

ನವದೆಹಲಿ: ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಸ್ವಯಂಸೇವಕರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಿರಿ. ಅಲ್ಲದೆ, ಸಿಜೆಪಿಯ ಇಬ್ಬರನ್ನು ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ, ದ್ವೇಷ ಅಥವಾ ಪ್ರಚೋದನೆಗೆ ಒಳಗಾಗದಂತೆ 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಮಂಗಳವಾರ ಮನವಿ ಮಾಡಿದ್ದಾರೆ.
'X'ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ, ಬೆಂಬಲಿಗರು ಪರಸ್ಪರ ಬೆಂಬಲವಾಗಿ ನಿಂತಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ ದಿಪ್ಕೆ, ತಮ್ಮ ಚಳುವಳಿಯು ಶಾಂತಿ, ಪ್ರೀತಿ ಮತ್ತು ಸಹಾನುಭೂತಿಯ ಹಾದಿಯಲ್ಲಿಯೇ ಮುಂದುವರಿಯಲಿದೆ. CJP ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ಅವರನ್ನು ವಶಕ್ಕೆ ಪಡೆದಿರುವ ಸಂದರ್ಭದಲ್ಲೇ ಅವರ ಈ ಸಂದೇಶ ಹೊರಬಿದ್ದಿದೆ; ದಿಪ್ಕೆ ಅವರು ಇವರಿಬ್ಬರನ್ನು ತಮ್ಮ 'ಸಹೋದರರು' ಎಂದು ಕರೆದಿದ್ದಾರೆ.
'ಕಳೆದ ಕೆಲವು ದಿನಗಳು ನಮಗೆ ಸುಲಭವಾಗಿರಲಿಲ್ಲ' ಎಂದ ಅವರು, ಜಂತರ್ ಮಂತರ್‌ನಲ್ಲಿ ನಡೆದ ಚಳುವಳಿಯ ಸಂದರ್ಭದಲ್ಲಿ, ಹೋರಾಟಗಾರರು ಪೊಲೀಸ್ ಕ್ರಮ ಮತ್ತು ಮೊಕದ್ದಮೆಗಳನ್ನು ಎದುರಿಸಬೇಕಾಗಬಹುದು ಎಂದು ತಾವು ನೀಡಿದ್ದ ಎಚ್ಚರಿಕೆಯನ್ನು ಅವರು ಈ ವೇಳೆ ನೆನಪಿಸಿಕೊಂಡರು.
ಸಿಜೆಪಿ ನಾಯಕರಾದ ಸೌರಭ್ ದಾಸ್ ಮತ್ತು ಅಶುತೋಷ್ ರಂಕಾ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 21ರವರೆಗೆ ವಿಸ್ತರಿಸುವ ಕುರಿತು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರ್ಧಾರ ಕೈಗೊಂಡಿದೆ. 5 ದಿನಗಳ ನ್ಯಾಯಾಂಗ ಬಂಧನದ ನಂತರ, ಸೋಮವಾರ ಉಭಯ ನಾಯಕರನ್ನು ಎಸ್‌ಇಎಂ (SEM) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಹಲವಾರು ಸ್ವಯಂಸೇವಕರ ಮೇಲೆ ಹಲ್ಲೆ ನಡೆಸಲಾಗಿದೆ, ಅವರನ್ನು ವಶಕ್ಕೆ ಪಡೆಯಲಾಗಿದೆ ಮತ್ತು ವಶದಲ್ಲಿದ್ದಾಗ ಅವರಿಗೆ ತೊಂದರೆಗಳನ್ನು ನೀಡಲಾಗಿದೆ ಎಂಬ ಆರೋಪಗಳನ್ನು ಒಪ್ಪಿಕೊಂಡರು. ಆದರೆ, ಈ ಘಟನೆಗಳ ಪರಿಣಾಮಗಳು ಅವರ ಕುಟುಂಬಗಳ ಮೇಲೂ ಆಗಿವೆ; ವಾಸ್ತವವಾಗಿ, ಈ ಕುಟುಂಬಗಳು ಹೋರಾಟದ ಭಾಗವಾಗಲು ಬಯಸಿರಲಿಲ್ಲ ಎಂದರು.
'ನಿಮ್ಮ ಕುಟುಂಬಗಳೊಂದಿಗೆ ಸಮಯ ಕಳೆಯಿರಿ. ನಿಮ್ಮ ಕುಟುಂಬಗಳ ಜೊತೆಗಿರಿ, ನಿಮ್ಮ ಪ್ರೀತಿಪಾತ್ರರ ಜೊತೆಗಿರಿ'. ಕಳೆದ ಕೆಲವು ದಿನಗಳಲ್ಲಿ ನಡೆದ ಘಟನೆಗಳಿಂದಾಗಿ ಅವರ ಕುಟುಂಬಗಳು ಆತಂಕಗೊಂಡಿರಬಹುದು ಎಂದೂ ಅವರು ಹೇಳಿದರು.
ಈ ಚಳುವಳಿಯು ಅಹಿಂಸೆಯ ಬದ್ಧತೆಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ಹೋರಾಟಗಾರರು ಎದುರಿಸುವ ಕಷ್ಟಗಳು ಅವರನ್ನು ದ್ವೇಷದ ಕಡೆಗೆ ತಳ್ಳಬಾರದು. 'ನಾವು ದ್ವೇಷದ ವಿರುದ್ಧ ಹೋರಾಡುತ್ತಿದ್ದೇವೆ; ತಮ್ಮ ಮನಸ್ಸಿನಲ್ಲಿ ದ್ವೇಷವನ್ನೇ ತುಂಬಿಕೊಂಡಿರುವ ಜನರ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಆದರೆ, ಆ ದ್ವೇಷವು ನಮ್ಮೊಳಗೆ ಪ್ರವೇಶಿಸದಂತೆ ನಾವು ಎಚ್ಚರವಹಿಸಬೇಕು' ಎಂದು ಅವರು ಹೇಳಿದರು.
'ಕಾರ್ಯಕರ್ತರನ್ನು ಅವರು ಆರಿಸಿಕೊಂಡ ಶಾಂತಿ ಮತ್ತು ಕರುಣೆಯ ಮಾರ್ಗವನ್ನು ತ್ಯಜಿಸುವಂತೆ ಪ್ರಚೋದಿಸಲಾಗುತ್ತಿದೆ. 'ನಾವು ಯಾವುದರ ವಿರುದ್ಧ ಹೋರಾಡುತ್ತಿದ್ದೇವೆಯೋ ಅದೇ ರೀತಿ ನಾವು ಆಗುವ ಅಗತ್ಯ ನಮಗಿಲ್ಲ. ಈ ಚಳುವಳಿಯು ದ್ವೇಷಕ್ಕೆ ಪ್ರತಿಯಾಗಿ ದ್ವೇಷದಿಂದಲೇ ಪ್ರತಿಕ್ರಿಯಿಸುವುದಾಗಿಲ್ಲ. ಪ್ರೀತಿ, ದಯೆ ಮತ್ತು ಕರುಣೆಗಳೇ ಈ ಚಳುವಳಿಯ ಅತಿ ದೊಡ್ಡ ಶಕ್ತಿಗಳು. ಭಾವನೆಗಳನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಬಾರದು. ನಮ್ಮ ಭಾವನೆಗಳು ನಮ್ಮ ದೌರ್ಬಲ್ಯವಲ್ಲ. ಅವು ನಮ್ಮ ಶಕ್ತಿ' ಎಂದು ಹೇಳಿದರು.
'ಮಹಾತ್ಮ ಗಾಂಧಿ ಮತ್ತು ಬಿಆರ್ ಅಂಬೇಡ್ಕರ್ ಅವರು ನಮ್ಮ ಚಳುವಳಿಗೆ ಮಾರ್ದರ್ಶಕರಾಗಿರಬೇಕು. ತಮ್ಮ ಬಂಧನದ ಕುರಿತು ಕಾರ್ಯಕರ್ತರು ತೋರಿದ ಪ್ರತಿಕ್ರಿಯೆಯು, ಶಾಂತಿಯುತ ಪ್ರತಿರೋಧದ ಕಡೆಗಿನ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸೌರವ್ ಮತ್ತು ಅಶುತೋಷ್ ಜೈಲಿನಿಂದ ಹೊರಬರುವಾಗ, 'ಇಂಕ್ವಿಲಾಬ್ ಜಿಂದಾಬಾದ್' ಎಂಬ ಘೋಷಣೆಯೊಂದಿಗೆ ಹೊರಬರುತ್ತಾರೆ' ಎಂದು ಅವರು ಹೇಳಿದರು.
'ಇದಕ್ಕೆ ನಾನು ಇನ್ನೊಂದು ವಿಷಯವನ್ನು ಸೇರಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ಫ್ರಾನ್ಸ್‌ನಲ್ಲಿ ಏನೆಲ್ಲ ನಡೆಯುತ್ತಿದೆಯೋ, ಅದನ್ನು ಮಾಡುತ್ತಿರುವವರು ಸ್ವಲ್ಪ ನಾಚಿಕೆ ಪಟ್ಟುಕೊಳ್ಳಲಿ. ಭಾರತದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ. ಭಾರತದಲ್ಲಿ, ಸೌರವ್ ದಾಸ್ ಮತ್ತು ಅಶುತೋಷ್ ಅವರು ನಗುತ್ತಲೇ ಜೈಲಿಗೆ ಹೋದರು. ಫ್ರಾನ್ಸ್‌ನಲ್ಲಿ ನಡೆಯುತ್ತಿರುವಂತಹ ಯಾವುದೇ ಕೃತ್ಯಗಳನ್ನು ಅವರು ಮಾಡಲಿಲ್ಲ. ತಮ್ಮನ್ನು ಅನ್ಯಾಯದಿಂದ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ತಿಳಿದಿದ್ದರೂ, ಅವರು ಶಾಂತಿಯುತ ಮಾರ್ಗವನ್ನೇ ಆರಿಸಿಕೊಂಡರು' ಎಂದು ಒತ್ತಿ ಹೇಳಿದರು.
ಹಬ್ಬಗಳ ಸಂದರ್ಭದಲ್ಲಿ ದಾಸ್ ಮತ್ತು ಅಶುತೋಷ್ ಅವರನ್ನು ನೆನಪಿಸಿಕೊಳ್ಳುವಂತೆ ಅವರು ಬೆಂಬಲಿಗರಲ್ಲಿ ಮನವಿ ಮಾಡಿದರು. ಜೈಲಿನಲ್ಲಿರುವುದರಿಂದ ಈ ಇಬ್ಬರೂ ತಮ್ಮ ಕುಟುಂಬದವರೊಂದಿಗೆ ಹಬ್ಬವನ್ನು ಆಚರಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
'ಸೌರವ್ ಮತ್ತು ಅಶು ಅವರ ಕಥೆಗಳು ಸುದ್ದಿಯಲ್ಲಿವೆ ಎಂಬುದು ನನಗೆ ಗೊತ್ತು. ನನ್ನ ಕಥೆಯೂ ಸುದ್ದಿಯಲ್ಲಿದೆ. ಆದರೆ, ಸುದ್ದಿಯಲ್ಲಿ ಕಾಣಿಸಿಕೊಳ್ಳದಿದ್ದರೂ, ಸೌರವ್ ಮತ್ತು ಅಶು ಅವರಷ್ಟೇ ಕಷ್ಟಪಟ್ಟಿರುವ ಇನ್ನೂ ಅನೇಕ ಸ್ವಯಂಸೇವಕರಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು' ಎಂದು ಅವರು ಹೇಳಿದರು.