗಳು. ಇವು ಸ್ಥಳೀಯ ಆರ್ಥಿಕತೆಗೆ ಚೈತನ್ಯ ನೀಡುವುದರ ಜತೆಗೆ ಉದ್ಯೋಗ ಸೃಷ್ಟಿ ಮತ್ತು ರಾಷ್ಟ್ರೀಯ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡುತ್ತಿವೆ. ಆದರೆ, ಇಂತಹ ಅನೇಕ ಉದ್ಯಮ ಕೇಂದ್ರಗಳಿಗೆ ದೊಡ್ಡ ಮಟ್ಟದ ವ್ಯವಹಾರ ವರದಿಗಳಲ್ಲಿ ಸೂಕ್ತ ಸ್ಥಾನ ಸಿಗುತ್ತಿಲ್ಲ. ಈ ಉದ್ಯಮಗಳು ಮತ್ತು ಸಮುದಾಯಗಳನ್ನು ರಾಷ್ಟ್ರೀಯ ಹಾಗೂ ಜಾಗತಿಕ ಆರ್ಥಿಕ ವ್ಯವಸ್ಥೆಯೊಂದಿಗೆ ಬೆಸೆಯುವ ಪ್ರಯತ್ನವನ್ನು ‘ದಿ ಫೈನಾನ್ಷಿಯಲ್ ಸ್ಟ್ಯಾಂಡರ್ಡ್’ ಮಾಡಲಿದೆ ಎಂದು ತಿಳಿಸಿದ್ದಾರೆ.

The Financial Standard
TNIE ವರದಿ ಫಲಶ್ರುತಿ: ಚನ್ನಪಟ್ಟಣ ಕೆರೆಗಳ ಪುನಶ್ಚೇತನಕ್ಕೆ ತಲಾ ₹3 ಕೋಟಿ ಮಂಜೂರು..!

ಉದಾಹರಣೆಗೆ, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರದ ನಿರ್ಧಾರಗಳು ತಮಿಳುನಾಡಿನ ತಿರುಪ್ಪೂರಿನ ರಫ್ತುದಾರರ ಮೇಲೆ ಬೀರುವ ಪರಿಣಾಮದಿಂದ ಹಿಡಿದು, ಜಾಗತಿಕ ವ್ಯಾಪಾರದಲ್ಲಿನ ಬದಲಾವಣೆಗಳು ಭಾರತದ ವಿವಿಧ ಕೈಗಾರಿಕಾ ಕೇಂದ್ರಗಳ ಮೇಲೆ ಉಂಟುಮಾಡುವ ಪರಿಣಾಮಗಳವರೆಗೆ ಪ್ರತಿಯೊಂದು ವಿಚಾರಕ್ಕೂ ಹೆಚ್ಚಿನ ಗಮನ ನೀಡಲಾಗುವುದು. ಸ್ಥಳೀಯ ಉದ್ಯಮ ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಗಳ ನಡುವಿನ ಸಂಬಂಧವನ್ನು ಆಳವಾಗಿ ಪರಿಶೀಲಿಸುವುದು ಪತ್ರಿಕೆಯ ಪ್ರಮುಖ ಉದ್ದೇಶವಾಗಿದೆ.

ಭಾರತದ ಆರ್ಥಿಕ ಪಯಣವನ್ನು ಜಾಗತಿಕ ಬೆಳವಣಿಗೆಗಳಿಂದ ಪ್ರತ್ಯೇಕಿಸಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಜಾಗತಿಕ ಮಾರುಕಟ್ಟೆಗಳಲ್ಲಿನ ಏರಿಳಿತ, ವ್ಯಾಪಾರ ಮತ್ತು ತಂತ್ರಜ್ಞಾನ ಕ್ಷೇತ್ರದ ಬದಲಾವಣೆಗಳು, ಭೌಗೋಳಿಕ ರಾಜಕೀಯ ಬೆಳವಣಿಗೆಗಳು ಹಾಗೂ ಹೂಡಿಕೆಯ ಹೊಸ ಪ್ರವೃತ್ತಿಗಳು ಭಾರತೀಯ ಉದ್ಯಮಗಳ ಅವಕಾಶ ಮತ್ತು ಸವಾಲುಗಳ ಮೇಲೆ ಪ್ರಭಾವ ಬೀರುತ್ತಿವೆ. ಅದೇ ರೀತಿ, ಭಾರತದ ನಿರ್ಧಾರಗಳು ಮತ್ತು ಆರ್ಥಿಕ ಮಹತ್ವಾಕಾಂಕ್ಷೆಗಳು ಜಾಗತಿಕ ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತಿವೆ.

ಈ ಎಲ್ಲ ಬೆಳವಣಿಗೆಗಳನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶವನ್ನು ಪತ್ರಿಕೆ ಹೊಂದಿದೆ. ಕೇವಲ ಸುದ್ದಿಗಳು ಮತ್ತು ಷೇರುಪೇಟೆಯ ಏರಿಳಿತಗಳಿಗೆ ಸೀಮಿತವಾಗದೆ, ಉದ್ಯಮ ಮತ್ತು ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಪ್ರವೃತ್ತಿಗಳು, ಬೆಳವಣಿಗೆಗಳು ಹಾಗೂ ಹೊಸ ಆಲೋಚನೆಗಳನ್ನು ಆಳವಾಗಿ ಪರಿಶೀಲಿಸಲಾಗುವುದು. ಸಮಗ್ರ ವರದಿ, ನಿಖರ ವಿಶ್ಲೇಷಣೆ, ಸ್ವತಂತ್ರ ಪ್ರಶ್ನೆಗಳು ಮತ್ತು ವಿಭಿನ್ನ ದೃಷ್ಟಿಕೋನಗಳ ಮೂಲಕ ವೇಗವಾಗಿ ಬದಲಾಗುತ್ತಿರುವ ಜಗತ್ತನ್ನು ಓದುಗರಿಗೆ ಅರ್ಥಮಾಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.

‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಸಮೂಹದ ಪ್ರಕಟಣೆಯಾಗಿ ಹೊರಬರುತ್ತಿರುವ ‘ದಿ ಫೈನಾನ್ಷಿಯಲ್ ಸ್ಟ್ಯಾಂಡರ್ಡ್’, ವಿಶ್ವಾಸಾರ್ಹ ಪತ್ರಿಕೋದ್ಯಮದ ಪರಂಪರೆಯನ್ನು ಮುಂದುವರಿಸಲಿದೆ. ಪ್ರಜಾಪ್ರಭುತ್ವ ಮತ್ತು ಪ್ರಗತಿಪರ ಆರ್ಥಿಕ ವ್ಯವಸ್ಥೆಗೆ ತಿಳಿವಳಿಕೆಯುಳ್ಳ ಸಾರ್ವಜನಿಕ ಚರ್ಚೆ ಅತ್ಯಗತ್ಯ ಎಂಬ ನಂಬಿಕೆಯನ್ನು ಸಮೂಹ ಹೊಂದಿದೆ. ನಿಖರತೆ, ನ್ಯಾಯಸಮ್ಮತತೆ, ಸ್ವತಂತ್ರ ನಿಲುವು ಮತ್ತು ಹೊಣೆಗಾರಿಕೆಯ ಮೂಲಕವೇ ಓದುಗರ ವಿಶ್ವಾಸ ಗಳಿಸಲು ಸಾಧ್ಯ ಎಂಬ ಮೌಲ್ಯಗಳು ಪತ್ರಿಕೆಯ ಕಾರ್ಯನಿರ್ವಹಣೆಯ ಕೇಂದ್ರಬಿಂದುವಾಗಿರಲಿವೆ.

ವಿನಯ, ದೃಢ ನಂಬಿಕೆ ಮತ್ತು ಓದುಗರಿಗೆ ಬದ್ಧತೆಯೊಂದಿಗೆ ಈ ಹೊಸ ಪಯಣ ಆರಂಭಿಸುತ್ತಿದ್ದೇವೆ. ಬದಲಾಗುತ್ತಿರುವ ಭಾರತದ ಉದ್ಯಮ ಜಗತ್ತು ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಅದರ ಸ್ಥಾನವನ್ನು ಅರ್ಥಮಾಡಿಕೊಳ್ಳಲು ಬಯಸುವ ಪ್ರತಿಯೊಬ್ಬರಿಗೂ ‘ದಿ ಫೈನಾನ್ಷಿಯಲ್ ಸ್ಟ್ಯಾಂಡರ್ಡ್’ ವಿಶ್ವಾಸಾರ್ಹ ಸಂಗಾತಿಯಾಗಲಿದೆ ಎಂಬ ಆಶಯವಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X