ಮಹಿಳಾ ಪತ್ರಕರ್ತೆಗೆ ಎಸಿಪಿ ಲೈಂಗಿಕ ಕಿರುಕುಳ ಕೇಸ್‌ಗೆ ಟ್ವಿಸ್ಟ್: AI ನಕಲಿ ವಿಡಿಯೋ ಹರಿಬಿಟ್ಟಿದ್ದ ವ್ಯಕ್ತಿಯ ಬಂಧನ

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಮಹಿಳಾ ಪತ್ರಕರ್ತೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಂಬಿಸುವ ನಕಲಿ AI ವಿಡಿಯೋ ಹರಿಬಿಟ್ಟಿದ್ದ ನದೀಮ್ ಅಹ್ಮದ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Delhi ACP Molestation Case: Youth Arrested For Circulating Fake AI Video Of Police Officer
ಬಂಧಿತ ನದೀಮ್ ಅಹ್ಮದ್ ಮತ್ತು ಡಿಸಿಪಿ ವಿವೇಕ್ ಭಗತ್Online Desk
Updated on: 

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು (ಎಸಿಪಿ) ಮಹಿಳಾ ಪತ್ರಕರ್ತೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಂಬಿಸುವ ನಕಲಿ AI ವಿಡಿಯೋ ಹರಿಬಿಟ್ಟಿದ್ದ ನದೀಮ್ ಅಹ್ಮದ್ (24) ಎಂಬ ವ್ಯಕ್ತಿಯನ್ನು ದೆಹಲಿ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕರೂಚ್ ಜನತಾ ಪಾರ್ಟಿ ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನೆಯ ವರದಿ ಮಾಡಲು ಹೋಗಿದ್ದ ಸ್ವತಂತ್ರ ಮಹಿಳಾ ಪತ್ರಕರ್ತೆಯೊಬ್ಬರು, ದೆಹಲಿ ಪೊಲೀಸ್ ಎಸಿಪಿ ವಿವೇಕ್ ಭಗತ್ ಅವರು ತಮ್ಮನ್ನು ಅನುಚಿತವಾಗಿ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಘಟನೆ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿವಾದದ ಬೆನ್ನಲ್ಲೇ ಆರೋಪಿ ನದೀಮ್ ಅಹ್ಮದ್ ತಾನು ನಡೆಸುತ್ತಿದ್ದ 24,000 ಚಂದಾದಾರರನ್ನು ಹೊಂದಿರುವ ನ್ಯೂಸ್ ಐನಾ ಟುಡೇ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದ. ಅದು ಪ್ರತಿಭಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಯಂತೆ ಕಾಣಿಸುತ್ತಿತ್ತು. ಅದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಗೆ ಲೈಂಗಿಕ ಕಿರುಕುಳ ನೀಡುವ ದೃಶ್ಯವಿದ್ದು, ಅದರ ಪಕ್ಕದಲ್ಲೇ ಎಸಿಪಿ ವಿವೇಕ್ ಭಗತ್ ಅವರ ಫೋಟೋ ಮತ್ತು ಹೆಸರನ್ನು ಹಾಕಿ ವಿಡಿಯೋದಲ್ಲಿರುವ ಅಧಿಕಾರಿಯೇ ವಿವೇಕ್ ಭಗತ್ ಎಂಬಂತೆ ಬಿಂಬಿಸಲಾಗಿತ್ತು.

ಮುಂದುವರೆದು, ದೆಹಲಿ ಪೊಲೀಸರ ಸೈಬರ್ ವಿಭಾಗ ಈ ವಿಡಿಯೋವನ್ನು ಪರಿಶೀಲಿಸಿದಾಗ, ಇದು ನೈಜ ದೃಶ್ಯವಲ್ಲ ಬದಲಿಗೆ AI ಪರಿಕರಗಳನ್ನು ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋ ಎಂದು ದೃಢಪಟ್ಟಿದೆ. ಹಾಗಾಗಿ, ಹರಿಯಾಣದ ಪಲ್ವಾಲ್ ಮೂಲದ ಆರೋಪಿ ನದೀಮ್‌ನನ್ನು ತಕ್ಷಣವೇ ಬಂಧಿಸಲಾಯಿತು. ಏತನ್ಮಧ್ಯೆ, ದೆಹಲಿ ಪೊಲೀಸರ ತನಿಖೆಯ ವೇಳೆ ಆರೋಪಿ ನದೀಮ್, ದೆಹಲಿ ಪೊಲೀಸರ ಇಮೇಜ್‌ಗೆ ಧಕ್ಕೆ ತರುವುದು, ಪ್ರತಿಭಟನಾಕಾರರನ್ನು ಪೊಲೀಸರ ವಿರುದ್ಧ ಎತ್ತಿಕಟ್ಟುವುದು ಮತ್ತು ಸಮಾಜದಲ್ಲಿ ಶಾಂತಿ ಕದಡಿ ದಂಗೆಯಂತಹ ವಾತಾವರಣ ನಿರ್ಮಿಸುವುದು ತನ್ನ ಉದ್ದೇಶವಾಗಿತ್ತು ಎಂದು ಒಪ್ಪಿಕೊಂಡಿದ್ದಾನೆ.

Delhi ACP Molestation Case: Youth Arrested For Circulating Fake AI Video Of Police Officer
ದೆಹಲಿ ಪೊಲೀಸರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಪ್ರತಿಭಟನೆ ಮುಂದುವರಿಕೆ, ಹಲವರು ವಶಕ್ಕೆ! Video

ಮತ್ತೊಂದೆಡೆ, ಈ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಎಸಿಪಿ ವಿವೇಕ್ ಭಗತ್ ಅವರಿಗೆ ಇತ್ತೀಚೆಗೆ ನೀಡಲಾಗಿದ್ದ ಅಡಿಷನಲ್ ಡಿಸಿಪಿ ಹುದ್ದೆಯ ಪ್ರಮೋಷನ್ ಆದೇಶವನ್ನು ದೆಹಲಿ ಸರ್ಕಾರ ಸದ್ಯಕ್ಕೆ ತಡೆಹಿಡಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com