'ಇತರ ಹಿಂದೂಗಳು ಯಾಕೆ ಬೆದರಿಕೆ ಎದುರಿಸುತ್ತಿಲ್ಲ?': ಕಾಶ್ಮೀರಿ ಪಂಡಿತರ ವಿಚಾರದಲ್ಲಿ ವಿವಾದದ ಕಿಡಿ ಹೊತ್ತಿಸಿದ ಫಾರೂಕ್ ಅಬ್ದುಲ್ಲಾ! Video

ಬುಧವಾರ ಅನಂತನಾಗ್‌ನಲ್ಲಿ ಮಾತನಾಡಿದ ಅಬ್ದುಲ್ಲಾ, ಸಮುದಾಯವನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿದ್ದರೆ, ಜಮ್ಮು ಮತ್ತು ಕಾಶ್ಮೀರದ ಹೊರಗಿನ ಹಿರಿಯ ಹಿಂದೂ ಅಧಿಕಾರಿಗಳು ಇದೇ ರೀತಿಯ ಬೆದರಿಕೆಗಳನ್ನು ಯಾಕೆ ಎದುರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
Farooq Abdullah
ಫಾರೂಕ್ ಅಬ್ದುಲ್ಲಾ
Updated on

ಶ್ರೀನಗರ: ಕೇಂದ್ರಾಡಳಿತ ಪ್ರದೇಶವನ್ನು ರಾಜ್ಯ ಸ್ಥಾನಮಾನದಿಂದ ವಂಚಿಸಲು ಮತ್ತು ಕಾಶ್ಮೀರಿ ಪಂಡಿತ ನೌಕರರ ವಿರುದ್ಧ ಭಯವನ್ನು ಸೃಷ್ಟಿಸಲು ಜಮ್ಮು ಮತ್ತು ಕಾಶ್ಮೀರ ಆಡಳಿತ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

ಬುಧವಾರ ಅನಂತನಾಗ್‌ನಲ್ಲಿ ಮಾತನಾಡಿದ ಅಬ್ದುಲ್ಲಾ, ಸಮುದಾಯವನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿದ್ದರೆ, ಜಮ್ಮು ಮತ್ತು ಕಾಶ್ಮೀರದ ಹೊರಗಿನ ಹಿರಿಯ ಹಿಂದೂ ಅಧಿಕಾರಿಗಳು ಇದೇ ರೀತಿಯ ಬೆದರಿಕೆಗಳನ್ನು ಯಾಕೆ ಎದುರಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ಬೆದರಿಕೆ ಪುನರ್ ರಾಜ್ಯ ಸ್ಥಾನಮಾನ ಬೇಡಿಕೆಯ ವಿಳಂಬಗೊಳಿಸುವ ಪಿತೂರಿಯ ಭಾಗವಾಗಿದೆ ಎಂದು ಅವರು ಆರೋಪಿಸಿದರು. ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರ ತನ್ನ ಹಿಂದಿನ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.

ಪೊಲೀಸ್ ಮಹಾನಿರ್ದೇಶಕರು, ಉಪ ನಿರೀಕ್ಷಕರು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಉಪ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಇದೇ ರೀತಿಯ ಬೆದರಿಕೆ ಎದುರಿಸುತ್ತಿಲ್ಲವಾದರೂ, ಕಾಶ್ಮೀರಿ ಪಂಡಿತ ನೌಕರರಿಗೆ ಯಾಕೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.

ಇದು ಒಂದು ಪಿತೂರಿ. ಈ ಪ್ರದೇಶವನ್ನು ರಾಜ್ಯ ಸ್ಥಾನಮಾನದಿಂದ ವಂಚಿತವಾಗಿಡಲು ಮತ್ತು ಭಯದ ವಾತಾವರಣವನ್ನು ಸೃಷ್ಟಿಸಲು ಇದು ಒಂದು ಪಿತೂರಿಯಾಗಿದೆ ಎಂದು ಅಬ್ದುಲ್ಲಾ ಹೇಳಿದರು. ಮೂರು ಬಾರಿಯ ಮಾಜಿ ಮುಖ್ಯಮಂತ್ರಿಯಾಗಿದ್ದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮರಳಿದೆ ಮತ್ತು ಭಯೋತ್ಪಾದನೆ ನಿರ್ಮೂಲನೆಯಾಗಿದೆ ಎಂಬ ಕೇಂದ್ರದ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತಾ ವಿಷಯಗಳನ್ನು ನೋಡಿಕೊಳ್ಳುವ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಬೆದರಿಕೆಗಳು ಎಲ್ಲಿಂದ ಬರುತ್ತಿವೆ ಎಂಬುದನ್ನು ವಿವರಿಸಬೇಕು ಎಂದು ಅವರು ಹೇಳಿದರು.

ಇಂತಹ ಪರಿಸ್ಥಿತಿಯನ್ನು ಸೃಷ್ಟಿಸಲು ಆಡಳಿತವೇ ಕಾರಣ ಎಂದು ಅವರು ಆರೋಪಿಸಿದರು. ಶ್ರೀನಗರದಲ್ಲಿ ನಡೆದ ನ್ಯಾಷನಲ್ ಕಾನ್ಫರೆನ್ಸ್‌ನ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರ ಕಠಿಣ ಹಂತದ ಮೂಲಕ ಸಾಗುತ್ತಿದೆ ಎಂದು ಹೇಳಿದರು.

Farooq Abdullah
ಕೇಂದ್ರದಿಂದ ಮಹತ್ವದ ನಿರ್ಧಾರ: ಲಡಾಖ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಪೀಠ ಸ್ಥಾಪನೆ

ಕ್ಷೇತ್ರ ಮರುಹೊಂದಾಣಿಕೆ (delimitation), ಚುನಾವಣೆಗಳು ಮತ್ತು ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವ ಕುರಿತಾದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು. ಕಾರ್ಯವಿಧಾನದ ನಿಯಮಗಳಿಗೆ (Business Rules) ಕೆಲವೇ ದಿನಗಳಲ್ಲಿ ಅನುಮೋದನೆ ನೀಡಲಾಗುವುದು ಎಂದು ಅಮಿತ್ ಶಾ ಇತ್ತೀಚಿಗೆ ನಮ್ಮ ಪಕ್ಷದ ಸಂಸದರಿಗೆ ಭರವಸೆ ನೀಡಿದ್ದರು.ಆದರೆ ತಿಂಗಳುಗಳು ಕಳೆದರೂ ಈ ವಿಷಯ ಏಕೆ ಇನ್ನೂ ಬಗೆಹರಿದಿಲ್ಲ ಎಂದು ಅವರು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com