ಮೃತದೇಹಗಳ ಮೇಲೆ ರಾಜಕೀಯ ಮಾಡಬೇಡಿ: ರಾಹುಲ್ ಗಾಂಧಿ ವಿರುದ್ಧ ಭಗವಂತ್ ಮಾನ್ ಕಿಡಿ

ಪಂಜಾಬ್‌ನ ಸಂಗ್ರೂರ್‌ನಲ್ಲಿ ಗುಲ್ಜರ್ ಸಿಂಗ್ ಆತ್ಮಹತ್ಯೆ ಈಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಎಎಪಿ ಸರ್ಕಾರ ನಿರ್ವಹಿಸಿದ ರೀತಿ ಬಗ್ಗೆ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದು ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ರಾಜೀನಾಮೆಗೆ ಒತ್ತಾಯಿಸಿದರು.
Rahul Gandhi, Bhagwant Mann
ರಾಹುಲ್ ಗಾಂಧಿ, ಭಗವಂತ್ ಮಾನ್
Updated on

ಪಂಜಾಬ್‌ನ ಸಂಗ್ರೂರ್‌ನಲ್ಲಿ ಗುಲ್ಜರ್ ಸಿಂಗ್ ಆತ್ಮಹತ್ಯೆ ಈಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಎಎಪಿ ಸರ್ಕಾರ ನಿರ್ವಹಿಸಿದ ರೀತಿ ಬಗ್ಗೆ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದು ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ರಾಜೀನಾಮೆಗೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಂಜಾಬ್ ಸಿಎಂ ಭಗವಂತ್ ಮಾನ್, ರಾಹುಲ್ ಗಾಂಧಿಗೆ ಮೃತ ದೇಹಗಳ ಮೇಲೆ ಕೊಳಕು ರಾಜಕೀಯ ಮಾಡಬೇಡಿ ಎಂದು ಹೇಳಿದ್ದಾರೆ.

ಸಂಗ್ರೂರ್‌ನ ತೂರ್ ಬಂಜಾರ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಕಾರ್ಯಕ್ರಮವೊಂದರಲ್ಲಿ ಗುಲ್ಜರ್ ಸಿಂಗ್ ನನ್ನು ಮಾದಕವ್ಯಸನಿ ಗ್ರಾಮಸ್ಥರು ಆರೋಪಿಸಿದ್ದರು. ಅಲ್ಲದೆ ಗುಲ್ಜರ್ ನನ್ನು ಕ್ಷಮೆಯಾಚಿಸುವಂತೆ ಒತ್ತಡ ಹೇರಿದ್ದರು ಎಂದು ಕುಟುಂಬ ಆರೋಪಿಸಿದೆ. ಇದರಿಂದ ಮನನೊಂದು ಗುಲ್ಜರ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದನು. ಅವರ ಮಗ ಲಖ್ವಿಂದರ್ ಸಿಂಗ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಗ್ರಾಮದ ಮುಖ್ಯಸ್ಥೆ ಬಲ್ಜಿಂದರ್ ಕೌರ್ ಮತ್ತು ಆಕೆಯ ಪತಿ ಬಲ್ಜಿತ್ ಸಿಂಗ್ ಸೇರಿದಂತೆ ಐದು ಜನರ ಹೆಸರುಗಳಿವೆ. ಅವರೆಲ್ಲರ ಮೇಲೆ ಆತ್ಮಹತ್ಯೆಗೆ ಪ್ರಚೋದನೆ, ಕಿರುಕುಳ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ. ಪ್ರಸ್ತುತ, ಪೊಲೀಸರು ಐವರನ್ನೂ ಬಂಧಿಸಿದ್ದಾರೆ.

Rahul Gandhi, Bhagwant Mann
ಮುಸ್ಲಿಮರನ್ನು ಗರ್ಭಾ-ದಾಂಡಿಯಾ ಕಾರ್ಯಕ್ರಮಗಳಿಂದ ದೂರವಿಡಿ: VHP ಕರೆಗೆ ಅಮೃತಾ ಫಡ್ನವೀಸ್ ವಿರೋಧ!

ರಾಹುಲ್ ಗಾಂಧಿಯವರ ಆರೋಪಗಳಿಗೆ ಮುಖ್ಯಮಂತ್ರಿ ಭಗವಂತ್ ಮಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಪಂಜಾಬ್‌ನ ಜನರು "ಶವಗಳ ಮೇಲೆ ಕೊಳಕು ರಾಜಕೀಯ" ಇಷ್ಟಪಡುವುದಿಲ್ಲ ಎಂದು ಅವರು ಹೇಳಿದರು. ಪ್ರಕರಣದಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಮತ್ತು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾನ್ ಹೇಳಿದರು. ಈ ವಿಷಯದ ಬಗ್ಗೆ ಸಂಪೂರ್ಣ ಅರಿವಿಲ್ಲದೆ ರಾಹುಲ್ ಗಾಂಧಿ ಆರೋಪಗಳನ್ನು ಮಾಡಬಾರದು ಎಂದು ಎಎಪಿ ಹೇಳಿದೆ.

ಕಾಂಗ್ರೆಸ್ ನಾಯಕರು ಮೃತರ ಮನೆಗಳಿಗೆ ಹೋಗಿ ಈ ಕೊಳಕು ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿದಾಗ, ಜನರು ಅವರನ್ನು ಅಲ್ಲಿಂದ ಓಡಿಸಿದರು. ಈ ಪ್ರಕರಣದಲ್ಲಿ, ಕುಟುಂಬದ ಗುರುತಿನ ಆಧಾರದ ಮೇಲೆ ಎಲ್ಲಾ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪಂಜಾಬ್‌ನಲ್ಲಿ ಮಾದಕ ದ್ರವ್ಯಗಳನ್ನು ಹರಡಲು ಅಕಾಲಿ, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಕಾರಣವಾಗಿವೆ. ನನ್ನ ಸರ್ಕಾರದಲ್ಲಿ, ಯಾವುದೇ ಮಾದಕ ದ್ರವ್ಯ ಕಳ್ಳಸಾಗಣೆದಾರರನ್ನು ಬಿಡಲಾಗುವುದಿಲ್ಲ ಎಂದು ಮಾನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com