'ಹತಾಶೆಗೊಂಡ ಬೆಕ್ಕು ಕಂಬ ಪರಚಿದಂತೆ' ರಾಹುಲ್ ಗಾಂಧಿ ವರ್ತನೆ: ಕಂಗನಾ ರಣಾವತ್ ಲೇವಡಿ

ಭಾರತವು ಆರ್ಥಿಕ ವಿಪತ್ತಿನ ಅಂಚಿನಲ್ಲಿದೆ ಹಾಗೂ ಇದೇ ಆರ್ಥಿಕ ಹಾದಿಯಲ್ಲಿ ಮುಂದುವರಿದರೆ ದೇಶವು ಗಂಭೀರ ಸಂಕಷ್ಟಕ್ಕೆ ಸಿಲುಕಲಿದೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದರು.
Rahul gandhi and kangana ranuat
ರಾಹುಲ್ ಗಾಂಧಿ ಮತ್ತು ಕಂಗನಾ ರಣಾವತ್
Updated on: 

ನವದೆಹಲಿ: ಭಾರತದ ಆರ್ಥಿಕತೆಯ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಬಿಜೆಪಿ ಸಂಸದೆ ಕಂಗನಾ ರನೌತ್ ಭಾನುವಾರ ತಿರುಗೇಟು ನೀಡಿದ್ದು, ರಾಹುಲ್ ಹತಾಶೆಗೊಂಡ ಬೆಕ್ಕಿನಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್‌ಮಹಲ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಂಡಿ ಕ್ಷೇತ್ರದ ಸಂಸದೆ ಕಂಗನಾ, ಇತ್ತೀಚೆಗೆ ಅಮೆರಿಕ ಪ್ರವಾಸದ ವೇಳೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳಿಗೆ ಪ್ರತ್ಯುತ್ತರ ನೀಡಿದ್ದಾರೆ.

ಭಾರತವು ಆರ್ಥಿಕ ವಿಪತ್ತಿನ ಅಂಚಿನಲ್ಲಿದೆ ಹಾಗೂ ಇದೇ ಆರ್ಥಿಕ ಹಾದಿಯಲ್ಲಿ ಮುಂದುವರಿದರೆ ದೇಶವು ಗಂಭೀರ ಸಂಕಷ್ಟಕ್ಕೆ ಸಿಲುಕಲಿದೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ ಕಂಗನಾ, 'ಭಾರತವು ಏಷ್ಯಾದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಕಾಂಗ್ರೆಸ್ ನಾಯಕರು ಹತಾಶೆಗೊಂಡ ಬೆಕ್ಕು ಕಂಬ ಪರಚಿದಂತೆ ವರ್ತಿಸುತ್ತಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ. ಮಹಿಳಾ ಮೀಸಲಾತಿಯನ್ನು ವಿರೋಧಿಸುತ್ತಿರುವುದು ಕಾಂಗ್ರೆಸ್ ಪಕ್ಷವೇ ಹೊರತು, ರಾಹುಲ್ ಗಾಂಧಿ ಕರೆಯುವ ‘ಪುರುಷ ಪ್ರಧಾನ ಬಿಜೆಪಿ’ ಅಲ್ಲ ಎಂದು ಅವರು ಹೇಳಿದ್ದಾರೆ

Rahul gandhi and kangana ranuat
'BJP-RSS ಸಂಸ್ಕಾರಹೀನ; ದುರಾಸೆ, ಜಾತಿವಾದಿ ಪುರುಷ ಪ್ರಧಾನ ಮನೋಭಾವ ಹೊಂದಿವೆ': ರಾಹುಲ್ ಗಾಂಧಿ

ಆರ್‌ಎಸ್‌ಎಸ್ (RSS) ಮತ್ತು ಬಿಜೆಪಿಗಳು "ಅಸಂಸ್ಕೃತ, ದುರಾಸೆಯ, ಜಾತಿವಾದಿ ಮತ್ತು ಪುರುಷ ಪ್ರಾಧಾನ್ಯತೆ ಮೆರೆಯುವ ಮನಸ್ಥಿತಿಯವು" ಎಂದು ರಾಹುಲ್ ಗಾಂಧಿ ಭಾನುವಾರ ನೀಡಿದ್ದ ಹೇಳಿಕೆಯನ್ನೂ ಕಂಗನಾ ಲೇವಡಿ ಮಾಡಿದರು. ರಾಹುಲ್ ಗಾಂಧಿ ಅವರು ಬಿಜೆಪಿಯನ್ನು "ಪುರುಷ ಪ್ರಾಧಾನ್ಯತೆಯುಳ್ಳದ್ದು" ಎಂದು ಬಣ್ಣಿಸಿದ್ದರೂ, ವಾಸ್ತವದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುತ್ತಿರುವುದು ಕಾಂಗ್ರೆಸ್ ಪಕ್ಷವೇ ಎಂದು ಅವರು ಆರೋಪಿಸಿದರು.

"ಬಿಜೆಪಿಯು ಪುರುಷ ಪ್ರಾಧಾನ್ಯತೆಯುಳ್ಳದ್ದಾಗಿದ್ದರೆ, ಅದು ಏಕೆ ಮಹಿಳಾ ಮೀಸಲಾತಿ ಮಸೂದೆಗಾಗಿ ಹೋರಾಡುತ್ತಿದೆ? ವಾಸ್ತವದಲ್ಲಿ ಕಾಂಗ್ರೆಸ್ ಪಕ್ಷವೇ ಈ ಮಸೂದೆಯನ್ನು ವಿರೋಧಿಸುತ್ತಿದೆ ಮತ್ತು ಅದು ಜಾರಿಯಾಗದಂತೆ ತಡೆಯುತ್ತಿದೆ. ಮಹಿಳಾ ವಿರೋಧಿ ಮನಸ್ಥಿತಿ ಇರುವುದು ಕಾಂಗ್ರೆಸ್‌ಗೆ," ಎಂದು ಕಂಗನಾ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X