ಮುಂದಿನ ವರ್ಷ ದೇಶದ ಮೊದಲ ಬುಲೆಟ್ ಟ್ರೈನಿನ ಪ್ರಾಯೋಗಿಕ ಸಂಚಾರ ಆರಂಭ; ಮುಂಬೈನಿಂದ ಅಹಮದಾಬಾದ್‌ಗೆ ಕೇವಲ 90 ನಿಮಿಷ!

ದೇಶದ ಮೊದಲ ಹೈಸ್ಪೀಡ್ ರೈಲು 2027ರ ಮೇ ಅಥವಾ ಜೂನ್‌ನಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ದೃಢಪಡಿಸಿದ್ದಾರೆ.
Railways displays image of India's first proposed bullet train
ಬುಲೆಟ್ ರೈಲಿನ 'ಫಸ್ಟ್ ಲುಕ್'
Updated on

ವಡೋದರಾ: ಭಾರತದ ಬಹುನಿರೀಕ್ಷಿತ ಬುಲೆಟ್ ರೈಲು ಯೋಜನೆಯು ಪ್ರಮುಖ ಮೈಲಿಗಲ್ಲನ್ನು ತಲುಪಿದ್ದು, ಮುಂದಿನ ವರ್ಷ ದೇಶದ ಮೊದಲ ಬುಲೆಟ್ ಟ್ರೈನಿನ ಪ್ರಾಯೋಗಿಕ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.

ದೇಶದ ಮೊದಲ ಹೈಸ್ಪೀಡ್ ರೈಲು 2027ರ ಮೇ ಅಥವಾ ಜೂನ್‌ನಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ದೃಢಪಡಿಸಿದ್ದಾರೆ.

ಮುಂಬೈ-ಅಹಮದಾಬಾದ್ ಕಾರಿಡಾರ್‌ನ ಒಂದು ಭಾಗದಲ್ಲಿ ಪ್ರಾಯೋಗಿಕ ಸಂಚಾರ ನಡೆಯಲಿದೆ, ಅಲ್ಲಿ ನಿರ್ಮಾಣ ಕಾರ್ಯಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಪ್ರಾಯೋಗಿ ಪರೀಕ್ಷೆ ಮುಗಿದ ನಂತರ, ರೈಲು ಸೇವೆಯನ್ನು ಎರಡರಿಂದ ನಾಲ್ಕು ತಿಂಗಳೊಳಗೆ ಪ್ರಯಾಣಿಕರಿಗೆ ಮುಕ್ತಗೊಳಿಸಲಾಗುತ್ತದೆ.

Railways displays image of India's first proposed bullet train
ಭಾರತದ ಮೊದಲ ಬುಲೆಟ್ ಟ್ರೈನ್ ಶೀಘ್ರದಲ್ಲೇ ಆರಂಭ: ಪ್ರಧಾನಿ ಮೋದಿ

ವಡೋದರಾದಲ್ಲಿ ನಡೆದ "ನಮೋ ಫಾರ್ ವಿಕಸಿತ್ ಭಾರತ್" ಕಾರ್ಯಕ್ರಮದಲ್ಲಿ ಮಾತನಾಡಿದ ವೈಷ್ಣವ್, ಹೈಸ್ಪೀಡ್ ರೈಲಿನ ಮೊದಲ ಬಾಡಿ ಫ್ರೇಮ್ ಅನ್ನು ಇದೀಗ ಪೂರ್ಣಗೊಳಿಸಲಾಗಿದೆ ಮತ್ತು ಸ್ಕ್ವೀಜ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದು ಕೋಚ್‌ಗಳ ರಚನಾತ್ಮಕ ಬಲವನ್ನು ಪರಿಶೀಲಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.

"ಮುಂದಿನ ವರ್ಷ ಮೇ ಅಥವಾ ಜೂನ್ ವೇಳೆಗೆ, ಭಾರತದ ಬುಲೆಟ್ ರೈಲು ಪ್ರಾಯೋಗಿಕ ಪರೀಕ್ಷೆಗೆ ಹಳಿಗಳ ಮೇಲೆ ಬರಲಿದೆ. 2-4 ತಿಂಗಳ ಪರೀಕ್ಷೆಯ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ಬುಲೆಟ್ ರೈಲನ್ನು ಉದ್ಘಾಟಿಸಲಿದ್ದಾರೆ" ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.

ಮುಂಬೈನಿಂದ ಅಹಮದಾಬಾದ್‌ಗೆ ಕೇವಲ 90 ನಿಮಿಷ

ಬುಲೆಟ್‌ ರೈಲು ಸೇವೆ ಆರಂಭವಾದ ಬಳಿಕ ಅಹಮದಾಬಾದ್ ನಿಂದ ಮುಂಬೈಗೆ ಪ್ರಯಾಣಿಸಲು ಸುಮಾರು 1 ಗಂಟೆ 30 ನಿಮಿಷ ಮಾತ್ರ ಬೇಕಾಗಲಿದೆ. ಈ ಯೋಜನೆ ‘ಆತ್ಮನಿರ್ಭರ ಭಾರತ’ದ ದೃಷ್ಟಿಕೋನಕ್ಕೆ ಅನುಗುಣವಾಗಿ ದೇಶದಲ್ಲೇ ಹೈಸ್ಪೀಡ್‌ ರೈಲು ನಿರ್ಮಾಣ ಸಾಮರ್ಥ್ಯ ಅಭಿವೃದ್ಧಿಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಮತ್ತೊಂದು ಕಡೆ ಮುಂಬೈ–ಅಹಮದಾಬಾದ್‌ ಹೈಸ್ಪೀಡ್‌ ರೈಲು ಕಾರಿಡಾರ್‌ನ ಕಾಮಗಾರಿಯೂ ವೇಗವಾಗಿ ಸಾಗುತ್ತಿದೆ. ಸೂರತ್–ವಾಪಿ ವಿಭಾಗದ ಕಾಮಗಾರಿ ಈ ವರ್ಷದ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ. ಸೂರತ್–ಬಿಲಿಮೋರಾ ವಿಭಾಗವನ್ನು ಮುಂದಿನ ವರ್ಷ ಮೊದಲ ಕಾರ್ಯಾಚರಣಾ ವಿಭಾಗವಾಗಿ ಆರಂಭಿಸುವ ಗುರಿಯೂ ಇದೆ ಎಂದಿದ್ದಾರೆ.

ಒಟ್ಟು 508 ಕಿ.ಮೀ. ಉದ್ದದ ಮುಂಬೈ–ಅಹಮದಾಬಾದ್‌ ಹೈಸ್ಪೀಡ್‌ ರೈಲು ಕಾರಿಡಾರ್ ಮಹಾರಾಷ್ಟ್ರ, ಗುಜರಾತ್ ಹಾಗೂ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್–ದಿಯು ಪ್ರದೇಶದ ಮೂಲಕ ಸಾಗಲಿದೆ. ಮುಂಬೈ, ಥಾಣೆ, ವಿರಾರ್, ಬೋಯಿಸರ್, ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರ, ಆನಂದ, ಅಹಮದಾಬಾದ್ ಮತ್ತು ಸಬರಮತಿ ಸೇರಿದಂತೆ 12 ನಿಲ್ದಾಣಗಳನ್ನು ಹೊಂದಲಿದೆ. ಯೋಜನೆಗೆ ಜಪಾನ್‌ನ ತಂತ್ರಜ್ಞಾನ ಮತ್ತು ಸಹಕಾರವೂ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com