ದುರ್ಗಾಪೂಜೆ ವೇಳೆ 'ಬಂಗಾಳಿಗಳು ಮೀನು, ಮಟನ್ ತಿನ್ನುತ್ತಾರೆ': ಬಾಗೇಶ್ವರ ಬಾಬಾಗೆ ಟಕ್ಕರ್ ಕೊಟ್ಟ ಬಿಜೆಪಿ ನಾಯಕರು!

ಪಶ್ಚಿಮ ಬಂಗಾಳದ ಜನರು ಏನು ತಿನ್ನಬೇಕು ಅಥವಾ ಧರಿಸಬೇಕು ಎಂಬುದನ್ನು ಯಾವುದೇ ಧಾರ್ಮಿಕ ವ್ಯಕ್ತಿ ಅಥವಾ ರಾಜಕೀಯ ಪಕ್ಷ ನಿರ್ಧರಿಸಲು ಸಾಧ್ಯವಿಲ್ಲ. ಆಹಾರದ ಆಯ್ಕೆಯು ವೈಯಕ್ತಿಕ ಸ್ವಾತಂತ್ರ್ಯದ ವಿಷಯ. "ನಾವು ತಿನ್ನುವುದನ್ನೇ ತಿನ್ನುತ್ತೇವೆ ಎಂದು ಭಟ್ಟಾಚಾರ್ಯ ಹೇಳಿದ್ದರು.
Bageshwar Baba, Samik Bhattacharya
ಬಾಗೇಶ್ವರ ಬಾಬಾ, ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ
Updated on

ಕೊಲ್ಕತ್ತಾ: ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರ ತ್ಯಜಿಸುವಂತೆ ಬಾಗೇಶ್ವರ್ ಧಾಮ್ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ಬಂಗಾಳಿಗಳಿಗೆ ನೀಡಿದ್ದ ಕರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯರ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಇದೀಗ ಅವರಿಗೆ ಪಕ್ಷದ ಇತರ ನಾಯಕರೂ ಬೆಂಬಲ ಸೂಚಿಸುತ್ತಿದ್ದಾರೆ.

ಪಶ್ಚಿಮ ಬಂಗಾಳದ ಜನರು ಏನು ತಿನ್ನಬೇಕು ಅಥವಾ ಧರಿಸಬೇಕು ಎಂಬುದನ್ನು ಯಾವುದೇ ಧಾರ್ಮಿಕ ವ್ಯಕ್ತಿ ಅಥವಾ ರಾಜಕೀಯ ಪಕ್ಷ ನಿರ್ಧರಿಸಲು ಸಾಧ್ಯವಿಲ್ಲ. ಆಹಾರದ ಆಯ್ಕೆಯು ವೈಯಕ್ತಿಕ ಸ್ವಾತಂತ್ರ್ಯದ ವಿಷಯ. "ನಾವು ತಿನ್ನುವುದನ್ನೇ ತಿನ್ನುತ್ತೇವೆ ಎಂದು ಭಟ್ಟಾಚಾರ್ಯ ಹೇಳಿದ್ದರು.

"ಒಬ್ಬ ವ್ಯಕ್ತಿ ಏನು ತಿನ್ನಬೇಕು ಅಥವಾ ಧರಿಸಬೇಕು ಎಂಬುದು ಅವರ ವೈಯಕ್ತಿಕ ಆಯ್ಕೆ. ಬಂಗಾಳದ ಆಹಾರ ಸಂಸ್ಕೃತಿಯು ವೈವಿಧ್ಯಮಯವಾಗಿದೆ ಮತ್ತು ಪ್ರತಿಯೊಬ್ಬರಿಗೂ ತಮ್ಮದೇ ಆದ ಆದ್ಯತೆಗಳನ್ನು ಅನುಸರಿಸುವ ಸ್ವಾತಂತ್ರ್ಯವಿದೆ. ಬಂಗಾಳಿಗಳು ಮೀನು ಅಥವಾ ಮಟನ್ ತಿನ್ನಬಾರದೇ? ಸ್ವಾಮಿ ವಿವೇಕಾನಂದರೂ ಇದನ್ನು ಒಪ್ಪಿಕೊಂಡಿದ್ದರು. ನೀವು ಏನು ತಿನ್ನಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಯಾವುದೇ ಸ್ವಾಮೀಜಿ, ನಾಯಕರು ಅಥವಾ ಇತರ ಯಾರಿಗೂ ಇಲ್ಲ. ವೈಯಕ್ತಿಕ ಆಯ್ಕೆಯು ವೈಯಕ್ತಿಕವಾಗಿಯೇ ಉಳಿಯಬೇಕು ಎಂದು ಭಟ್ಟಾಚಾರ್ಯ ಹೇಳಿದರು.

ಇತ್ತೀಚೆಗೆ ಹೌರಾಗೆ ಭೇಟಿ ನೀಡಿದ್ದ ಶಾಸ್ತ್ರಿ (ಇವರು 'ಬಾಗೇಶ್ವರ ಬಾಬಾ' ಎಂದೇ ಜನಪ್ರಿಯರು) ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರವನ್ನು ತ್ಯಜಿಸುವಂತೆ ಜನರಿಗೆ ಮನವಿ ಮಾಡಿದ್ದರು. ಅಲ್ಲದೆ, ಹಬ್ಬದ ಸಮಯದಲ್ಲಿ ಮಾಂಸಾಹಾರ ಸೇವಿಸುವವರನ್ನು 'ಪಾಖಂಡಿಗಳು' (ಢೋಂಗಿಗಳು) ಎಂದು ಕರೆದಿದ್ದರು.

ಭಟ್ಟಾಚಾರ್ಯರ ಹೇಳಿಕೆಯ ಮರುದಿನವೇ ಪಶ್ಚಿಮ ಬಂಗಾಳದ ಸಚಿವೆ ಹಾಗೂ ಬಿಜೆಪಿ ನಾಯಕಿ ಅಗ್ನಿಮಿತ್ರಾ ಪಾಲ್ ಕೂಡ ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವನೆಯನ್ನು ಬೆಂಬಲಿಸಿದರು. ಬಂಗಾಳಿಗಳು ತಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ಅನುಸರಿಸಲು ಸ್ವತಂತ್ರರಾಗಿರಬೇಕು ಎಂದು ಅವರು ಹೇಳಿದ್ದಾರೆ.

ಖ್ಯಾತ ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ ಕೂಡ ಶಾಸ್ತ್ರಿಯವರ ಹೆಸರನ್ನು ಪ್ರಸ್ತಾಪಿಸದೆ ಈ ವಿವಾದದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು,"ದುರ್ಗಾ ಪೂಜೆಯ ನವಮಿ ಅಥವಾ ದಶಮಿಯಂದು ಭಕ್ತರು ಸೇವಿಸುವ ಪ್ರಸಾದವು ಮಾಂಸವಾಗಿರುತ್ತದೆ. ಈ ಪವಿತ್ರ ಆಚರಣೆಯಲ್ಲಿ ಯಾವುದೇ ಹಸ್ತಕ್ಷೇಪವನ್ನು ಸಹಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಅನೇಕ ಬಂಗಾಳಿ ಕುಟುಂಬಗಳಲ್ಲಿ ದುರ್ಗಾ ಪೂಜೆಯು ಕೇವಲ ಧಾರ್ಮಿಕ ವಿಧಿವಿಧಾನಗಳಿಗಷ್ಟೇ ಅಲ್ಲದೆ, ವೈವಿಧ್ಯಮಯ ಹಾಗೂ ಭವ್ಯವಾದ ಭೋಜನಕ್ಕೂ ಸಂಬಂಧಿಸಿದೆ.

Bageshwar Baba, Samik Bhattacharya
'ನಾವೇನು ತಿನ್ನಬೇಕು-ಬೇಡ ಎಂದು ಹೇಳುವ ಹಕ್ಕಿಲ್ಲ': ದುರ್ಗಾ ಪೂಜೆ ವೇಳೆ ಮಾಂಸಾಹಾರ ತ್ಯಜಿಸುವ ಕರೆಗೆ ಬಂಗಾಳ ಬಿಜೆಪಿ ಮುಖ್ಯಸ್ಥ!

ಕುಟುಂಬಗಳು ಮತ್ತು ಸಮುದಾಯಗಳ ನಡುವೆ ಆಹಾರ ಪದ್ಧತಿಗಳಲ್ಲಿ ವ್ಯತ್ಯಾಸಗಳಿದ್ದರೂ, ಮಟನ್, ಮೀನು ಮತ್ತು ಸೀಗಡಿಗಳಂತಹ ಮಾಂಸಾಹಾರಿ ಖಾದ್ಯಗಳು ಬಂಗಾಳಿ ಆಹಾರ ಸಂಸ್ಕೃತಿಯ ಪ್ರಮುಖ ಭಾಗವಾಗಿವೆ. ಕಾಳಿ ದೇವಿಗೆ ಮಾಂಸವನ್ನು ಅರ್ಪಿಸುವುದು ದೀರ್ಘಕಾಲದ ಸಂಪ್ರದಾಯವಾಗಿದೆ ಎಂದು ಹೇಳುವ ಮೂಲಕ ರಾಜ್ಯ ಸಚಿವ ದಿಲೀಪ್ ಘೋಷ್ ಕೂಡ ಭಟ್ಟಾಚಾರ್ಯರ ಹೇಳಿಕೆಯನ್ನು ಸಮರ್ಥಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com