ಲಂಡನ್‌ನಲ್ಲಿ ಗುರುದ್ವಾರಕ್ಕೆ RSS ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ವಿರೋಧಿಸಿ ಭಾರತೀಯ ವಲಸಿಗರಿಂದ ಪ್ರತಿಭಟನೆ!

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಧ್ಯ ಲಂಡನ್‌ನಲ್ಲಿರುವ ಖಾಲ್ಸಾ ಜಾಥಾ ಬ್ರಿಟಿಷ್ ದ್ವೀಪದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿರುವುದು ಭಾರತೀಯ ವಲಸಿಗರ ಪ್ರತಿಭಟನೆಗೆ ಕಾರಣವಾಗಿದ್ದರೇ ಮತ್ತೊಂದೆಡೆ ಇದನ್ನು ಗುರುದ್ವಾರ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
Mohan Bhagwat
ಮೋಹನ್ ಭಾಗವತ್
Updated on

ಚಂಡೀಗಢ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಧ್ಯ ಲಂಡನ್‌ನಲ್ಲಿರುವ ಖಾಲ್ಸಾ ಜಾಥಾ ಬ್ರಿಟಿಷ್ ದ್ವೀಪದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿರುವುದು ಭಾರತೀಯ ವಲಸಿಗರ ಪ್ರತಿಭಟನೆಗೆ ಕಾರಣವಾಗಿದ್ದರೇ ಮತ್ತೊಂದೆಡೆ ಇದನ್ನು ಗುರುದ್ವಾರ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಅಮೆರಿಕ, ಕೆನಡಾ ಮತ್ತು ಯುಕೆ ಒಳಗೊಂಡ ವಿದೇಶ ಪ್ರವಾಸದ ಸಂದರ್ಭದಲ್ಲಿ ಭಾಗವತ್ ಗುರುದ್ವಾರಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ಆರ್‌ಎಸ್‌ಎಸ್ ಮುಖ್ಯಸ್ಥರ ಗುರುದ್ವಾರ ಭೇಟಿಗೆ ಭಾರತೀಯ ಕಾರ್ಮಿಕರ ಸಂಘ, ಗ್ರೇಟ್ ಬ್ರಿಟನ್ (ಐಡಬ್ಲ್ಯೂಎ) ಮತ್ತು ಇತರ ವಲಸಿಗರು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಬೆಂಬಲದೊಂದಿಗೆ ದಕ್ಷಿಣ ಏಷ್ಯಾದ ಸಾಲಿಡಾರಿಟಿ ಗ್ರೂಪ್ ಭಾನುವಾರ ಸಂಸತ್ ಚೌಕದಲ್ಲಿ ಪ್ರತಿಭಟನೆ ನಡೆಸಿತ್ತು. ಭೇಟಿಯನ್ನು ಸಾರ್ವಜನಿಕವಾಗಿ ಮುಂಚಿತವಾಗಿ ಘೋಷಿಸಲಾಗಿಲ್ಲ. ಇದು ಬ್ರಿಟಿಷ್ ಸಿಖ್ ಸಮುದಾಯದಿಂದ ತೀಕ್ಷ್ಣ ಪ್ರತಿಕ್ರಿಯೆಗಳಿಗೆ ಕಾರಣವಾಯಿತು.

Mohan Bhagwat
SC/ST ಪ್ರಕರಣ; ಹಿಂದುತ್ವವಾದಿ ಸ್ವತಂತ್ರ ಭಾರದ್ವಾಜ್‌ಗೆ ಹೈಕೋರ್ಟ್ ಶಾಕ್: 14 ದಿನ ನ್ಯಾಯಾಂಗ ಬಂಧನ!

ಸಂಗತ್ (ಧಾರ್ಮಿಕ ಅನುಯಾಯಿಗಳು) ಇಲ್ಲದ ಸಣ್ಣ, ಖಾಸಗಿ ಸಭೆಗೆ ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಸ್ವಾಗತಿಸುವುದರಿಂದ ಉಂಟಾದ ಹಾನಿಯನ್ನು ಯಾವುದೇ ಕ್ಷಮೆಯಾಚನೆ ಅಥವಾ ವಿವರಣೆಯಿಂದ ಸರಿಪಡಿಸಲು ಸಾಧ್ಯವಿಲ್ಲ ಎಂದು ಸಿಖ್ ಫೆಡರೇಶನ್ (ಯುಕೆ) ಹೇಳಿಕೆಯಲ್ಲಿ ತಿಳಿಸಿದೆ. ಗುರುದ್ವಾರಗಳು ಆಶ್ರಯ, ಘನತೆ ಮತ್ತು ಏಕತೆಯ ಸ್ಥಳಗಳಾಗಿರಬೇಕು, ರಾಜಕೀಯ ಮತ್ತು ಅಸಹಿಷ್ಣುತೆಗೆ ಸಂಬಂಧಿಸಿದ ಸಂಸ್ಥೆಗಳಿಗೆ ವೇದಿಕೆಗಳಲ್ಲ ಎಂದು ಒಕ್ಕೂಟ ಹೇಳಿದೆ.

ಸಿಖ್ ಫೆಡರೇಶನ್ (ಯುಕೆ) ಕಾರ್ಯತಂತ್ರ ಮಂಡಳಿಯ ಅಧ್ಯಕ್ಷ ಭಾಯಿ ಅಮ್ರಿಕ್ ಸಿಂಗ್, ಆರ್‌ಎಸ್‌ಎಸ್ ಸಾಮಾನ್ಯ ಧಾರ್ಮಿಕ ಅಥವಾ ಸಾಂಸ್ಕೃತಿಕ ಸಂಘಟನೆಯಲ್ಲ ಎಂದು ಹೇಳಿದರು. ಇದು ರಾಜಕೀಯ ಮತ್ತು ಸೈದ್ಧಾಂತಿಕ ಚಳುವಳಿಯಾಗಿದ್ದು, ಅದರ ಪ್ರಭಾವವು ಅಲ್ಪಸಂಖ್ಯಾತರ ವಿರುದ್ಧ ವಿಭಜನೆ, ಬೆದರಿಕೆ ಮತ್ತು ಹಗೆತನವನ್ನು ಪದೇ ಪದೇ ಉತ್ತೇಜಿಸಿದೆ ಎಂದು ಹೇಳಿದೆ. ಧಾರ್ಮಿಕ ಅನುಮಾಯಿಗಳ ಅನುಪಸ್ಥಿತಿಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಗುರುದ್ವಾರದಲ್ಲಿ ರಹಸ್ಯ ಆತಿಥ್ಯ ನೀಡಿರುವುದು ಯುಕೆಯಲ್ಲಿರುವ ಸಿಖ್ಖರಿಗೆ ಮತ್ತು ಭಾರತದ ದುರ್ಬಲ ಸಮುದಾಯಗಳಿಗೆ ತಪ್ಪು ಸಂದೇಶವನ್ನು ಕಳುಹಿಸುತ್ತದೆ ಎಂದು ಸಿಂಗ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com