ಯಾರಿಂದಲೂ ದೇಶಭಕ್ತಿಯ ಪಾಠ ಬೇಕಿಲ್ಲ: ನಮ್ಮ ಅಜೆಂಡಾವೇ ಬೇರೆ, CJPಗೆ ಎಂದಿಗೂ ಬೆಂಬಲ ನೀಡುವುದಿಲ್ಲ; ಅಣ್ಣಾಮಲೈ ಸ್ಪಷ್ಟನೆ

ನಾವು ಎಂದಿಗೂ ಕಾಕ್‌ರೋಚ್ ಜನತಾ ಪಾರ್ಟಿಯನ್ನು ಬೆಂಬಲಿಸುವುದಿಲ್ಲ. ಅವರ ಅಜೆಂಡಾವೇ ಬೇರೆ, ನಮ್ಮ ಅಜೆಂಡಾವೇ ಬೇರೆ ಎಂದು ಅಣ್ಣಾಮಲೈ ಹೇಳಿದ್ದಾರೆ.
Annamalai
ಅಣ್ಣಾಮಲೈ
Updated on: 

ಚೆನ್ನೈ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗಳ ವಿರುದ್ಧ ಕೇಂದ್ರ ಸರಕಾರ ಕೈಗೊಂಡ ಕ್ರಮವನ್ನು ಟೀಕಿಸಿ ವಿವಾದಕ್ಕೆ ಗುರಿಯಾಗಿದ್ದ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ, ತಮ್ಮ ಹೇಳಿಕೆಯನ್ನು ಸಿಜೆಪಿಗೆ ನೀಡಿದ ಬೆಂಬಲವೆಂದು ಅರ್ಥೈಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ಅಭಿಜೀತ್ ದಿಪ್ಕೆ ನೇತೃತ್ವದ ಸಿಜೆಪಿ ವಿರುದ್ಧ ಕೇಂದ್ರ ಸರಕಾರ ಕೈಗೊಂಡ ಕ್ರಮವನ್ನು ಅಣ್ಣಾಮಲೈ ಟೀಕಿಸಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಇದರ ಬೆನ್ನಲ್ಲೇ ಗುರುವಾರ ತಮ್ಮ 'ವಿ ದಿ ಲೀಡರ್ಸ್' ಆಂದೋಲನದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಕ್ರಮವನ್ನು ಟೀಕಿಸುವುದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು. ಅಲ್ಲದೆ, ಸಿಜೆಪಿ ಪ್ರತಿಭಟನೆಯ ಹಿಂದಿರುವ ಉದ್ದೇಶವನ್ನೂ ಸಮರ್ಥಿಸಿಕೊಂಡರು.

ನಾವು ಎಂದಿಗೂ ಕಾಕ್‌ರೋಚ್ ಜನತಾ ಪಾರ್ಟಿಯನ್ನು ಬೆಂಬಲಿಸುವುದಿಲ್ಲ. ಅವರ ಅಜೆಂಡಾವೇ ಬೇರೆ, ನಮ್ಮ ಅಜೆಂಡಾವೇ ಬೇರೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಈ ವರ್ಷದ ಜೂನ್‌ನಲ್ಲಿ ಬಿಜೆಪಿಯಿಂದ ಹೊರಬಂದು ತಮ್ಮದೇ ರಾಜಕೀಯ ಚಟುವಟಿಕೆ ಆರಂಭಿಸಿರುವ ಅಣ್ಣಾಮಲೈ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ಹೋರಾಟ ನಡೆಸುವ ಹಕ್ಕಿದೆ ಎಂದು ಹೇಳಿದ್ದಾರೆ

Annamalai
'ಪ್ರಶ್ನಿಸಿದರೆ, ನೀವೊಬ್ಬ ವಿದೇಶಿ ಏಜೆಂಟ್': ಬಿಜೆಪಿ ನಿಜವಾಗಿಯೂ CJPಯನ್ನು ವಿರೋಧಿಸುತ್ತಿದೆಯೇ?; ಸ್ಪಷ್ಟನೆ ಕೋರಿದ ಅಣ್ಣಾಮಲೈ

CJP ಪ್ರತಿಭಟನಾಕಾರರು ಯಾವುದೇ ತಪ್ಪು ಮಾಡಿದ್ದರೆ ಕಾನೂನು ಮತ್ತು ನಿಗದಿತ ಪ್ರಕ್ರಿಯೆಯ ಪ್ರಕಾರ ಕ್ರಮ ಕೈಗೊಳ್ಳಬೇಕು. ಆದರೆ ಪ್ರತೀಕಾರದ ಮನೋಭಾವದಿಂದ ಬಂಧನಗಳನ್ನು ನಡೆಸುವುದು ಸರಿಯಲ್ಲ ಎಂಬುದು ಅವರ ವಾದವಾಗಿದೆ.

ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 10ರಂದು ಸಿಜೆಪಿ ಕಾರ್ಯಕರ್ತರು ನಡೆಸಿದ್ದ ಪ್ರತಿಭಟನೆಯ ವಿರುದ್ಧ ಪೊಲೀಸರು ಕೈಗೊಂಡ ಕ್ರಮವನ್ನು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತೀವ್ರವಾಗಿ ಖಂಡಿಸಿದ್ದರು. ಅವರ ಈ ಹೇಳಿಕೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಗುರುವಾರ ಈ ವಿಚಾರವಾಗಿ ಬಿಜೆಪಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದ ಅಣ್ಣಾಮಲೈ, 'ನನಗೆ ದೇಶಭಕ್ತಿಯ ಬಗ್ಗೆ ಯಾರೂ ಪಾಠ ಮಾಡಬೇಕಾದ ಅಗತ್ಯವಿಲ್ಲ' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com