'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

ತಮ್ಮ ಬಾಂಗ್ಲಾದೇಶಿ ಪತ್ನಿ ಹಾಗೂ ಅಪ್ರಾಪ್ತ ಪುತ್ರನಿಗೆ ಭಾರತ ಪ್ರವೇಶಕ್ಕೆ ಅವಕಾಶ ನೀಡುವಂತೆ ಕೋರಿ ಭಾರತೀಯ ಪ್ರಜೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ರಾವ್‌ ವಜಾಗೊಳಿಸಿದ್ದಾರೆ.
Entry of Bangladeshi wife of Indian national into India rightly refused by immigration: High Court
ಭಾರತೀಯ ವಿವಾಹ (ಸಾಂದರ್ಭಿಕ ಚಿತ್ರ)
Updated on: 

ಕೋಲ್ಕತ್ತಾ: ವಂಚನೆಯ ಮೂಲಕ ಭಾರತೀಯ ದಾಖಲೆಗಳನ್ನು ಪಡೆದಿರುವ ಆರೋಪ ಎದುರಿಸುತ್ತಿರುವ ಭಾರತೀಯ ಪ್ರಜೆಯ ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಿಸಿರುವ ವಲಸೆ ಅಧಿಕಾರಿಗಳ ಕ್ರಮ ಸರಿಯಾಗಿದೆ ಎಂದು ಕೋಲ್ಕತ್ತಾ ಹೈಕೋರ್ಟ್‌ ಬುಧವಾರ ಹೇಳಿದೆ.

ತಮ್ಮ ಬಾಂಗ್ಲಾದೇಶಿ ಪತ್ನಿ ಹಾಗೂ ಅಪ್ರಾಪ್ತ ಪುತ್ರನಿಗೆ ಭಾರತ ಪ್ರವೇಶಕ್ಕೆ ಅವಕಾಶ ನೀಡುವಂತೆ ಕೋರಿ ಭಾರತೀಯ ಪ್ರಜೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ರಾವ್‌ ವಜಾಗೊಳಿಸಿದ್ದಾರೆ.

ಅರ್ಜಿದಾರರು ಸೆಪ್ಟೆಂಬರ್‌ 5ರಂದು ತಮ್ಮ ಪತ್ನಿ ಹಾಗೂ ಪುತ್ರನಿಗೆ ಭಾರತ ಪ್ರವೇಶಿಸಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಆದರೆ, ವಲಸೆ ಅಧಿಕಾರಿಗಳು ಪತ್ನಿಯ ಭಾರತ ಪ್ರವೇಶವನ್ನು ನಿರಾಕರಿಸಿರುವುದು ಸರಿಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Entry of Bangladeshi wife of Indian national into India rightly refused by immigration: High Court
ಬೆಂಗಳೂರಿನಲ್ಲಿ 1,909 ಅಕ್ರಮ ವಲಸಿಗರು ವಶಕ್ಕೆ; 15 ಮಂದಿ ಬಾಂಗ್ಲಾದೇಶದ ಪ್ರಜೆಗಳು ದೃಢ; Video

ವಿವಾಹದ ಬಳಿಕ ಎಕ್ಸ್‌-1 ವೀಸಾದಲ್ಲಿ ಭಾರತಕ್ಕೆ ಭೇಟಿ

ಅರ್ಜಿದಾರರ ಪತ್ನಿ ಬಾಂಗ್ಲಾದೇಶದ ಪ್ರಜೆಯಾಗಿದ್ದು, ವಿವಾಹದ ಬಳಿಕ ಭಾರತೀಯ ಪ್ರಜೆಯ ಪತ್ನಿಯಾಗಿ ಬಹು-ಪ್ರವೇಶದ ಎಕ್ಸ್‌-1 ವೀಸಾ ಮೂಲಕ ಭಾರತಕ್ಕೆ ಬರುತ್ತಿದ್ದರು. ಅವರಿಗೆ ಕೊನೆಯದಾಗಿ 2025ರ ಸೆಪ್ಟೆಂಬರ್‌ 25ರಂದು ವೀಸಾ ನೀಡಲಾಗಿತ್ತು.

ಅದು 2026ರ ಸೆಪ್ಟೆಂಬರ್‌ 24ರವರೆಗೆ ಮಾನ್ಯವಾಗಿತ್ತು. 2026ರ ಏಪ್ರಿಲ್‌ನಲ್ಲಿ ಅವರು ಬಾಂಗ್ಲಾದೇಶಕ್ಕೆ ತೆರಳಿದ್ದರು. ಬಳಿಕ ಭಾರತಕ್ಕೆ ವಾಪಸಾಗುವ ವೇಳೆ ಆಗಸ್ಟ್‌ 23ರಂದು ವಲಸೆ ಸಂಬಂಧಿತ ಕಾರಣಗಳಿಂದ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು.

‘ಭಾರತ-ಬಾಂಗ್ಲಾದೇಶದಲ್ಲಿ ಆಗಾಗ್ಗೆ ವಾಸ’

ಅರ್ಜಿದಾರರ ಪರ ವಕೀಲರು, ಮಹಿಳೆ ಕೆಲವೊಮ್ಮೆ ಭಾರತದಲ್ಲೂ, ಕೆಲವೊಮ್ಮೆ ಬಾಂಗ್ಲಾದೇಶದಲ್ಲೂ ವಾಸಿಸುತ್ತಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಯಾವುದೇ ಕಾರಣ ನೀಡದೆ ವಲಸೆ ಅಧಿಕಾರಿಗಳು ತಮ್ಮ ಪತ್ನಿಗೆ ಭಾರತ ಪ್ರವೇಶ ನಿರಾಕರಿಸಿದ್ದಾರೆ ಎಂದು ಅವರು ವಾದಿಸಿದರು. ಪತ್ನಿಯನ್ನು ಭಾರತಕ್ಕೆ ಕರೆತರಲು ಸಲ್ಲಿಸಿದ್ದ ಮನವಿಯನ್ನು ಅಧಿಕಾರಿಗಳು ಪರಿಗಣಿಸಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು.

Entry of Bangladeshi wife of Indian national into India rightly refused by immigration: High Court
"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಭಾರತೀಯ ದಾಖಲೆಗಳನ್ನು ವಂಚನೆಯಿಂದ ಪಡೆದ ಆರೋಪ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಿಯರ ನೋಂದಣಿ ಕಚೇರಿ (FRO) ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಅದರ ಪ್ರಕಾರ, ಅರ್ಜಿದಾರ ಪ್ರದೀಪ್‌ ಬೋಸ್‌ ಅವರ ಪತ್ನಿ ಶ್ರಾಬಂತಿ ಚೌಧರಿ ಬಾಂಗ್ಲಾದೇಶದ ಪ್ರಜೆಯಾಗಿದ್ದು, 2027ರ ಸೆಪ್ಟೆಂಬರ್‌ 7ರವರೆಗೆ ಮಾನ್ಯವಾಗಿರುವ ಬಾಂಗ್ಲಾದೇಶಿ ಪಾಸ್‌ಪೋರ್ಟ್‌ ಹೊಂದಿದ್ದಾರೆ.

ಆದರೆ, ಬಾಂಗ್ಲಾದೇಶದ ಪ್ರಜೆಯಾಗಿದ್ದರೂ ಅವರು ಮತದಾರರ ಗುರುತಿನ ಚೀಟಿ ಮತ್ತು PAN ಕಾರ್ಡ್ ಸೇರಿದಂತೆ ಭಾರತೀಯ ದಾಖಲೆಗಳನ್ನು ವಂಚನೆಯ ಮೂಲಕ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಪ್ರವೇಶಕ್ಕೆ ಅನುಮತಿ ನೀಡಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

2025ರ ವಲಸೆ ಕಾಯ್ದೆ ಅನ್ವಯ ನಿರ್ಬಂಧ ಸಾಧ್ಯ

ಭಾರತಕ್ಕೆ ವ್ಯಕ್ತಿಯೊಬ್ಬರ ಪ್ರವೇಶವನ್ನು Immigration and Foreigners Act, 2025ರ ನಿಬಂಧನೆಗಳ ಅಡಿಯಲ್ಲಿ ನಿರ್ಬಂಧಿಸಬಹುದಾಗಿದೆ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಅಧಿಕಾರಿಗಳ ಕ್ರಮವನ್ನು ಪರಿಶೀಲಿಸಿದ ನ್ಯಾಯಾಲಯ, ಬಾಂಗ್ಲಾದೇಶಿ ಮಹಿಳೆಯ ಭಾರತ ಪ್ರವೇಶವನ್ನು ನಿರಾಕರಿಸಿರುವುದು ಸರಿಯಾದ ಕ್ರಮ ಎಂದು ಹೇಳಿ, ಆಕೆಗೆ ಭಾರತ ಪ್ರವೇಶಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com