ಉತ್ತರಾಖಂಡ ಮುಸ್ಲಿಮರಿಗೆ ಬಿಗ್ ಶಾಕ್; ಮದರಸಾಗಳಲ್ಲಿ ಶುಕ್ರವಾರದ ರಜೆ ರದ್ದುಗೊಳಿಸಿದ BJP ಸರ್ಕಾರ!

ಇದೀಗ, ಧಾಮಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದು, ಮದರಸಾಗಳಲ್ಲಿದ್ದ ಶುಕ್ರವಾರದ ರಜೆಯನ್ನು ರದ್ದುಗೊಳಿಸಿ, ಭಾನುವಾರದಂದು ರಜೆ ನಿಗದಿಪಡಿಸಿದೆ.
Pushkar Singh Dhami
ಉತ್ತರಾಖಂಡ ಸಿಎಂ ಫುಷ್ಕರ್ ಸಿಂಗ್ ಧಾಮಿ
Updated on: 

ಡೆಹ್ರಾಡೂನ್: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಬಿಜೆಪಿ ಸರ್ಕಾರ ಬುಧವಾರ ಮುಸ್ಲಿಮರಿಗೆ ಬಿಗ್ ಶಾಕ್ ನೀಡಿದ್ದು, ಮದರಸಾಗಳಲ್ಲಿದ್ದ ಶುಕ್ರವಾರದ ರಜೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಉತ್ತರಾಖಂಡದಲ್ಲಿ ಇನ್ನುಮುಂದೆ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಭಾನುವಾರದಂದು ರಜೆ ಘೋಷಿಸಲಾಗಿದೆ. ಈ ವರ್ಷದ ಜುಲೈ 1 ರಂದು ಉತ್ತರಾಖಂಡದಲ್ಲಿ ಮದರಸಾ ಶಿಕ್ಷಣ ವ್ಯವಸ್ಥೆಯನ್ನು ರದ್ದುಗೊಳಿಸಲಾಯಿತು; ಇಂತಹ ಕ್ರಮ ಕೈಗೊಂಡ ದೇಶದ ಮೊದಲ ರಾಜ್ಯ ಇದಾಗಿದೆ.

ಇದೀಗ, ಧಾಮಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದು, ಮದರಸಾಗಳಲ್ಲಿದ್ದ ಶುಕ್ರವಾರದ ರಜೆಯನ್ನು ರದ್ದುಗೊಳಿಸಿ, ಭಾನುವಾರದಂದು ರಜೆ ನಿಗದಿಪಡಿಸಿದೆ. ಈ ಕ್ರಮವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ಮುಸ್ಲಿಂ ಸಮುದಾಯದೊಳಗೆ ಈ ಬಗ್ಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ.

Pushkar Singh Dhami
ಸಮವಸ್ತ್ರ ಧರಿಸಿ CJP ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶೇರ್ ಸಿಂಗ್ ನನ್ನು ವಜಾಗೊಳಿಸಿದ ಉತ್ತರಾಖಂಡ ಪೊಲೀಸ್ ಇಲಾಖೆ!

ಈ ಹಿಂದೆ ಜುಮಾ ಪ್ರಾರ್ಥನೆಯ ಜೊತೆಗೆ ಮದರಸಾಗಳಿಗೆ ಶುಕ್ರವಾರ ವಾರದ ರಜೆಯನ್ನು ನಿಗದಿಪಡಿಸಲಾಗಿತ್ತು. ಇದೀಗ ಅದನ್ನು ರದ್ದುಗೊಳಿಸಲಾಗಿದ್ದು, ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ನಮ್ಮ ಸರ್ಕಾರ ನೀತಿ, ನಿಯಮ ಮತ್ತು ಕಾನೂನುಗಳನ್ನು ರೂಪಿಸಿದೆ. ಈ ನಿಯಮಗಳನ್ನು ಪಾಲಿಸಿದ ಸಂಸ್ಥೆಗಳಿಗೆ ಇಲ್ಲಿ ಕಾರ್ಯನಿರ್ವಹಿಸು ಅನುಮತಿ ನೀಡಲಾಗುವುದಿಲ್ಲ ಎಂದು ಪುಷ್ಕರ್ ಸಿಂಗ್ ಧಾಮಿ ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನು ಶುಕ್ರವಾರದ ರಜೆಯನ್ನು ಬದಲಾಯಿಸುವ ಬಗ್ಗೆ ಮಾತನಾಡಿದ ಪುಷ್ಕರ್ ಸಿಂಗ್ ಧಾಮಿ, ಮದರಸಾಗಳು ಈಗ ಶಿಕ್ಷಣ ಇಲಾಖೆಯಿಂದ ಗುರುತಿಸಲ್ಪಟ್ಟ ಶಾಲೆಗಳಾಗಿರುವುದರಿಂದ, ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಅನ್ವಯಿಸುವ ನಿಯಮಗಳೇ ಇವುಗಳಿಗೂ ಅನ್ವಯಿಸುತ್ತವೆ ಎಂದಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ

ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ(Uniform Civil Code) ಜಾರಿಯಲ್ಲಿದೆ ಎಂದು ಮುಖ್ಯಮಂತ್ರಿ ಧಾಮಿ ಹೇಳಿದ್ದಾರೆ.

ಪೊಲೀಸ್ ಲೈನ್ಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಾಜ್ಯದಲ್ಲಿ ಈಗಾಗಲೇ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ ಎಂದು ತಿಳಿಸಿದರು.

ಎಲ್ಲರಿಗೂ ಒಂದೇ ರೀತಿಯ ನಿಯಮಗಳು ಮತ್ತು ಕಾನೂನುಗಳು ಇರಬೇಕು ಎಂದು ಪ್ರತಿಪಾದಿಸಿದ ಅವರು, ಈ ತತ್ವವು ಶಿಕ್ಷಣ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಇನ್ನು ಮುಂದೆ ರಾಜ್ಯದ ಎಲ್ಲಾ ಮದರಸಾಗಳಲ್ಲಿ ಶುಕ್ರವಾರದ ಬದಲಿಗೆ ಭಾನುವಾರದಂದು ರಜೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಧಾಮಿ ಘೋಷಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com