100 ಅಡಿ ಆಳದ ಕಂದಕಕ್ಕೆ ಬಿದ್ದು ಮರಿ ಆನೆ ಸಾವು; ರಕ್ಷಿಸಲು ತಾಯಾನೆ ಪರದಾಟ, ಮನಮಿಡಿಯುವ Video ವೈರಲ್‌

ಕಾಡಿನಲ್ಲಿ ಸಂಚರಿಸುವ ವನ್ಯಜೀವಿಗಳು ಎದುರಿಸುವ ಅಪಾಯಗಳ ಬಗ್ಗೆಯೂ ಈ ಘಟನೆ ಗಮನ ಸೆಳೆದಿದೆ.
Baby Elephant Dies After Falling Into 100-Foot Gorge in Keralas Wayanad
ಕಂದಕಕ್ಕೆ ಬಿದ್ದ ಮರಿ ಆನೆ
Updated on: 

ವಯನಾಡು: ಕೇರಳದ ವಯನಾಡು ಜಿಲ್ಲೆಯಲ್ಲಿ ತಾಯಿಯೊಂದಿಗೆ ಸಂಚರಿಸುತ್ತಿದ್ದ ಮರಿ ಆನೆಯೊಂದು 100 ಅಡಿ ಆಳದ ಕಂದಕಕ್ಕೆ ಬಿದ್ದು ಮೃತಪಟ್ಟಿರುವ ಭೀಕರ ಘಟನೆ ನಡೆದಿದೆ.

ಕಂದಕಕ್ಕೆ ಉರುಳಿದ ಮರಿಯನ್ನು ರಕ್ಷಿಸಲು ತಾಯಾನೆ ಪ್ರಯತ್ನಿಸುತ್ತಿರುವ ಮನಕಲಕುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ತಾಯಿಯೊಂದಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಮರಿ ಆನೆ ಆಳವಾದ ಕಂದಕಕ್ಕೆ ಬಿದ್ದಿದೆ. ಕಂದಕದಲ್ಲಿ ಬಿದ್ದ ಮರಿಯನ್ನು ತಲುಪಿ ರಕ್ಷಿಸಲು ತಾಯಾನೆ ಹರಸಾಹಸ ಪಟ್ಟಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ.

Baby Elephant Dies After Falling Into 100-Foot Gorge in Keralas Wayanad
ಪತ್ನಿ ಆರೋಗ್ಯ ಗಂಭೀರ: ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ಹಾಸ್ಯ ನಟ, Video ವೈರಲ್!

ಮರಿ ಆನೆ ರಕ್ಷಣೆಗೆ ತಾಯಿ ಹರಸಾಹಸ

ಆದರೆ, ತಾಯಾನೆ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಕಂದಕಕ್ಕೆ ಬಿದ್ದ ಮರಿ ಆನೆ ಮೃತಪಟ್ಟಿದೆ. ತನ್ನ ಮರಿಯನ್ನು ಉಳಿಸಲು ತಾಯಾನೆ ನಡೆಸಿದ ಪ್ರಯತ್ನದ ದೃಶ್ಯಗಳು ಪ್ರಾಣಿ ಪ್ರಿಯರನ್ನು ಭಾವುಕರನ್ನಾಗಿಸಿವೆ.

ಕಾಡಿನಲ್ಲಿ ಸಂಚರಿಸುವ ವನ್ಯಜೀವಿಗಳು ಎದುರಿಸುವ ಅಪಾಯಗಳ ಬಗ್ಗೆಯೂ ಈ ಘಟನೆ ಗಮನ ಸೆಳೆದಿದೆ. ಘಟನೆಯ ನಿಖರ ಸ್ಥಳ ಹಾಗೂ ಮರಿ ಆನೆಯ ಮೃತದೇಹವನ್ನು ಹೊರತೆಗೆಯಲು ಕೈಗೊಂಡ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com