ಕೋಲ್ಕತ್ತಾ: ಗೆಳತಿಗೆ ಕಿಸ್ ಮಾಡಿದ್ದಕ್ಕೆ ಬಾಲಕ, ಆತನ ತಂದೆಗೆ ಬೆತ್ತಲೆ ಮೆರವಣಿಗೆ: ಗನ್‌ಪಾಯಿಂಟ್‌ನಲ್ಲಿ ಅಮಾನವೀಯ ಕೃತ್ಯ!

ಈ ಘಟನೆ ನಡೆದ ಮರುದಿನ, ಅಂದರೆ ಸೋಮವಾರದಂದು, ಪೊಲೀಸರು ಬಾಲಕಿಯ ಪೋಷಕರು ಮತ್ತು ಆಕೆಯ ತಾಯಿಯ ಕಡೆಯ ಮಾವನನ್ನು ಬಂಧಿಸಿದ್ದಾರೆ.
Boy, father paraded naked in Kolkata for kissing girlfriend
ಬಾಲಕ, ಆತನ ತಂದೆಯನ್ನು ಕೂಡಿಹಾಕಿದ ಮನೆ ಮುಂದೆ ಜನ
Updated on: 

ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ಪ್ರದೇಶವೊಂದರಲ್ಲಿ, 17 ವರ್ಷದ ಬಾಲಕನೊಬ್ಬ ತನ್ನ ಗೆಳತಿಗೆ ಕಿಸ್ ಮಾಡಿ ಸಿಕ್ಕಿಬಿದ್ದ ನಂತರ, ಆತನನ್ನು, ಆತನ ತಂದೆಯನ್ನು ಮತ್ತು ಸ್ನೇಹಿತನನ್ನು ಬೆತ್ತಲೆಗೊಳಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ಭಾನುವಾರ ನಡೆದಿದೆ.

ಈ ಘಟನೆ ನಡೆದ ಮರುದಿನ, ಅಂದರೆ ಸೋಮವಾರದಂದು, ಪೊಲೀಸರು ಬಾಲಕಿಯ ಪೋಷಕರು ಮತ್ತು ಆಕೆಯ ತಾಯಿಯ ಕಡೆಯ ಮಾವನನ್ನು ಬಂಧಿಸಿದ್ದಾರೆ.

ತನ್ನ ಮೇಲೆ ಹಲ್ಲೆ ಸಹ ನಡೆಸಲಾಗಿದೆ ಎಂದು ಬಾಲಕನ ತಂದೆ ಆರೋಪಿಸಿದ್ದಾರೆ. ಬಾಲಕಿಯ(13 ವರ್ಷ) ಮಾವ ತನಗೆ ಬಂದೂಕೊಂದನ್ನು ನೀಡಿ, "ಒಂದೋ ನಿನ್ನ ಮಗನಿಗೆ ಗುಂಡಿಕ್ಕಿ ಹತ್ಯೆ ಮಾಡು, ಇಲ್ಲದಿದ್ದರೆ ಅವನೊಂದಿಗೆ ಬೆತ್ತಲೆಯಾಗಿ ನಡೆದುಕೊಂಡು ಹೋಗು" ಎಂದು ಗನ್ ಹಿಡಿದು ಬೆದರಿಕೆ ಹಾಕಿದರು.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಭಾನುವಾರ ಸಂಜೆ ಸಾರ್ಸುನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಬೆತ್ತಲೆ ಮೆರವಣಿಗೆಯ ಘಟನೆಯು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Boy, father paraded naked in Kolkata for kissing girlfriend
ಬೆಂಗಳೂರಿನಲ್ಲಿ 5 ತಿಂಗಳು ಲಿವಿಂಗ್ ರಿಲೇಷನ್‌ಶಿಪ್‌, ಬಳಿಕ ಎಸ್ಕೇಪ್; ಬಾಯ್ ಫ್ರೆಂಡ್ ಮನೆ ಮುಂದೆ ಯುವತಿ ಧರಣಿ!

"ಬಾಲಕಿ ಮತ್ತು ಬಾಲಕ ಪರಸ್ಪರ ಚುಂಬಿಸುತ್ತಿರುವುದನ್ನು ಬಾಲಕಿಯ ಕುಟುಂಬದವರು ನೋಡಿರುವುದಾಗಿ ಹೇಳಿದ್ದು, ಇದರ ನಂತರ, ಬಾಲಕ ಮತ್ತು ಆತನ ಸ್ನೇಹಿತನನ್ನು ಕೋಣೆಯೊಂದರಲ್ಲಿ ಕೂಡಿಹಾಕಿ, ಬಾಲಕಿಯ ಪೋಷಕರು ಹಾಗೂ ಆಕೆಯ ಮಾವ ಹಲ್ಲೆ ನಡೆಸಿದ್ದಾರೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಳಿಕ ಬಾಲಕನಿಗೆ ತನ್ನ ತಂದೆಯನ್ನು ಆ ಸ್ಥಳಕ್ಕೆ ಕರೆಸುವಂತೆ ಒತ್ತಾಯಿಸಲಾಯಿತು ಎಂದೂ ಅವರು ಹೇಳಿದರು.

"ನಾನು ಅಲ್ಲಿಗೆ ತಲುಪಿದಾಗ, ಕನಿಷ್ಠ ಆರು ಮಂದಿ ನನ್ನ ಮೇಲೂ ಹಲ್ಲೆ ನಡೆಸಿದರು. ನಂತರ ಬಾಲಕಿಯ ಮಾವ ನನ್ನ ಕೈಗೆ ಬಂದೂಕೊಂದನ್ನು ಕೊಟ್ಟು, 'ನಿನಗೆ ಎರಡು ಆಯ್ಕೆಗಳಿವೆ: ಒಂದೋ ನಿನ್ನ ಮಗನಿಗೆ ಗುಂಡಿಕ್ಕಿ ಹತ್ಯೆ ಮಾಡು. ಇಲ್ಲದಿದ್ದರೆ ಅವನೊಂದಿಗೆ ಬೆತ್ತಲೆಯಾಗಿ ನಡೆದುಕೊಂಡು ಹೋಗು' ಎಂದು ಹೇಳಿದರು" ಎಂದು ಬಾಲಕನ ತಂದೆ ಸುದ್ದಿಗಾರರ ಮುಂದೆ ವಿವರಿಸಿದ್ದಾರೆ.

"ನಾನು, ನನ್ನ ಮಗ ಮತ್ತು ಅವನ ಸ್ನೇಹಿತ ಬೆತ್ತಲೆಯಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಜನ ವಿಡಿಯೋ ಮಾಡಿಕೊಂಡರು. ಇದು ನಮಗೆ ತೀವ್ರ ಅವಮಾನಕರ ಸಂಗತಿಯಾಗಿತ್ತು" ಎಂದು ಅವರು ಹೇಳಿದ್ದಾರೆ.

ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕಿಯ ಮಾವನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com